HEALTH TIPS

ದೇಶದ ಅಗತ್ಯತೆಗೆ ಪೂರಕವಾದ ಚಿಂತನೆಯನ್ನು ಬೆಳೆಸಿಕೊಳ್ಳಬೇಕು: ಸಹಕಾರ ಭಾರತಿ ಕಾಸರಗೋಡು ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ


             ಬದಿಯಡ್ಕ: ಸಂಘಟನೆಗಾಗಿ ನಮ್ಮ ಸೇವೆಯನ್ನು ನೀಡಿದಾಗ ಸಂಘಟನಾ ಶಕ್ತಿಬಲಗೊಳ್ಳುತ್ತದೆ. ತನ್ಮೂಲಕ ಸಮಾಜದಲ್ಲಿ ಬದಲಾವಣೆಯನ್ನು ತಂದು ದೇಶದ ಒಟ್ಟು ಅಗತ್ಯತೆಗೆ ಪೂರಕವಾಗಿ ಕೆಲಸಮಾಡುವ ಚಿಂತನೆಯನ್ನು ಬೆಳೆಸಿಕೊಳ್ಳಬೇಕು. ತಮ್ಮ ಕರ್ತವ್ಯಗಳನ್ನು ಸಮರ್ಥವಾಗಿ ನಿಭಾಯಿಸುವುದರೊಂದಿಗೆ ಜನರ ವಿಶ್ವಾಸವನ್ನು ಉಳಿಸಿಕೊಳ್ಳಬೇಕು ಎಂದು ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಹೇಳಿದರು.
        ಭಾನುವಾರ ಬೆಳಗ್ಗೆ ನೀರ್ಚಾಲು ಮಹಾಜನ ಸಂಸ್ಕøತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಸಹಕಾರ ಭಾರತಿಯ ಕಾಸರಗೋಡು ಜಿಲ್ಲಾ ಸಮಿತಿಯ ಆಶ್ರಯದಲ್ಲಿ ಜಿಲ್ಲೆಯ ಸಹಕಾರಿ ಸಂಸ್ಥೆಗಳ ನಿರ್ದೇಶಕರ, ಸಹಕಾರಿ ನೌಕರರ ಮತ್ತು ಸಂಘಟನೆಯ ಕಾರ್ಯಕರ್ತರ ಸಮ್ಮೇಳನವನ್ನು ದೀಪಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.



    ಸೇವಾಮನೋಭಾವದಿಂದ ದುಡಿದು ನಾಡಿನ ಜನತೆಗೆ ನೆರವಾಗುವುದರೊಂದಿಗೆ ದೇಶಕಟ್ಟುವಲ್ಲಿ ಕೈಜೋಡಿಸಬೇಕು. ಸಂಘಟನೆಗೆ ನಾವು ತನು ಮನ ಧನಗಳಿಂದ ಸಹಕಾರವನ್ನು ನೀಡಿ ಸಂಪೂರ್ಣವಾಗಿ ತೊಡಗಿಸಿಕೊಂಡಾಗ ಸಂಘಟನೆಗೂ ನಮಗೂ ಗೌರವ ಲಭಿಸುತ್ತದೆ. ಸಹಕಾರಿ ರಂಗದಲ್ಲಿ ಸಹಕಾರ ಭಾರತಿಯಿಂದ ನೇಮಿತರಾದ ನಿರ್ದೇಶಕರು ಪ್ರಾಮಾಣಿಕವಾದ ಸೇವೆಸಲ್ಲಿಸುವ ಕೆಲಸವನ್ನು ಮಾಡುತ್ತಿದ್ದಾರೆ. ನಿಸ್ವಾರ್ಥಸೇವೆ, ಪ್ರಾಮಾಣಿಕತೆ ಮತ್ತು ಜನರೊಂದಿಗಿನ ಸಹಕಾರದಿಂದ ಪ್ರೀತಿಯ ಭಾವನೆಯನ್ನು ಬೆಳೆಸಿಕೊಳ್ಳಲು ಇಂತಹ ಅಭ್ಯಾಸವರ್ಗಗಳು ಸಹಕಾರಿಯಾಗುತ್ತದೆ. ಸಂಘದ ಧ್ಯೇಯೋದ್ದೇಶಗಳನ್ನು ಸಾಕಾರಗೊಳಿಸುವ ಕಾರ್ಯಕರ್ತರಿರಬೇಕು. ದೇಶಕ್ಕಾಗಿ ಸಮಾಜಕ್ಕಾಗಿ ನಾನು ಏನು ಮಾಡಿದ್ದೇನೆ?, ಮಾಡುತ್ತೇನೆ ಎಂಬುದಾಗಿ ಆತ್ಮವಿಮರ್ಷೆಮಾಡಿಕೊಳುವುದರೊಂದಿಗೆ ಸಹಕಾರ ಭಾರತಿಯ ಚಿಂತನೆಗೊಳಪಟ್ಟ ಕೆಲಸದಲ್ಲಿ ನಾವು ತೊಡಗಿಸಿಕೊಳ್ಳಬೇಕು ಎಂದರು.
           ಕೇರಳ ಸರ್ಕಾರದ ನಿವೃತ್ತ ಕಾರ್ಯದರ್ಶಿ ಐಎಎಸ್ ಕೆ.ಗೋಪಾಲಕೃಷ್ಣ ಭಟ್ ಎಡನೀರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ಹಿಂದಿನ ಕಷ್ಟಕಾಲದಲ್ಲಿ ಪರಸ್ಪರ ಸಹಕಾರವನ್ನು ನೀಡುತ್ತಾ ಹುಟ್ಟಿಕೊಂಡ ಸಂಸ್ಥೆಯು ಇಂದು ದೇಶದಾದ್ಯಂತ ಹರಸಿಕೊಂಡಿದೆ. ಸಂಘಟನೆಯ ಮೂಲಕ ಸಮಾಜದ ಮೇಲಿರುವ ನಮ್ಮ ಕರ್ತವ್ಯವನ್ನು ಸಾಕಾರಗೊಳಿಸಬೇಕು. ಅಭ್ಯಾಸವರ್ಗಗಳಲ್ಲಿ ಪಾಲ್ಗೊಳ್ಳುವುದರಿಂದ ಬದಲಾವಣೆಗಳನ್ನು ಮನನಮಾಡಿಕೊಳ್ಳಲು ಸಾಧವಿದೆ. ಜನರ ನಂಬಿಕೆಯನ್ನು ಉಳಿಸಿಕೊಳ್ಳುವ ಮೂಲಕ ನಮ್ಮ ಉದ್ದೇಶವನ್ನು ಈಡೇರಿಕೊಳ್ಳಬೇಕು ಎಂದ ಅವರು, ಸಹಕಾರಿ ತತ್ವಗಳ ಕುರಿತು ವಿವರಿಸಿದರು. ಸಮಾಜದ ಪ್ರತಿಯೊಂದು ಸ್ಥರದಲ್ಲಿಯೂ ಸಹಕಾರೀ ಸಂಸ್ಥೆಗಳನ್ನು ನಾವು ಕಾಣಬಹುದಾಗಿದೆ. ಉದ್ದೇಶ, ಧ್ಯೇಯ, ಸಾಧನೆಯ ಹಿಂದೆ ರಾಜಕೀಯವನ್ನು ಮರೆತು ಒಗ್ಗಟ್ಟಿನಿಂದ ಮುಂದುವರಿದರೆ ಮಾತ್ರ ನಮ್ಮ ಆಶಯಗಳನ್ನು ಈಡೇರಿಸಬಹುದಾಗಿದೆ ಎಂದರು.
          ಸಹಕಾರ ಭಾರತಿ ಕೇರಳ ರಾಜ್ಯ ಅಧ್ಯಕ್ಷ ಪಿ. ಸುಧಾಕರನ್ ಮುಖ್ಯ ಭಾಷಣಕಾರರಾಗಿ ಮಾತನಾಡಿ ಕಾಸರಗೋಡು ಜಿಲ್ಲೆಯಲ್ಲಿ ಸಹಕಾರ ಭಾರತಿಯ ಕುರಿತು ಮೆಚ್ಚುಗೆಯನ್ನು ವ್ಯಕ್ತಪಡಿಸಿ ಇನ್ನೂ ಅನೇಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಕರೆನೀಡಿದರು. ಸಹಕಾರ ಭಾರತಿಯ ಕಾಸರಗೋಡು ಜಿಲ್ಲಾ ಅಧ್ಯಕ್ಷ ಗಣೇಶ್ ಪಾರೆಕಟ್ಟ ಅಧ್ಯಕ್ಷತೆ ವಹಿಸಿದ್ದರು. ಅಖಿಲ ಭಾರತ ಸಮಿತಿ ಸದಸ್ಯ ವಕೀಲ ಕೆ. ಕರುಣಾಕರನ್ ನಂಬ್ಯಾರ್, ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ.ಆರ್.ಕಣ್ಣನ್, ರಾಜ್ಯ ಉಪಾಧ್ಯಕ್ಷ ಐತ್ತಪ್ಪ ಮವ್ವಾರು, ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ಮೋಹನಚಂದ್ರನ್, ಜಿಲ್ಲಾ ಕಾರ್ಯದರ್ಶಿ ವಿಘ್ನೇಶ್ವರ ಕೆದುಕೋಡಿ, ಎಂಪ್ಲೋಯೀಸ್ ಸೆಲ್ ಕಾಸರಗೋಡು ಜಿಲ್ಲಾ ಅಧ್ಯಕ್ಷ ರಾಧಾಕೃಷ್ಣನ್ ಕೆ., ಸಂಘಟಕ ಸಮಿತಿ ಅಧ್ಯಕ್ಷ ಜಯದೇವ ಖಂಡಿಗೆ, ಸಂಘಟನಾ ಕಾರ್ಯದರ್ಶಿ ಶಂಕರನಾರಾಯಣ ಭಟ್ ಕಿದೂರು ಪಾಲ್ಗೊಂಡು ಮಾತನಾಡಿದರು. ಸಂಚಾಲಕ ಪದ್ಮರಾಜ ಪಟ್ಟಾಜೆ ಸ್ವಾಗತಿಸಿ, ಜಿಲ್ಲಾ ಜೊತೆಕಾರ್ಯದರ್ಶಿ ವೇಣುಗೋಪಾಲನ್ ಕೆ.ಎನ್. ವಂದಿಸಿದರು. ಸಂಘಟಕ ಸಮಿತಿ ಸಹಸಂಚಾಲಕ ಅಶೋಕ ಬಾಡೂರು ನಿರೂಪಿಸಿದರು.


 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries