ಕಣ್ಣೂರು: ಕುಡಿದ ಅಮಲಿನಲ್ಲಿ ಲಕ್ಕುಟ್ಟೆ ಮುತ್ತಪ್ಪ ದೇವಸ್ಥಾನಕ್ಕೆ ಬಂದು ಮಹಿಳೆಯೋರ್ವೆ ಬೆದರಿಕೆ ಹಾಕಿರುವ ವಿಡಿಯೋ ಭಾರೀ ವೈರಲ್ ಆಗಿದೆ.
ತಲಶ್ಶೇರಿಯ ಮುತ್ತಪ್ಪನ ದೇವಸ್ಥಾನಕ್ಕೆ ಪಿಣರಾಯಿಯ ರಸಿಲಾ ಎಂಬ ಯುವತಿ ಕುಡಿದು ಬಂದಿದ್ದಳು.
ವೀಡಿಯೊದಲ್ಲಿ, ರಾಸಿಲಾ ಮುತ್ತಪ್ಪ ದೈವದ ವೇಷಧರಿಸಿ ದರ್ಶನಕ್ಕೆ ಸಿದ್ದವಾದ ವ್ಯಕ್ತಿಗೆ ಮುತ್ತಿಕ್ಕಲು ಯತ್ನಿಸಿರುವುದು ವೀಡಿಯೋದಲ್ಲಿದೆ. ‘ನೀನು ನನ್ನ ಕನಸಿಗೆ ಬಂದರೆ ನಿನ್ನ ಹಾರ, ಹೂಗುಚ್ಛವೂ ಕೊರಳಲ್ಲಿರದು’ ಎಂದು ಬೆದರಿಸಿ ಐಷಾರಾಮಿ ಕಾರಿನಲ್ಲಿ ವಾಪಸು ತೆರಳುವುದನ್ನೂ ಕೂಡ ವಿಡಿಯೋದಲ್ಲಿ ಕಾಣಬಹುದು.
ಮುಸಲ್ಮಾನರಾದ ರಸೀಲಾ ಅವರು ಪಿಣರಾಯಿಯಲ್ಲಿ ಬಾಡಿಗೆ ಕ್ವಾರ್ಟರ್ಸ್‍ನಲ್ಲಿ ವಾಸಿಸುತ್ತಿದ್ದಾರೆ. ಕುಡಿದು ವಾಹನ ಚಲಾಯಿಸಿರುವ ರಸೀಲಾ ಇತರ ವಾಹನಗಳಿಗೆ ಡಿಕ್ಕಿಹೊಡೆದಿದ್ದು ಪ್ರಶ್ನಿಸಿದವರನ್ನು ಥಳಿಸಿದ್ದಾರೆ ಎಂದು ತಿಳಿದುಬಂದಿದೆ.
'ನನ್ನ ಕನಸಿಗೆ ಬಂದರೆ ನಿನ್ನ ಹಾರ, ಹೂಗುಚ್ಛ ಕೊರಳಲ್ಲಿರದು: ಲಕ್ಕುಟ್ಟ್ ದೈವಸ್ಥಾನಕ್ಕೆ ಕುಡಿದು ಬಂದು ಮುತ್ತಪ್ಪನಿಗೆ ಬೆದರಿಕೆ ಹಾಕಿದ ಯುವತಿ
0
ಮಾರ್ಚ್ 05, 2023