HEALTH TIPS

ವಿಶ್ವ ಕ್ಷಯರೋಗ ದಿನ: ಈ ಲಕ್ಷಣಗಳು ಕಂಡು ಬಂದರೆ ತುಂಬಾನೇ ಅಪಾಯಕಾರಿ

 ಮಾರ್ಚ್‌ 24ನ್ನು ವಿಶ್ವ ಕ್ಷಯ ರೋಗ ದಿನವನ್ನಾಗಿ ಆಚರಿಸಲಾಗುವುದು. ಕ್ಷಯ ರೋಗದ ಕುರಿತು ಜನರಲ್ಲಿ ಅರಿವು ಮೂಡಿಸಿ, ಕ್ಷಯ ರೋಗ ಮುಕ್ತರನ್ನಾಗಿಸಲು ಈ ದಿನವನ್ನು ಆಚರಿಸಲಾಗುವುದು.

ಈ ಕ್ಷಯ ರೋಗ ಹಲವು ಹಂತಗಳಲ್ಲಿ ಮನುಷ್ಯನನ್ನು ಕಾಡುವುದು. ಯಾವಾಗ ತುಂಬಾನೇ ಅಪಾಯಾರಿ, ಇದರ ಯಾವ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಬಾರದು ಎಂದು ನೋಡೋಣ ಬನ್ನಿ:

ಟಿಬಿ ಮೊದಲ ಹಂತ

ಪಿರಿಯಡ್ಸ್ ರಜೆ ವಿದ್ಯಾರ್ಥಿನಿಯರಿಗೆ ಮಾತ್ರ ಅಲ್ಲ ಆಫೀಸ್‌ನಲ್ಲಿ ಕೆಲಸ ಮಾಡೋ ಮಹಿಳೆಯರಿಗೂ ಬೇಕು... ಈ ಹಂತದಲ್ಲಿ ನಮ್ಮ ದೇಹದ ರೋಗ ನಿರೋಧಕ ವ್ಯವಸ್ಥೆ ಸೋಂಕಾಣುಗಳನ್ನು ಸಂಪೂರ್ಣ ನಾಶಪಡಿಸಲು ಹೋರಾಡುತ್ತದೆ, ಆದರೂ ಕೆಲವೊಂದು ಸೋಂಕಾಣುಗಳು ಉಳಿಯುತ್ತದೆ. ಆಗ ಈ ಲಕ್ಷಣಗಳು ಕಂಡು ಬರುವುದು 
* ಜ್ವರ ಬರುವುದು 
* ಸುಸ್ತು 
* ಕೆಮ್ಮು

ನಂತರ ಹಂತ ಲ್ಯಾಟೆಂಟ್‌ ಟಿಬಿ ಸೋಂಕು:

ಈ ಹಂತದಲ್ಲಿ ಮನುಷ್ಯರ ಶ್ವಾಸಕೋಶದ ಅಂಗಾಂಶದ ಸುತ್ತ ರೋಗ ನಿರೋಧಕ ಕಣಗಳು ಗೋಡೆಯ ರೀತಿಯಲ್ಲಿ ರೂಪುಗೊಳ್ಳುತ್ತದೆ. ಈ ಹಂತದಲ್ಲಿ ಯಾವುದೇ ಲಕ್ಷಣ ಕಂಡು ಬರುವುದಿಲ್ಲ

ಟಿಬಿ ಲಕ್ಷಣಗಳು ಯಾವಾಗ ಕಂಡು ಬರುವುದು?

ನಮ್ಮ ದೇಹದ ರೋಗ ನಿರೋಧಕ ವ್ಯವಸ್ಥೆ ಸೋಂಕನ್ನು ತಡೆಗಟ್ಟಲು ಅಸಮರ್ಥವಾದಾಗ ಸೋಂಕಾಣುಗಳು ಶ್ವಾಸಕೋಶವನ್ನು ತಲುಪಿ ದೇಹದ ಇತರ ಭಾಗಗಳನ್ನುತಲುಪುವುದು. ಈ ಬಗೆ ಸೋಂಕು ಮೊದಲ ಹಂತದಲ್ಲಿ ಟಿಬಿ ಸೋಂಕಿದ ಕೆಲವೇ ದಿನಗಳಲ್ಲಿ ಕಂಡು ಬರಹುದು ಅಥವಾ ಕೆಲವು ತಿಂಗಳಾದ ಬಳಿಕ ಕಂಡು ಬರಬಹುದು.

ಟಿಬಿಯ ಈ ಲಕ್ಷಣಗಳು ವಾರದಿಂದ ವಾರಕ್ಕೆ ಹೆಚ್ಚಾಗುತ್ತಲೇ ಹೋಗುತ್ತದೆ

* ಕೆಮ್ಮು
* ಕಫದಲ್ಲಿ ರಕ್ತ
* ಎದೆನೋವು
* ಉಸಿರಾಡುವಾಗ, ಕೆಮ್ಮುವಾಗ ಎದೆನೋವು
* ಚಳಿಜ್ವರ
* ರಾತ್ರಿಯಲ್ಲಿ ಮೈ ಬೆವರುವುದು
* ತೂಕ ಇಳಿಕೆ
* ಹಸಿವು ಇಲ್ಲದಿರುವುದು
* ತುಂಬಾ ಸುಸ್ತು

ಶ್ವಾಸಕೋಶವಲ್ಲದೆ ಟಿವಿ ದೇಹದ ಯಾವ ಭಾಗಳಿಗೆಲ್ಲಾ ಹಾನಿ ಮಾಡುತ್ತದೆ?

* ಕಿಡ್ನಿ
* ಲಿವರ್
* ಮೆದುಳು
* ಹೃದಯದ ಸ್ನಾಯುಗಳು
* ಜನನೇಂದ್ರೀಯ
* ಮೂಳೆ

* ತ್ವಚೆ
* ರಕ್ತನಾಳಗಳ ಪದರಗಳಿಗೆ
* ಧ್ವನಿ ಪೆಟ್ಟಿಗೆ

ಇವುಗಳಿಗೆ ಹಾನಿಯುಂಟು ಮಾಡುತ್ತದೆ

ಈ ಬಗೆಯ ಲಕ್ಷಣಗಳು ಕಂಡು ಬಂದರೆ ತುರ್ತು ಚಿಕಿತ್ಸೆಯ ಅಗ್ಯತವಿರುತ್ತದೆ

* ಎದೆನೋವು
* ಇದ್ದಕ್ಕಿದ್ದಂತೆ ಸಹಿಸಲು ಅಸಾಧ್ಯವಾದ ತಲೆನೋವು
* ಪಿಡ್ಸ್ ಬರುವುದು
* ಉಸಿರಾಟದಲ್ಲಿ ತೊಂದರೆ
* ಕೆಮ್ಮಿದಾಗ ಕಫದಲ್ಲಿ ರಕ್ತ ಬಂದರೆ
* ಮೂತ್ರ ಹಾಗೂ ಮಲದಲ್ಲಿ ರಕ್ತ ಕಂಡು ಬಂದರೆ

ಯಾರಿಗೆ ಟಿವಿ ಅಪಾಯ ಅಧಿಕ

* ಟಿಬಿ ರೋಗಿಗಳ ಆರೈಕೆ ಮಾಡುವವರಿಗೆ
* ಟಿಬಿ ಅಧಿಕವಿರುವ ದೇಶಗಳಿಗೆ ಆಗಾಗ ಪ್ರಯಾಣ ಮಾಡುತ್ತಿರುವವರಿಗೆ
* ಜನ ಗುಂಪಾಗಿ ಕೆಲಸ ಮಾಡುವ ಕಡೆ
* ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿರುವವರಿಗೆ

ಯಾವ ಆರೋಗ್ಯ ಸಮಸ್ಯೆ ಇರುವವರಿಗೆ ಟಿಬಿ ಬರುವ ಸಾಧ್ಯತೆ ಇದೆ:

ಏಡ್ಸ್
ಮಧಮೇಹ
ಕಿಡ್ನಿ ಹಾಳಾಗುವುದು
ತಲೆ, ಕುತ್ತಿಗೆ ಭಾಗದಲ್ಲಿ ಕ್ಯಾನ್ಸರ್ ಗಡ್ಡೆ
ಪೋಷಕಾಂಶದ ಕೊರತೆ
ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದರೆ
ಅಂಗಾಂಗ ಕಸಿ ಮಾಡಿಸಿದ್ದರೆ
ತುಂಬಾ ಸಮಯದಿಂದ ಸ್ಟಿರಾಯ್ಡ್ ಸೇವಿಸುತ್ತಿದ್ದರೆ
ಅತ್ಯಧಿಕ ಧೂಮಪಾನ ಮತ್ತು ಮದ್ಯಪಾನ

ಟಿಬಿ ಕಾಯಿಲೆಗೆ ಉಚಿತ ಚಿಕಿತ್ಸೆ

'ಟಿಬಿ ಕಾಯಿಲೆ ಇರುವವರಿಗೆ ಸರ್ಕಾರ ಉಚಿತ ಚಿಕಿತ್ಸೆ ನೀಡುತ್ತಿದೆ ಅಲ್ಲದೆ ಚಿಕಿತ್ಸೆ ಪೂರ್ಣಗೊಳ್ಳುವವರೆಗೆ ಬಡವರಿಗೆ ಆರ್ಥಿಕ ನೆರವು ಕೂಡ ನೀಡುತ್ತಿದೆ.

ಟಿಬಿ ಬಂದರೆ ಚಿಕಿತ್ಸೆ ಪೂರ್ಣಗೊಳಿಸಬೇಕು, ಅರ್ಧಕ್ಕೆ ನಿಲ್ಲಿಸಬಾರದು.

ಟಿಬಿ ಕಾಯಿಲೆ 2-3 ವಾರಗಳ ಈ ರೀತಿ ಮುನ್ನೆಚ್ಚರಿಕೆ ತೆಗೆದುಕೊಂಡರೆ ಇತರರಿಗೆ ಕಾಯಿಲೆ ಹರಡುವುದನ್ನು ತಡೆಗಟ್ಟಬಹುದು.

* ಮನೆಯಲ್ಲಿ ಐಸೋಲೇಟ್ ಆಗಿ
* ಕೋಣೆಯಲ್ಲಿ ಗಾಳಿ, ಬೆಳಕು ಚೆನ್ನಾಗಿರಲಿದೆ
* ಮುಖಕ್ಕೆ ಮಾಸ್ಕ್ ಧರಿಸಿ

ಸಂಪೂರ್ಣ ಗುಣ ಮುಖರಾಗುವವರೆಗೆ ಬೇರೆಯವರ ಜೊತೆ ಮಾತನಾಡುವಾಗ ಮಾಸ್ಕ್‌ ಧರಿಸಿ.

ಟಿಬಿ ಕಾಯಿಲೆ ಬಂದರೆ ಶೇ. 100ರಷ್ಟು ಗುಣಪಡಿಸಬಹುದೇ?

ಹೌದು, ಟಿಬಿ ಕಾಯಿಲೆಗೆ ಸೂಕ್ತ ಚಿಕಿತ್ಸೆ ಪಡೆದರು ಈ ಕಾಯಿಲೆಯಿಂದ ಸಂಪೂರ್ಣ ಗುಣಮುಖರಾಗಿ ಆರೋಗ್ಯಕರ ಜೀವನ ನಡೆಸಬಹುದು.


 

 

 


Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries