ಪೆರ್ಲ : ಎಣ್ಮಕಜೆ ಗ್ರಾಮ ಪಂಚಾಯತಿ 2022-23ನೇ ವಾರ್ಷಿಕ ಪದ್ಧತಿಗೊಳಪಡಿಸಿ ಪಂಚಾಯತಿ ವ್ಯಾಪ್ತಿಯ ಪರಿಶಿಷ್ಟ ಜಾತಿ ಹಾಗೂ ವರ್ಗ ವಿಭಾಗದ ವಿದ್ಯಾರ್ಥಿಗಳಿಗಾಗಿ ಲ್ಯಾಪ್ ಟೋಪ್ ಮತ್ತು ಶಾಲೆಗಳಿಗೆ ಕುಡಿನೀರ ಶುದ್ಧೀಕರಣ ಯಂತ್ರ, ಎಸ್ ಸಿ ವಿಭಾಗದವರಿಗೆ ಕುಡಿನೀರಿನ ಟ್ಯಾಂಕಿ ವಿತರಣೆ ಕಾರ್ಯಕ್ರಮ ಪಂಚಾಯತಿ ಸಭಾಂಗಣದಲ್ಲಿ ಜರಗಿತು. ಜಿಲ್ಲಾ ಪಂ.ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಗ್ರಾ.ಪಂ.ಉಪಾಧ್ಯಕ್ಷೆ ಡಾ. ಜಹನಾಸ್ ಹಂಸಾರ್,ಜಿ. ಪಂ.ಸದಸ್ಯ ನಾರಾಯಣ ನಾಯ್ಕ, ಪಂ.ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಿ.ಎಸ್.ಗಾಂಭೀರ್,ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಶ್ರೀ ಕುಲಾಲ್, ಕ್ಷೇಮ ಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸೌಧಾಭಿ ಹನೀಫ್, ಪಂ.ಸದಸ್ಯರಾದ ಮಹೇಶ್ ಭಟ್, ಶಶಿಧರ, ಇಂದಿರಾ,ರಾಮಚಂದ್ರ, ರೂಪವಾಣಿ ಭಟ್,ರಮ್ಲ,ಕುಸುಮಾವತೀ ಟೀಚರ್, ಉμÁ ಕುಮಾರಿ,ಆಶಾಲತಾ,ಪಂ.ಕಾರ್ಯದರ್ಶಿ ಸುನಿಲ್ ಆರ್ ,ಹೆಡ್ ಕ್ಲಾರ್ಕ್ ಪ್ರೇಮ್ ಚಂದ್ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು. ಕಮಲಾಕ್ಷ ಮಾಸ್ತರ್ ಸ್ವಾಗತಿಸಿ, ಸಹಾಯಕ ಕಾರ್ಯದರ್ಶಿ ರೋಬಿನ್ ಸನ್ ವಂದಿಸಿದರು. ನವಾಸ್ ಮತ್ರ್ಯ ನಿರೂಪಿಸಿದರು.