ಕುಂಬಳೆ: ಕೊಡ್ಯಮೆ ಸಮೀಪದ ಪುಂಡಿಕಟ್ಟೆ ಶ್ರೀಧೂಮಾವತಿ ಹಾಗೂ ಪರಿವಾರ ದೈವಗಳ ನೇಮೋತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಿತು. ಇದರ ಅಂಗವಾಗಿ ಗಣಹೋಮ, ತಂಬಿಲ ಸೇವೆ, ಮುಡಿಪು ಪೂಜೆ, ಶ್ರೀಧೂಮಾವತೀ ದೈವ, ಕೊರತಿಅಮ್ಮ, ಕಲ್ಲುರ್ಟಿ ಪಂಜುರ್ಲಿ, ಗುಳಿಗ ದೈವದ ಕೋಲ ನಡೆಯಿತು.
ಈ ಸಂದರ್ಭದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷ ದಯಾನಂದ ಜಿ.ಕತ್ತಲ್ಸಾರ್ ಧಾರ್ಮಿಕ ಉಪನ್ಯಾಸಗೈದು, ನಮ್ಮ ತುಳುವ ನೆಲದ ದೈವ ಆರಾಧನೆ ಆಂಗ್ಲರಿಂದಾಗಿ ದೆವ್ವವಾಗಿದ್ದು ಇದನ್ನು ಸರಿಯಾಗಿ ಮುಂದಿನ ಜನಾಂಗಕ್ಕೆ ತಿಳಿಸಿಕೊಡುವ ನಿಟ್ಟಿನಲ್ಲಿ ತರವಾಡು, ಕುಟುಂಬ ಪದ್ಧತಿ ಹಾಗೂ ಆರಾಧನೆ,ಸಂಪ್ರದಾಯಗಳನ್ನು ಕಿರಿಯರಿಗೆ ಕಡ್ಡಾಯವಾಗಿ ತೋರ್ಪಡಿಸುವ ಉದ್ದೇಶ ಪ್ರತಿಯೊಬ್ಬರಲ್ಲೂ ಇರಬೇಕು ಎಂದರು.
ತರವಾಡಿನ ಹಿರಿಯವರಾದ ಸಂಜೀವ ಶೆಟ್ಟಿ ಚಿಪ್ಪಾರು ಸಭೆಯ ಅಧ್ಯಕ್ಷತೆವಹಿಸಿದ್ದರು. ಉದ್ಯಾವರ ಮಾಡ ಅಣ್ಣ ದೈವದ ಪಾತ್ರಿ ಶ್ರೀರಾಜ ಬೆಳ್ಚಪ್ಪಾಡ ಮುಖ್ಯ ಅತಿಥಿಗಳಾಗಿದ್ದರು. ಈ ಸಂದರ್ಭದಲ್ಲಿ ದೈವಸ್ಥಾನದ ಮುಂಭಾಗ ಚಪ್ಪರ ನಿರ್ಮಾಣ ಕಾಮಗಾರಿ ನಿರ್ವಹಿಸಿದ ಬಾಲು ಪಡೀಲ್ ಅವರನ್ನು ಸನ್ಮಾನಿಸಲಾಯಿತು. ಸಂಜೀವ ಶೆಟ್ಟಿ ಮಾಡ, ವಸಂತ ಶೆಟ್ಟಿ ಮುಳ್ಳೇರಿಯ, ಜಯರಾಮ ಶೆಟ್ಟಿ ಪುತ್ತೂರು ಮತ್ತು ಕುಟುಂಬ ಸೇವಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಪುಂಡಿಕಟ್ಟೆ ಶ್ರೀಧೂಮಾವತಿ ಪರಿವಾರ ದೈವಗಳ ನೇಮೋತ್ಸವ: ಧಾರ್ಮಿಕ ಸಭೆ
0
ಮಾರ್ಚ್ 02, 2023