HEALTH TIPS

ಎಕ್ಸಿಸ್ ಬ್ಯಾಂಕ್ ನಿಂದ ಸಿಟಿಬ್ಯಾಂಕ್ ವ್ಯವಹಾರಗಳ ಸ್ವಾಧೀನ ಪೂರ್ಣ: ಗ್ರಾಹಕರ ಮೇಲೆ ಇದರ ಪರಿಣಾಮ ಏನು....?

                   ವದೆಹಲಿ: ಸಿಟಿಬ್ಯಾಂಕ್ ನ ಭಾರತದಲ್ಲಿಯ ಗ್ರಾಹಕರ ವಹಿವಾಟುಗಳು ಮತ್ತು ಬ್ಯಾಂಕೇತರ ಹಣಕಾಸು ವ್ಯವಹಾರಗಳ ಸ್ವಾಧೀನ ಪ್ರಕ್ರಿಯೆಯನ್ನು ತಾನು ಪೂರ್ಣಗೊಳಿಸಿರುವುದಾಗಿ ಎಕ್ಸಿಸ್ ಬ್ಯಾಂಕ್ ತಿಳಿಸಿದೆ. ಇದರೊಂದಿಗೆ 2022,ಮಾರ್ಚ್ ನಲ್ಲಿ ಘೋಷಿಸಲಾಗಿದ್ದ 1.41 ಶತಕೋಟಿ ಡಾಲರ್ (11,630 ಕೋಟಿ ರೂ.)ಗಳ ಒಪ್ಪಂದವು ಸಂಪೂರ್ಣವಾಗಿ ಕಾರ್ಯಗತಗೊಂಡಿದೆ.

                      ಇದು ಭಾರತೀಯ ಹಣಕಾಸು ಕ್ಷೇತ್ರದಲ್ಲಿ ಅತಿ ದೊಡ್ಡ ವ್ಯವಹಾರಗಳಲ್ಲಿ ಒಂದಾಗಿದೆ. ಈ ಸ್ವಾಧೀನವು ಐಸಿಐಸಿಐ ಮತ್ತು HDFC ಬ್ಯಾಂಕುಗಳಂತಹ ದೊಡ್ಡ ಬ್ಯಾಂಕುಗಳೊಂದಿಗಿನ ಅಂತರವನ್ನು ಮುಚ್ಚಲು ಎಕ್ಸಿಸ್ ಬ್ಯಾಂಕಿಗೆ ನೆರವಾಗಲಿದೆ.

                 ಸಿಟಿಬ್ಯಾಂಕ್ ನ ಗೃಹ ಮತ್ತು ವೈಯಕ್ತಿಕ ಸಾಲಗಳು, ಕ್ರೆಡಿಟ್ ಕಾರ್ಡ್ ಮತ್ತು ವಿಮೆ ವ್ಯವಹಾರಗಳು ಬುಧವಾರದಿಂದಲೇ ಎಕ್ಸಿಸ್ ಬ್ಯಾಂಕಿನ ನಿಯಂತ್ರಣಕ್ಕೊಳಪಟ್ಟಿವೆ.

                       ಕೆಲವೇ ದಿನಗಳ ಹಿಂದೆ ಸಿಟಿಬ್ಯಾಂಕ್ ತನ್ನ ಹೆಗ್ಗುರುತಾಗಿದ್ದ ಕೋಲ್ಕತಾದ ಚೌರಂಗೀ ರಸ್ತೆಯಲ್ಲಿನ ಕನಕ್ ಬಿಲ್ಡಿಂಗ್ ಕಚೇರಿಯ ನಾಮಫಲಕವನ್ನು ತೆಗೆದಿತ್ತು. ಸಿಟಿಬ್ಯಾಂಕ್ 1902ರಲ್ಲಿ ಇಲ್ಲಿಂದಲೇ ಭಾರತದಲ್ಲಿಯ ತನ್ನ ಕಾರ್ಯಾಚರಣೆಗಳನ್ನು ಆರಂಭಿಸಿತ್ತು.

                            ಎಕ್ಸಿಸ್ ಬ್ಯಾಂಕಿಗೆ ಆಗುವ ಲಾಭವೇನು?

                 ಭಾರತದಲ್ಲಿಯ ಸಿಟಿಬ್ಯಾಂಕಿನ 30 ಲಕ್ಷ ಗ್ರಾಹಕರ ಸ್ವಾಧೀನವು ಪ್ರಮುಖವಾಗಿ ಗುರುತಿಸಲಾದ ಬೆಳವಣಿಗೆ ಕ್ಷೇತ್ರಗಳಲ್ಲಿ ತನ್ನ ಅಸ್ತಿತ್ವವನ್ನು ಹೆಚ್ಚಿಸಲಿದೆ ಹಾಗೂ ಹೆಚ್ಚುವರಿಯಾಗಿ 25 ಲಕ್ಷ ಸಿಟಿಬ್ಯಾಂಕ್ ಕಾರ್ಡ್ಗಳ ಸೇರ್ಪಡೆಯೊಂದಿಗೆ ತನ್ನ ಆಯವ್ಯಯ ಪತ್ರವು ಶೇ.57ರಷ್ಟು ಬೆಳೆಯಲಿದೆ ಮತ್ತು ದೇಶದಲ್ಲಿಯ ಮೂರು ಅಗ್ರ ಕಾರ್ಡ್ ಬಿಸಿನೆಸ್ಗಳ ಗುಂಪಿಗೆ ತಾನು ಸೇರಲಿದ್ದೇನೆ ಎಂದು ಎಕ್ಸಿಸ್ ಬ್ಯಾಂಕ್ ಕಳೆದ ವರ್ಷ ತನ್ನ ವೆಬ್ಸೈಟ್ನಲ್ಲಿ ಹೇಳಿತ್ತು.

                            ಗ್ರಾಹಕರಿಗಾಗಿ ಏನೇನು ಬದಲಾವಣೆಗಳಾಗಲಿವೆ?

                ಸಿಟಿಬ್ಯಾಂಕ್ ಗ್ರಾಹಕರು ತನ್ನ ಹೆಚ್ಚಿನ ಭೌಗೋಳಿಕ ವ್ಯಾಪ್ತಿ,ವಿಶಾಲ ಶ್ರೇಣಿಯ ಉತ್ಪನ್ನಗಳು ಮತ್ತು ಕೊಡುಗೆಗಳ ಲಾಭಗಳನ್ನು ಪಡೆಯಲಿದ್ದಾರೆ ಎಂದು ಎಕ್ಸಿಸ್ ಬ್ಯಾಂಕ್ ತಿಳಿಸಿದೆ. ಭಾರತದ 18 ನಗರಗಳಲ್ಲಿನ ಸಿಟಿ ಬ್ಯಾಂಕಿನ ಏಳು ಕಚೇರಿಗಳು,21 ಶಾಖೆಗಳು ಮತ್ತು 499 ಎಟಿಎಮ್ಗಳು ಎಕ್ಸಿಸ್ ಬ್ಯಾಂಕಿನ ತೆಕ್ಕೆಗೆ ಸೇರಿವೆ.

                   ಕಾರ್ಡ್ ವಹಿವಾಟುಗಳಿಗೆ ಸಂಬಂಧಿಸಿದಂತೆ ಸಿಟಿ ಬ್ಯಾಂಕ್ ದೇಶದಲ್ಲಿಯ ಪ್ರಮುಖ ಹಣಕಾಸು ಸಂಸ್ಥೆಗಳಲ್ಲಿ ಒಂದಾಗಿದೆ. ಆರ್ಬಿಐ ವರದಿಯಂತೆ 25 ಲಕ್ಷ ಸಿಟಿಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆದಾರರು 3,000 ಕೋ.ರೂ.ಗಳ ವಹಿವಾಟು ನಡೆಸಿದ್ದಾರೆ.

                  ಸ್ವಾಧೀನ ಪ್ರಕ್ರಿಯೆಯಿಂದ ಗ್ರಾಹಕರಿಗೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಎಂದು ಉಭಯ ಬ್ಯಾಂಕುಗಳು ಹೇಳಿವೆಯಾದರೂ ಅವರು ಮತ್ತೊಮ್ಮೆ ಕೆವೈಸಿ ಪ್ರಕ್ರಿಯೆಗೆ ಒಳಗಾಗಬೇಕಾಗುತ್ತದೆ ಎಂದು ವರದಿಗಳು ಹೇಳಿವೆ. ಆದರೆ ಗ್ರಾಹಕರಿಗೆ ಅನಾನುಕೂಲವನ್ನು ಕನಿಷ್ಠಗೊಳಿಸಲು ಈ ಪ್ರಕ್ರಿಯೆಯನ್ನು ಹಂತಹಂತವಾಗಿ ನಡೆಸಲಾಗುತ್ತದೆ.
ಸಿಟಿಬ್ಯಾಂಕಿನ ಎಲ್ಲ ಶಾಖೆಗಳು ಎಕ್ಸಿಸ್ ಬ್ಯಾಂಕಿನ ಶಾಖೆಗಳಾಗಿ ಮುಂದುವರಿಯುತ್ತವೆ. ಒಟ್ಟಾರೆಯಾಗಿ ಸಿಟಿ ಬ್ಯಾಂಕ್ ಗ್ರಾಹಕರ ಪಾಲಿಗೆ ಹೆಚ್ಚಿನ ಬದಲಾವಣೆಗಳೇನೂ ಇಲ್ಲ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries