HEALTH TIPS

ತಾಯಿಗೆ ಭಕ್ತಿಯ ಮುಂದೆ ಮಿಕ್ಕಿದ್ದು ನಶ್ವರ: ಟೆಕ್ನೋಪಾರ್ಕ್‍ನ ಇಂಜಿನಿಯರ್ ಉದ್ಯೋಗ ಬಿಟ್ಟು ಆಟ್ಟುಕಾಳಮ್ಮನ ಪಾದಕೆರಗಿದ ಶಂತನು


            ತಿರುವನಂತಪುರಂ: ಶ್ರೀದೇವಿಯೊಂದಿಗಿನ ನಿಷ್ಕಲ್ಮಶ ಭಕ್ತಿಯ ಮುಂದೆ ಬೇರೇನೂ ಇಲ್ಲ ಎಂಬುದನ್ನು ಮಾತಿಗೆ ಮೀರಿ ಸಾಬೀತುಪಡಿಸುತ್ತಿರುವ ಬಿ. ಶಂತನು ಟೆಕ್ ಪದವೀಧರ. ಈ ಯುವ ಇಂಜಿನಿಯರ್ ತಿರುವನಂತಪುರ ಟೆಕ್ನೋಪಾರ್ಕ್‍ನಲ್ಲಿ ಐಟಿ ವಲಯದಲ್ಲಿ ಹೆಚ್ಚಿನ ಸಂಬಳದ ಉದ್ಯೋಗವನ್ನು ತೊರೆದು ಆಟುಕಲ್ ದೇವಸ್ಥಾನದಲ್ಲಿ ಅರ್ಚಕರಾಗಿ ಸೇರಿಕೊಂಡಿರುವರು. ಬಿ. ಟೆಕ್ ಪದವೀಧರ ಮತ್ತು ಟೆಕ್ನೋಪಾರ್ಕ್‍ನಲ್ಲಿ ಸಾಫ್ಟ್‍ವೇರ್ ಇಂಜಿನಿಯರ್ ಆಗಿರುವ ಶಂತನು ಹಿಂದಿನಿಂದಲೂ ದೈವಭಕ್ತಿಯಲ್ಲಿ ಪರಕಾಯ ಪ್ರವೇಶ ಮಾಡುತ್ತಿದ್ದವರು. ತನ್ನ ಜೀವನದಲ್ಲಿ ಇಂಥದ್ದೊಂದು ಹುದ್ದೆ ಬಂದಾಗಲೂ ಶಂತನು ಮತ್ತೇನೂ ಯೋಚಿಸದೆ ಆ ಹಾದಿಯಲ್ಲೇ ಮುಂದುವರಿದಿರುವರು. ಶಂತನು ಅಟ್ಟುಕಲ್ ದೇವಸ್ಥಾನದ ಮಾಜಿ ಸಹ-ಸಹಮೇಲ್ಶಾಂತಿ ಎಂ.ಎನ್.ನಾರಾಯಣನ್ ನಂಬೂದಿರಿ ಅವರ ಪುತ್ರ.
            1986 ರಿಂದ ಅಟ್ಟುಕಲ್ ದೇವಸ್ಥಾನದ ಬಳಿ ನೆಲೆಸಿರುವರು. ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಇಂಜಿನಿಯರಿಂಗ್ ಪದವಿ ಪಡೆದ ನಂತರ 2011 ರಲ್ಲಿ ಟೆಕ್ನೋಪಾರ್ಕ್ ನಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆದರು. ನಂತರ ಒಂದು ವರ್ಷ ಕುವೈತ್ ನಲ್ಲಿ ಕೆಲಸ ಮಾಡಿದರು. ವಾಪಸಾದ ನಂತರ ಮತ್ತೆ ಟೆಕ್ನೋಪಾರ್ಕ್ ನಲ್ಲಿ ಕೆಲಸ ಆರಂಭಿಸಿದರು. ಆರು ತಿಂಗಳ ಹಿಂದೆ ಕೆಲಸ ಬಿಟ್ಟು ಭಗವತಿಯ ಪೂಜೆಗೆ ಸಂಪೂರ್ಣ ತೊಡಗಿಸಿಕೊಂಡಿರುವರು.
            ದೀಪಾರಾಧನೆ, ಮಂತ್ರಘೋಷಗಳನ್ನು ನೋಡುತ್ತಾ, ಕೇಳುತ್ತಾ ಬೆಳೆದ ಈತನ ಆಸಕ್ತಿಗೆ  ತಂದೆ ಸಂಪೂರ್ಣ ಬೆಂಬಲವನ್ನು ನೀಡಿದರು. ಶಂತನು ಪೂರ್ಣಾವದಿ ಪೂಜೆಗೆ ನಿಯುಕ್ತರಾಗುವುದನ್ನು ಅವರ ಪತ್ನಿ ದೇವಿಕಾ ಸಹ ಒಪ್ಪಿಕೊಂಡಳು. ಶಂತನು ಅಟ್ಟುಕಾಳಮ್ಮನ ಮುಂದೆ ಎಲ್ಲಾ ವೈವಿಧ್ಯ ಬದುಕನ್ನೂ  ತ್ಯಾಗಮಾಡಿ ಬದುಕಲು ನಿರ್ಧರಿಸಿ ನವ ಯುವ ಸಮುದಾಯದ ಅಚ್ಚರಿಗೂ ಕಾರಣನಾಗಿದ್ದಾನೆ.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries