ಕಾಸರಗೋಡು: ಶತಮಾನದ ನಂತರ ಕಾಸರಗೋಡು ಮಧೂರು ಸನಿಹದ ಉಳಿಯ ಶ್ರೀ ಧನ್ವಂತರಿ ಸನ್ನಿಧಿಯಲ್ಲಿ ನಡೆಯುತ್ತಿರುವ ಕಳಿಯಾಟ ಮಹೋತ್ಸವದಲ್ಲಿ ಗುರುವಾರ ಇತ್ತಿಕಟ್ಟೆ ಚಾಮುಂಡಿ ದೈವ ಕೋಲ, ಅರೆಯಾಲ್ ಚಾಮುಂಡಿ ದೈವ ಹಾಗೂ ಸಂಜೆ ಪಡ್ಡೆಯಿ ಧೂಮವತೀ ದೈವದ ಕೋಲ ನಡೆಯಿತು.
3ರಂದು ಬೆಳಗ್ಗೆ 6ಕ್ಕೆ ರಕ್ತೇಶ್ವರಿ ದೈವ, 11ಕ್ಕೆ ಪಡ್ಡೆಯ ಧೂಮಾವತೀ ದೈವ, ಮಧ್ಯಾಹ್ನ 12ಕ್ಕೆ ಶ್ರೀ ವಿಷ್ಣುಮೂರ್ತಿ ದೈವ, 3ಕ್ಕೆ ಅಧಿಕಾರಿ ಚಾಮುಂಡಿ ದೈವದ ಕೋಲ, ಸಂಜೆ 5ಕ್ಕೆ ವಿಳಕ್ಕ್ ತಿರಿ, 5.30ಕ್ಕೆ ಭಂಡಾರದ ನಿರ್ಗಮನ ನಡೆಯುವುದು.
ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯುತ್ತಿದೆ.
ಶ್ರೀ ಧನ್ವಂತರಿ ಸನ್ನಿಧಿಯಲ್ಲಿ ಕಳಿಯಾಟ ಇಂದು ಸಂಪನ್ನ
0
ಮಾರ್ಚ್ 02, 2023
Tags