ದಿನದಲ್ಲಿ ಎಷ್ಟು ಗಂಟೆ ಮೊಬೈಲ್ ನೋಡುತ್ತೀರಿ? ಕನಿಷ್ಠ 2 ಗಂಟೆ? ಹೌದು ಎರಡು ಗಂಟೆಗಿಂತ ಕಡಿಮೆ ಮೊಬೈಲ್ ಬಳಕೆ ಮಾಡುತ್ತೇನೆ ಎಂದು ಹೇಳುವವರು ತುಂಬಾ ಕಡಿಮೆ.
ಬರಿ ಕರೆಯಾದರೆ ತೊಂದರೆಯಿಲ್ಲ, ಇದೀಗ ಸ್ಮಾರ್ಟ್ ಫೋನ್‌ಗಳು ಎಲ್ಲರ ಬಳಿ ಇರುವುದರಿಂದ ವೀಡಿಯೋಗಳನ್ನು ನೋಡಿ ಹೆಚ್ಚಾಗಿ ಗಮನ ಸೆಳೆಯುತ್ತಾರೆ.
ನಮ್ಮ ಹೃದಯದ ಆರೋಗ್ಯಕ್ಕೆ 8 ಗಂಟೆಗಳ ನಿದ್ದೆ ಅವಶ್ಯಕವಾಗಿದೆ. ನಿದ್ದೆ ಕಡಿಮೆಯಾದರೆ ಹೃದಯ ಬಡಿತ ನಿಧಾನವಾಗುವುದು, ರಕ್ತದೊತ್ತಡ ಅಧಿಕವಾಗುವುದು. ಹೀಗಾಗಿ ಹೃದಯ ಸಂಬಂಧಿ ಸಮಸ್ಯೆಗಳು ಬರಬಹುದು. ಮೊಬೈಲ್‌ನ ಸ್ಕ್ರೀನ್ ನೋಡುತ್ತಿದ್ದರೆ ಇದು ಮೆದುಳನ್ನು ಗೊಂದಲಗೊಳಿಸುತ್ತದೆ, ಮೆದುಳಿನ ಕಾರ್ಯದ ಮೇಲೆ ಪರಿಣಾಮ ಬೀರಿ, ದೇಹದ ಭಾಗಗಳಿಗೆ ಸಂದೇಶ ಕೊಡುವುದರಲ್ಲಿ ವ್ಯತ್ಯಸಾ ಉಂಟಾಗುವುದು.
ಮೆಲಟೋನಿಯನ್ ಕಡಿಮೆ ಮಾಡುತ್ತದೆ
ಹೃದಯದ ಆರೋಗ್ಯಕ್ಕೆ ಮೆಲಟೋನಿಯನ್ ಎಂಬ ಹಾರ್ಮೋನ್ ಅತ್ಯಾವಶ್ಯಕ. ಇದು ನೀವು ವಯಸ್ಸಾದಂತೆ
ನಿಮಮ್ ಮೆದುಳಿನ ರಕ್ಷಣೆ ಮಾಡುತ್ತದೆ. ರಾತ್ರಿ ಮಲಗಲು ಹೋಗುವಾಗ ಲೈಟ್ ಆಫ್ ಆದ ಮೇಲೂ
ಮೊಬೈಲ್ ನೋಡುತ್ತಾರೆ. ಇದರಿಂದಾಗಿ ಮೆಲಟೋನಿನ್ ಉತ್ಪತ್ತಿ ಕಡಿಮೆಯಾಗುವುದು.
ಬೆಡ್ ಟೈಮ್‌ನಲ್ಲಿ ಮೊಬೈಲ್ ನೋಡುವುದರಿಂದ ನಿದ್ದೆ ಭಂಗ ಉಂಟಾಗುವುದು
ನೀವು ಮಲಗುವ ಮುನ್ನ ಸ್ವಲ್ಪ ರಿಲ್ಯಾಕ್ಸ್‌ಗೆ ಅಂತ ಮೊಬೈಲ್ ನೋಡಿದರೆ ಇದರಿಂದ ನಿಮಗೆ ನಿದ್ದೆ ಬರಲು ತಡವಾಗುವುದು. ಅಲ್ಲದೆ ಆಗಾಗ ಎಚ್ಚರವಾಗುವುದು.
ತುಂಬಾ ಸುಸ್ತು ಅನಿಸುವುದು
ತುಂಬಾ ಹೊತ್ತು ಮೊಬೈಲ್‌ನಲ್ಲಿ ಟೈಮ್ ಕಳೆದರೆ ಬೆಳಗ್ಗೆ ಎದ್ದಾಗ ಲವಲವಿಕೆ ಇರಲ್ಲ, ಒಂಥರಾ ಸುಸ್ತು ಕಾಡುವುದು.
ನಿಮ್ಮ ಸಂಬಂಧದ ಮೇಲೂ ಪರಿಣಾಮ ಬೀರುವುದು
ವಿವಾಹಿತರು ಬೆಡ್‌ರೂಂಗೆ ಹೋದ ಮೇಲೂ ಕಾಲ ಕಳೆದರೆ ಸಂಗಾತಿ ಜೊತೆ ಸಂವಹನ
ಕಡಿಮೆಯಾಗುವುದು. ನಿಮ್ಮ ಮನಸ್ಸಿನ ಭಾವನೆಗಳನ್ನು ಅವರಲ್ಲಿ ಹೇಳುವುದು
ಕಡಿಮೆಯಾಗುತ್ತದೆ. ಈ ಕಾರಣದಿಂದಾಗಿ ಇಬ್ಬರ ನಡುವೆ ಭಿನ್ನಾಭಿಪ್ರಾಯ ಹೆಚ್ಚಾಗುವುದು.
ಕಣ್ಣಿಗೂ ಹಾನಿ
ಮೊಬೈಲ್ ಅತಿಹೆಚ್ಚು ನೋಡಿದರೆ ಕಣ್ಣಿಗೆ ಹಾನಿ, ಅದರಲ್ಲೂ ರಾತ್ರಿ ಹೊತ್ತಿ ನೋಡಿದರೆ
ಕಣ್ಣಿಗೆ ತುಂಬಾನೇ ಉಂಟಾಗುವುದು. ಮೊಬೈಲ್ ಅನ್ನು ರಾತ್ರಿ ನೋಡುವಾಗ ಅದರ
ಬ್ರೈಟ್‌ನೆಸ್ ಸೆಟ್ ಮಾಡಬೇಕು, ಇಲ್ಲದಿದ್ದರೆ ಕುರುಡುತನ ಬರಬಹುದು ಹುಷಾರ್!
ಏನು ಮಾಡಬೇಕು?
ಮಲಗುವ ಮುನ್ನ ಕನಿಷ್ಠ ಅರ್ಧ ಗಂಟೆಗೆ ಮುನ್ನ ಮೊಬೈಲ್ ಆಫ್ ಮಾಡಿ, ನಂತರ ಅದನ್ನು
ಮುಟ್ಟಲು ಹೋಗಬೇಡಿ. ಹೀಗೆ ಮಾಡುವುದರಿಂದ ಮನಸ್ಸಿಗೂ ರಿಲ್ಯಾಕ್ಸ್, ಆರೋಗ್ಯಕ್ಕೆ
ಒಳ್ಳೆಯದು.