ಕಾಸರಗೋಡು: ಪ್ರಾಚೀನ ಕನ್ನಡ ಸಾಹಿತ್ಯಕ್ಕೆ ಜೈನರ ಕೊಡುಗೆ ಅಪಾರವಾಗಿದ್ದು, ಆದಿಕವಿ ಪಂಪ, ಪೆÇನ್ನ, ರನ್ನ, ಜನ್ನ ಸೇರಿದಂತೆ ನೂರಾರು ಜೈನ ಕವಿಗಳು ತಮ್ಮ ಕೃತಿಗಳಿಂದ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ ಎಂದು ಕೂಡ್ಲು ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯ ನಿವೃತ್ತ ಅಧ್ಯಾಪಕ ವಿಶಾಲಾಕ್ಷ ಪುತ್ರಕಳ ತಿಳಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ಕಾಸರಗೋಡು ಜಿ.ಯು.ಪಿ ಶಾಲೆಯಲ್ಲಿ ನಡೆದ ಎಂ.ಕೆ ಜಿನಚಂದ್ರನ್ ದತ್ತಿ ಉಪನ್ಯಾಸದ ಅಂಗವಾಗಿ 'ಪ್ರಾಚೀನ ಕನ್ನಡ ಸಾಹಿತ್ಯಕ್ಕೆ ಜೈನರ ಕೊಡುಗೆ' ಎಂಬ ವಿಷಯದಲ್ಲಿ ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಎಸ್.ವಿ. ಭಟ್ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮೃದ್ಧವಾದ ಕನ್ನಡ ಸಾಹಿತ್ಯದ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಹಿರಿಯಕವಿ, ಚಿತ್ರಕಾರ ಬಾಲಮಧುರಕಾನನ ಅವರು 'ಕನ್ನಡ ಸಾಹಿತ್ಯ ಲೋಕಕ್ಕೆ ಮಕ್ಕಳ ಕೊಡುಗೆ' ಎಂಬ ವಿಷಯದಲ್ಲಿ ಶ್ರೀಮತಿ ಕಮಲಮ್ಮ ದತ್ತಿ ಉಪನ್ಯಾಸ ನೀಡಿ ಮಾತನಾಡಿ, ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಮಕ್ಕಳ ಕೊಡುಗೆಯೂ ಅಪಾರವಾದುದು. ಸ್ವತಂತ್ರವಾಗಿ ಕಥಾಸಂಕಲನ, ಕವನಸಂಕಲನಗಳನ್ನು ಪ್ರಕಟಿಸಿದ್ದಾರೆ. ಪಂಜೆ ಮಂಗೇಶರಾಯ, ಕಯ್ಯಾರ ಕಿಞ್ಞಣ್ಣ ರೈ ಮೊದಲಾದವರಿಂದ ಅವರು ಸ್ಫೂರ್ತಿ ಪಡೆದಿದ್ದಾರೆ ಎಂದು ತಿಳಿಸಿದರು.
'ತುಳು, ಕನ್ನಡ ಭಾಷೆ ಸಾಹಿತ್ಯ ಸಂಸ್ಕøತಿ ಬಾಂಧವ್ಯ'ಎಂಬ ವಿಷಯದಲ್ಲಿ ಸಾಹಿತಿ ನಿವೃತ್ತ ಪ್ರಾಂಶುಪಾಲ ಪೆÇ್ರ| ಪಿ.ಎನ್. ಮೂಡಿತ್ತಾಯ ಮಾತನಾಡಿ, ರಾಷ್ಟ್ರೀಯ ಮಾನ್ಯತೆ ಪಡೆದ 22 ಭಾಷೆಗಳಲ್ಲಿ ಕನ್ನಡವೂ ಒಂದಾಗಿದೆ. ಇಂಪಾದ ತುಳುಭಾಷೆಯಲ್ಲಿ ಮಹಾಕಾವ್ಯದಿಂದ ಹಿಡಿದು ಕವಿತೆಗಳ ತನಕ ಸೃಜನಶೀಲ ಕೃತಿಗಳು ರಚನೆಯಾಗಿದೆ. ತುಳುವಿರಲಿ ಕನ್ನಡವಿರಲಿ ಅವು ನೆಲದ ಸಂಸ್ಕøತಿಗೆ ಗೌರವ ಕೊಡುತ್ತಾ ಬರುತ್ತಿವೆ ಎಂದು ತಿಳಿಸಿದರು.
ಕಾಸರಗೋಡು ಜಿ.ಯು.ಪಿ ಶಾಲೆಯ ಮುಖ್ಯಶಿಕ್ಷಕಿ ಜಯಶ್ರೀ. ಟಿ.ಎನ್, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅನಿಲ್ ಕುಮಾರ್ ಉಪಸ್ಥಿತರಿದ್ದರು. ಶಿಕ್ಷಕಿ ಸರ್ವಮಂಗಳಾ ರಾವ್ ಸ್ವಾಗತಿಸಿದರು.ಶಿಕ್ಷಕಿ ಸೌಮ್ಯ ಕಾರ್ಯಕ್ರಮ ನಿರೂಪಿಸಿದರು. ಕೇರಳ ಲೋಕಸೇವಾ ಆಯೋಗದ ನಿವೃತ್ತ ಅಂಡರ್ ಸೆಕ್ರೆಟರಿ ಗಣೇಶ ಪ್ರಸಾದ ಪಾಣೂರು ವಂದಿಸಿದರು.
ಪ್ರಾಚೀನ ಕನ್ನಡ ಸಾಹಿತ್ಯಕ್ಕೆ ಜೈನರ ಕೊಡುಗೆ ಅಪಾರ: ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿದತ್ತಿ ಉಪನ್ಯಾಸ ಉದ್ಘಾಟಿಸಿ ವಿಶಾಲಾಕ್ಷ ಪುತ್ರಕಳ ಅಭಿಪ್ರಾಯ
0
ಮಾರ್ಚ್ 28, 2023