ಗುರುವಾಯೂರು: ದೇವಸ್ವಂ ಗೆ ಸೇರಿದ ಆನೆ ದಾಮೋದರದಾಸ್‍ಗೆ ಥಳಿಸಲಾಗಿದೆ ಎಂದು ದೂರಲಾಗಿದೆ. ಗುರುವಾಯೂರು ದೇವಸ್ವಂನ ಮಾಜಿ ಉದ್ಯೋಗಿಯೊಬ್ಬರು ಆನೆಯನ್ನು ಥಳಿಸಿದ್ದಾರೆ ಎನ್ನಲಾಗಿದೆ.
ಮಾ.12ರ ರಾತ್ರಿ ಈ ಘಟನೆ ನಡೆದಿದೆ. ಗುರುವಾಯೂರು ದೇವಸ್ವಂನ ಮಾಜಿ ಉದ್ಯೋಗಿಯೊಬ್ಬರು ಆನೆಯನ್ನು ಥಳಿಸಿದ್ದರು ಎಂಬುದಾಗಿಯೂ ಹೇಳಲಾಗಿದೆ.
ದಾಮೋದರದಾಸ್‍ನ ಮೊದಲ ಮಾವುತ ರಾಧಾಕೃಷ್ಣನನ್ನು ಗುರಿಯಾಗಿಸಿಕೊಂಡು ಆನೆ ಕುಪಿತಗೊಂಡಿತ್ತೆನ್ನಲಾಗಿದೆ. ಆನೆಯು ಕಳೆದ ಆರು ದಿನಗಳ ಕಾಲ ಜನಸಾಗರದ ಮಧ್ಯದಲ್ಲಿಯೇ ಇದ್ದು ಸಂಚಲನ ಮೂಡಿಸಿತು. ಈ ಮಧ್ಯೆ 12 ರಂದು ಒಂದಷ್ಟು ಪುಂಡಾಟ ಮೆರೆದಿತ್ತೆನ್ನಲಾಗಿದೆ. ಬಳಿಕ ಮೊದಲ ಮಾವುತನ ನೆರವಿಂದ ಹದಸ್ಥಿತಿಗೆ ತರಲಾಯಿತು. ಬಳಿಕ ಆ ರಾತ್ರಿ ಅದೇ ಆನೆ ಚಿತ್ರಹಿಂಸೆಯನ್ನು ಎದುರಿಸಬೇಕಾಯಿತು ಎನ್ನಲಾಗಿದೆ.
ರಾತ್ರಿ ವೇಳೆ ಗುರುವಾಯೂರ್ ಆನೆಲಾಯದೊಳಗೆ ಅಧಿಕಾರಿಗಳು ಇಲ್ಲದ ಕಾರಣ ಮತ್ತು ಸಿಸಿಟಿವಿ ದೃಶ್ಯಾವಳಿಗಳ ಸಾಧ್ಯತೆಯಿಲ್ಲದ ಕಾರಣ ಘಟನೆ ಗಮನಕ್ಕೆ ಬಂದಿಲ್ಲ. ನಿನ್ನೆ ನಡೆದ ದೇವಸ್ವಂ ಆಡಳಿತ ಮಂಡಳಿ ಸಭೆಯಲ್ಲಿ ಈ ಕುರಿತು ಚರ್ಚೆ ನಡೆದಿದೆ ಎಂದು ಖಚಿತ ಪಡಿಸದ ವರದಿಗಳಿದ್ದರೂ, ದೇವಸ್ವಂ ಆಡಳಿತಾಧಿಕಾರಿಗಳು ಅದನ್ನು ಮುಚ್ಚಿಟ್ಟಿದ್ದಾರೆ. ಆನೆ ದಾಮೋದರದಾಸ್ ಗೆ ಮಾವುತ ರಾಧಾಕೃಷ್ಣನ್ ಇತ್ತೀಚೆಗೆ ಮೂರಕ್ಕೂ ಹೆಚ್ಚು ಬಾರಿ ಥಳಿಸಿದ್ದರು. ಆದರೂ ದಾಮೋದರದಾಸ್ ಜವಾಬ್ದಾರಿಯಿಂದ ಮಾವುತ ರಾಧಾಕೃಷ್ಣನ್ ಅವರನ್ನು ವರ್ಗಾವಣೆ ಮಾಡಬಾರದು ಎಂದು ದೇವಸ್ವಂ ವೈದ್ಯರೊಬ್ಬರು ಒತ್ತಾಯಿಸುತ್ತಿದ್ದಾರೆ.
ಹೊಡೆತಗಳ ಕಾರಣದಿಂದಾಗಿ, ಅನೆ ಲಾಯದಲ್ಲಿ ಇತರ ಆನೆಗಳೂ ಹತಾಸೆಗೊಳಗಾಗಿವೆ. 2019ರಲ್ಲಿ ಗುರುವಾಯೂರಪ್ಪನ ಮುಂದೆ ಅಂದಿನ ಪ್ರಧಾನ ಆನೆ ಉಣ್ಣಿಕೃಷ್ಣನ್ ಕುಸಿದು ಬಿದ್ದಿತ್ತು. ಎರಡು ವರ್ಷಕ್ಕಿಂತ ಕಡಿಮೆ ಕಾಲ ಸೇವೆ ಸಲ್ಲಿಸಿತ್ತು ಆ ಆನೆ. ಅದೇ ರೀತಿ ಅರ್ಜುನ್. ಅರ್ಜುನ್ ಕೂಡ ತನ್ನ ಮುಂಭಾಗದ ಕಾಲುಗಳಲ್ಲಿ ಹೊಡೆತದ ಕಾರಣ ಊತದಿಂದಾಗಿ ಅಕಾಲಿಕ ಮರಣ ಹೊಂದಿತ್ತು. ಈ ಎಲ್ಲಾ ಆನೆಗಳ ಸಾವಿಗೆ ಕಾರಣಗಳನ್ನು ಆಯಾ ಆಡಳಿತ ಮಂಡಳಿಗಳು ತನಿಖೆ ಮಾಡಲಿಲ್ಲ, ಹೊರಜಗತ್ತಿಗೂ ತಿಳಿದಿರಲಿಲ್ಲ.
ಗುರುವಾಯೂರು ದೇವಸ್ವಂನಲ್ಲಿ ಪೀಡಿತ ಆನೆಗಳ ಮರಣೋತ್ತರ ಪರೀಕ್ಷೆಯ ವರದಿ ವಿಳಂಬವಾದಾಗ ಮತ್ತು ಹಲವರಿಗೆ ಸಿಗದಿದ್ದಾಗ ಗುರುವಾಯೂರು ದೇವಸ್ವಂನ ಹಲವು ರಹಸ್ಯಗಳು ಬಯಲಾಗಿವೆ. ತಲೆ, ಸೊಂಡಿಲು, ಮುಖ ಗಾಯಗೊಂಡಿರುವ ಮತ್ತೊಂದು ಆನೆ ನಂದನ್ ಸಂಪೂರ್ಣ ಆರೋಗ್ಯವಾಗಿಲ್ಲ ಎಂಬ ಸ್ಥಿತಿಯಲ್ಲಿದೆ. ಆಯುರ್ವೇದ ಔಷಧಗಳ ಮೂಲಕ ಆರೈಕೆ ಮಾಡಬೇಕಾದ ನಂದನ್ ಗೆ ಆಗಾಗ ಅಲೋಪತಿ ಔಷಧ ನೀಡಿ ಚಿಕಿತ್ಸೆ ನೀಡಲಾಗುತ್ತಿದೆ. ಹೀಗಾಗಿ ನಂದನ್ ನ ಬದುಕು ಈಗ ಚಿಂತಾಜನಕವಾಗಿದೆ. ಸುಮಾರು 65 ಆನೆಗಳನ್ನು ಹೊಂದಿದ್ದ ಗುರುವಾಯೂರು ದೇವಸ್ವಂ ಆನೆಧಾಮದಲ್ಲಿ ಈಗ ಉಳಿದಿರುವುದು ಕೇವಲ 41 ಆನೆಗಳು.
ದಾಮೋದರದಾಸ್ ಗೆ ತೀವ್ರ ಥಳಿತ: ಹೊರಜಗತ್ತಿಗೆ ತಿಳಿಯದಂತೆ ಗುರುವಾಯೂರ್ ಆನೆ ಲಾಯದಲ್ಲಿಯ ಕರುಣಾಜನಕ ಸ್ಥಿತಿ ಕಳವಳಕಾರಿ: ನಂದನ್ ನ ಜೀವವೂ ಆತಂಕದಲ್ಲಿ
0
ಮಾರ್ಚ್ 20, 2023