ತಿರುವನಂತಪುರ: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಕಪ್ಪು ಮುಖವಾಡ ಮತ್ತು ಕಪ್ಪು ಛತ್ರಿ ಹಿಡಿದು ಬಂದಿದ್ದ ಜನರಿಗೆ ಪ್ರವೇಶವನ್ನು ಪೊಲೀಸರು ನಿರಾಕರಿಸಲಾಗಿದೆ.
ಕ್ಯಾಲಿಕಟ್ ವಿಶ್ವವಿದ್ಯಾನಿಲಯದಲ್ಲಿ ಶನಿವಾರ ಈ ಘಟನೆ ನಡೆದಿದೆ.
ಪೊಲೀಸರ ವರ್ತನೆ ಖಂಡಿಸಿ ಅನೇಕರು ಆಕ್ಷೇಪ ವ್ಯಕ್ತಪಡಿಸಿದರು. ಆದರೆ, ಸಿಎಂ ಕಚೇರಿಯಿಂದ ನೀಡಲಾದ ಸೂಚನೆಗಳನ್ನು ನಾವು ಅನುಸರಿಸುತ್ತಿದ್ದೇವೆ ಎಂದು ಪೊಲೀಸರು ಸಮರ್ಥನೆ ಮಾಡಿಕೊಂಡಿದ್ದಾರೆ.
ಸಿಎಂ ವಿಜಯನ್ ಆಗಮನದ ಮುನ್ನ, ಕಪ್ಪು ವಸ್ತ್ರ ಧರಿಸಿದ್ದ ಮೂವರು ವಿದ್ಯಾರ್ಥಿನಿಯರು ಸೇರಿದಂತೆ ಐವರು ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವಿಜಯನ್ ನೇತೃತ್ವದ ಸರ್ಕಾರ ರಾಜ್ಯ ಬಜೆಟ್‌ನಲ್ಲಿ ಇಂಧನ ಉತ್ಪನ್ನಗಳ ಮೇಲೆ ₹2 ಸೆಸ್ ವಿಧಿಸಲು ನಿರ್ಧರಿಸಿದ್ದನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಇತ್ತೀಚೆಗೆ ಪ್ರತಿಭಟನೆ ನಡೆಸಿದ್ದರು.