ಚೀತಾ ಹೆಲಿಕಾಪ್ಟರ್ ಇಂದು ಬೆಳಗ್ಗೆ 09:15ರ ಸುಮಾರಿಗೆ ಕಾರ್ಯಾಚರಣೆ ಹಾರಾಟ ಪ್ರಾರಂಭಿಸಿತ್ತು. ಸ್ವಲ್ಪ ಸಮಯದ ನಂತರ ಹೆಲಿಕಾಪ್ಟರ್ ATC ಯ ಸಂಪರ್ಕವನ್ನು ಕಳೆದುಕೊಂಡಿತು. ನಂತರ ಬೋಮ್ಡಿಲಾ ಪಶ್ಚಿಮದ ಮಂಡ್ಲಾ ಬಳಿ ಪತನಗೊಂಡಿತ್ತು. ಮೃತ ಪೈಲಟ್ಗಳನ್ನು ಲೆಫ್ಟಿನೆಂಟ್ ಕರ್ನಲ್ ವಿವಿಬಿ ರೆಡ್ಡಿ ಮತ್ತು ಮೇಜರ್ ಜಯಂತ್ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.
ಈ ಪ್ರದೇಶದಲ್ಲಿ ಯಾವುದೇ ಸಿಗ್ನಲ್ ಸಿಗುವುದಿಲ್ಲ. ಇಲ್ಲಿ ಹವಾಮಾನವು ಅತ್ಯಂತ ಮಂಜಿನಿಂದ ಕೂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. 2022ರಲ್ಲಿ ತವಾಂಗ್ನಲ್ಲಿ ಹೆಲಿಕಾಪ್ಟರ್ ಒಂದು ಪತನಗೊಂಡಿತ್ತು ಅರುಣಾಚಲ ಪ್ರದೇಶದಲ್ಲಿ ಚೀತಾ ಹೆಲಿಕಾಪ್ಟರ್ ಬಲಿಯಾಗುತ್ತಿರುವುದು ಇದೇ ಮೊದಲಲ್ಲ, 2022ರ ಅಕ್ಟೋಬರ್ನಲ್ಲಿ ತವಾಂಗ್ನಲ್ಲಿ ಇದೇ ರೀತಿಯ ಘಟನೆ ಸಂಭವಿಸಿತ್ತು. ಅಂದು ಹೆಲಿಕಾಪ್ಟರ್ ನಲ್ಲಿದ್ದ ಇಬ್ಬರು ಪೈಲಟ್ಗಳ ಪೈಕಿ ಒಬ್ಬರು ಸಾವನ್ನಪ್ಪಿದರು. ಪೈಲಟ್ ಕರ್ನಲ್ ಸೌರಭ್ ಯಾದವ್ ಅವರು ಚಿಕಿತ್ಸೆ ವೇಳೆ ಸಾವನ್ನಪ್ಪಿದ್ದರು.