ಬದಿಯಡ್ಕ: ಎಡನೀರು ಸಮೀಪದ ಪಾಡಿ ಗ್ರಾಮ ಕಚೇರಿಯಲ್ಲಿ ನೂತನವಾಗಿ ನಿರ್ಮಿಸಿದ ಸ್ಮಾರ್ಟ್ ವಿಲೇಜ್ ಕಚೇರಿ ಕಟ್ಟಡವನ್ನು ಕಂದಾಯ ಮತ್ತು ವಸತಿ ಇಲಾಖೆ ಸಚಿವ ಕೆ.ರಾಜನ್ ಉದ್ಘಾಟಿಸಿದರು. ಸಾರ್ವಜನಿಕರಿಗೆ ಶೀಘ್ರವಾಗಿ ಸೇವೆಯನ್ನು ಒದಗಿಸುವ ಉದ್ದೇಶವನ್ನು ಇಟ್ಟುಕೊಂಡು ಸ್ಮಾರ್ಟ್ ಕಚೇರಿಗಳನ್ನು ಆರಂಭಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು. ಗ್ರಾಮಗಳ ಜತೆಗೆ ಅಧಿಕಾರಿಗಳು ಚುರುಕಾದಾಗ ಮಾತ್ರ ಪರಿಕಲ್ಪನೆ ಪೂರ್ಣಗೊಳ್ಳುವುದು ಎಂಬ ವಿಚಾರವನ್ನು ಸಚಿವರು ಈ ಸಂದರ್ಭದಲ್ಲಿ ನೆನಪಿಸಿದರು. ಆತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ 1250 ಚದರ ಅಡಿ ವಿಸ್ತೀರ್ಣದ ಕಟ್ಟಡವನ್ನು 28 ಲಕ್ಷ ರೂಪಾಯಿ ಬಂಡವಾಳದಲ್ಲಿ ನಿರ್ಮಿಸಲಾಗಿದೆ.
ಶಾಸಕ ಎನ್.ಎ.ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದ್ದರು. ಎಡಿಎಂ ಎ.ಕೆ.ರಾಮೇಂದ್ರನ್, ಕಾಸರಗೋಡು ತಹಸೀಲ್ದಾರ್ ಸಾದಿಕ್ ಬಾಷಾ, ಚೆಂಗಳ ಪಂಚಾಯತಿ ಅಧ್ಯಕ್ಷ ಖಾದರ್ ಬದ್ರಿಯಾ, ವಾರ್ಡ್ ಸದಸ್ಯ ಅನ್ಸೀಫಾ ಅರ್ಷದ್, ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಸಿ.ವಿ.ಕೃಷ್ಣನ್, ಕೆ.ಪ್ರಕಾಶ್, ಕೆ.ಇಸ್ಮಾಯಿಲ್, ಕೆ.ಅಬ್ದುಲ್ಲಕುಂಞÂ, ಜಯಚಂದ್ರ, ಬಿ.ಅಬ್ದುಲ್ ಗಫೂರ್, ಅಬ್ದುಲ್ ರಹಮಾನ್ ಬಾಂಗೋಡ್, ಝುಬೈರ್ ಪಡ್ಪು, ಶಾಫಿ ಸಂತೋಷನಗರ, ಅಹ್ಮದಲಿ ಕುಂಬಳೆ, ನ್ಯಾಷನಲ್ ಅಬ್ದುಲ್ಲ, ರತೀಶ್ ಮೊದಲಾದವರು ಮಾತನಾಡಿದರು. ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರಚಂದ್ ಸ್ವಾಗತಿಸಿ, ಕಾಸರಗೋಡು ಆರ್‍ಡಿಒ ಅತುಲ್ ಎಸ್ ನಾಥ್ ವಂದಿಸಿದರು.