ಆಲಪ್ಪುಳ: ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಸುದ್ದಿ ಕೇಳಿದ ಕೂಡಲೇ ತಾಯಿ ಹೃದಯಾಘಾತದಿಂದ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಕೇರಳದ ಆಲಪ್ಪುಳ ಜಿಲ್ಲೆಯಲ್ಲಿ ನಡೆದಿದೆ.
ಮೃತ ತಾಯಿಯನ್ನು ಇಂದುಲೇಖಾ ಎಂದು ಗುರುತಿಸಲಾಗಿದೆ.
ಈಕೆ ಆಲಪ್ಪುಳ ಜಿಲ್ಲೆಯ ಪುರಕ್ಕಾಡ್ ಮೂಲದ ನಿವಾಸಿ. ಆಕೆಯ ಮಗ ನಿಧಿನ್ (32) ಕಳೆದ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಿಧಿನ್ ಮೀನುಗಾರಿಕೆ ಕೆಲಸ ಮಾಡುತ್ತಿದ್ದರು. ಕಳೆದ ರಾತ್ರಿ 8 ಗಂಟೆಗೆ ನಿಧಿನ್ ಆತ್ಮಹತ್ಯೆಗೆ ಶರಣಾಗಿದ್ದು, ಮಗನ ಸಾವಿನ ಸುದ್ದಿ ತಿಳಿದುಕೊಡಲೇ ಇಂದುಲೇಖಾ ಹೃದಯಾಘಾತಕ್ಕೆ ಒಳಗಾಗಿ ಪ್ರಾಣ ಬಿಟ್ಟಿದ್ದಾರೆ.
ನಿಧಿನ್ನನ್ನು ಆಲಪ್ಪುಳದ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ 11 ಗಂಟೆಗೆ ಮೃತಪಟ್ಟನು. ತಾಯಿ ಮತ್ತು ಮಗ ಇಬ್ಬರನ್ನು ಇಂದು ಒಂದೇ ಕಡೆ ಶವ ಸಂಸ್ಕಾರ ಮಾಡಲಾಗಿದೆ.
ನಿಧಿನ್ ಆತ್ಮಹತ್ಯೆ ಕಾರಣ ಏನೆಂಬುದು ಇನ್ನು ತಿಳಿಬಂದಿಲ್ಲ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಸ್ಥಳೀಯ ಪೊಲೀಸರು ತನಿಖೆ ಆರಂಭಿಸಿದ್ದಾರೆ.