HEALTH TIPS

ಬೇಕಲ ಉತ್ಸವದ ಮರೆಯಲ್ಲಿ ವ್ಯಾಪಕ ಭ್ರಷ್ಟಾಚಾರ: ಸ್ಪಷ್ಟನೆ ನೀಡುವಂತೆ ಬಿಜೆಪಿ ಆಗ್ರಹ


               ಕಾಸರಗೋಡು: ಬೇಕಲ ಬೀಚ್ ಫೆಸ್ಟ್ ಆಯೋಜನೆಗೆ ಸಂಬಂಧಿಸಿದಂತೆ ವ್ಯಾಪಕ ಭ್ರಷ್ಟಾಚಾರದ ಆರೋಪಕ್ಕೆ ಸಂಬಂಧಿಸಿ ಉದುಮ ಶಾಸಕ ಸಿ.ಎಚ್.ಕುಞಂಬು ಉತ್ತರ ನೀಡಬೇಕು ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ, ವಕೀಲ ಕೆ.ಶ್ರೀಕಾಂತ್ ಆಗ್ರಹಿಸಿದ್ದಾರೆ.
             ಎಂಟು ಲಕ್ಷ ಪ್ರವೇಶ ಟಿಕೆಟ್‍ಗಳನ್ನು ಮುದ್ರಿಸಿ ವಿತರಿಸಲಾಗಿದ್ದು, ಭಾರಿ ಸಂಖ್ಯೆಯಲ್ಲಿ ಜನ ಬೇಕಲ ಉತ್ಸವ ವಿಕ್ಷಣೆಗೆ ಆಗಮಿಸಿದ್ದರು ಎಂದು ಸಂಘಟಕರು ಹೇಳಿಕೊಂಡಿದ್ದಾರೆ. ಕೂಪನ್‍ಗಳನ್ನು ಸಿಪಿಎಂ ನೇತೃತ್ವ ನೀಡುವ ಪಳ್ಳಿಕೆರೆ ಸೇವಾ ಸಹಕಾರಿ ಬ್ಯಾಂಕ್ ವತಿಯಿಂದ ಮುದ್ರಿಸಿ ವಿತರಿಸಲಾಗಿದೆ. ಆದರೆ ಸಂಘಟನಾ ಸಮಿತಿ ಮಂಡಿಸಿದ ಲೆಕ್ಕಾಚಾರದಲ್ಲಿ ಟಿಕೆಟ್‍ಗಳ ಸಂಖ್ಯೆ ನಾಲ್ಕು ಲಕ್ಷ ಆಗಿ ಕಡಿತಗೊಂಡಿದೆ.  ಕಾರ್ಯಕ್ರಮ ಆಯೋಜಿಸಿದವರು ಮಂಡಿಸಿದ ಅಂಕಿ ಅಂಶ ಪ್ರಕಾರ ಕೂಪನ್‍ಗಳ ಮೂಲಕ ಸಣ್ಣ ಮೊತ್ತವನ್ನು ಮಾತ್ರ ತೋರಿಸಲಾಗಿದೆ.  ಮಾರಾಟವಾಗದೆ ಉಳಿದ ಕೂಪನ್‍ಗಳು ಎಲ್ಲಿವೆ ಎಂಬುದಕ್ಕೂ ಇವರಲ್ಲಿ ಉತ್ತರವಿಲ್ಲ.  ಬೇಕಲ್ ಫೆಸ್ಟ್ ನೆಪದಲ್ಲಿ ಸಿಪಿಎಂನ ಕೆಲ ಮುಖಂಡರು ಹಾಗೂ ಅಧಿಕಾರಿಗಳು ಕೂಡ ಹಣ ಕಬಳಿಸಿರುವುದಾಗಿ ಆರೋಪ ಕೇಳಿ ಬರುತ್ತಿದೆ. ಕೂಪನ್ ಮುದ್ರಣದ ಮೊತ್ತದಲ್ಲಿ ಅಜಗಜಾಂತರವಿದೆ.  ಹಲವರಿಗೆ ಬಿಲ್ ಮಾಡಿದ ಹಣ ಪಾವತಿಯಾಗಿಲ್ಲ ಎಂಬ ಆರೋಪವೂ ಕೇಳಿ ಬಂದಿದೆ. ಸರ್ಕಾರಿ ನಿಯಂತ್ರಿತ ಸಂಸ್ಥೆ ಬಿಆರ್‍ಡಿಸಿ ಆಯೋಜಿಸಿದ ಕಾರ್ಯಕ್ರಮಕ್ಕೆ ಹಣವನ್ನು ವರ್ಗಾಯಿಸಿರುವುದಲ್ಲದೆ, ನಗದು ರೂಪದಲ್ಲಿ ಸ್ವೀಕರಿಸಿರುವುದಾಗಿ ಲೆಕ್ಕಪತ್ರದಲ್ಲಿ ಸೂಚಿಸಲಾಗಿದೆ.  ಬ್ಯಾಂಕ್ ಖಾತೆ ಮೂಲಕ ನಡೆಯಬೇಕಾಗಿದ್ದ ಹಣದ ವ್ಯವಹಾರವನ್ನು ನಗದು ಊಪದಲ್ಲಿ ನಡೆಸಿರುವುದೂ ಸಂಶಯಕ್ಕೆ ಕಾರಣವಾಗಿದೆ ಮಾತ್ರವಲ್ಲಿ ಇದು ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ.
               ಈ ಬಗ್ಗೆ ಜನರಲ್ಲಿರುವ ಸಂದೇಹಗಳನ್ನು ನಿವಾರಿಸುವ ಜವಾಬ್ದಾರಿ ಶಾಸಕರ ಮೇಲಿದೆ. ಜತೆಗೆ ಪ್ರವಾಸೋದ್ಯಮ ಇಲಾಖೆ ಮತ್ತು ಬಿಆರ್‍ಡಿಸಿಗೂ ಇದರಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ.  ಸಂಘಟಕರು ಸುಲ್ಳು ಲೆಕ್ಕಾಚಾರ ನೀಡಿ ಜನರನ್ನು ವಂಚಿಸಲೆತ್ನಿಸಿದ್ದಾರೆ. ಈ ಬಗ್ಗೆ ಮೌನ ಮುರಿದು ನಿಖರ ಲೆಕ್ಕಾಚಾರ ಒದಗಿಸಲು ಶಾಸಕ ಎಸಿ.ಎಚ್ ಕುಞಂಬು ಮುಂದಾಗಬೇಕು ಎಂದು ಶ್ರೀಕಾಂತ್ ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries