ಕಾಸರಗೋಡು : ಕೇರಳ ಪ್ರದೇಶ್ ಸ್ಕೂಲ್ ಟೀಚರ್ಸ್ ಅಸೋಸಿಯೇಶನ್(ಕೆಪಿಎಸ್‍ಟಿಎ)ಕಾಸರಗೋಡು ಉಪಜಿಲ್ಲಾ ಘಟಕ ವತಿಯಿಂದ' 2023 ನೇ ಸಾಲಿನಲ್ಲಿ ನಿವೃತ್ತರಾದ ಶಿಕ್ಷಕರ ಬೀಳ್ಕೊಡುಗೆ ಸಮಾರಂಭ'ಗುರುಚರಣಂ' ಕಾರ್ಯಕ್ರಮ ಕಾಸರಗೋಡಲ್ಲಿ ಜರುಗಿತು. ಕೆಪಿಸಿಸಿ ಕಾರ್ಯದರ್ಶಿ ಬಾಲಕೃಷ್ಣನ್ ಪೆರಿಯ ಸಮಾರಂಭ ಉದ್ಘಾಟಿಸಿದರು. ಸಭೆಯಲ್ಲಿ ಸಂಘಟನೆ ಉಪಜಿಲ್ಲಾ ಅಧ್ಯಕ್ಷ ಕೆ.ಎ. ಜಾನ್ ಉಸ್ತುವಾರಿ ವಹಿಸಿದ್ದರು.
ರಾಜ್ಯ ಸಮಿತಿ ಕಾರ್ಯಕಾರಿ ಸಮಿತಿ ಸದಸ್ಯ ಅನಿಲ್ ಕುಮಾರ್ ಕೆ, ಜಿಲ್ಲಾಧ್ಯಕ್ಷ ಪ್ರಶಾಂತ ಕಾನತ್ತೂರ್, ಜಿಲ್ಲಾ ಕಾರ್ಯದರ್ಶಿ ಕೆ.ಶ್ರೀನಿವಾಸನ್, ರಾಜ್ಯ ಸಮಿತಿ ಸದಸ್ಯರಾದ ಶ್ರೀನಿವಾಸನ್, ಅಶೋಕನ್ ಕೋಡೋತ್, ಪಿ.ಟಿ. ಬೆನ್ನಿ ಉಪಸ್ಥಿತರಿದ್ದರು. ಶೋಭನಾ ಎ, ವಾಸುದೇವನ್ ನಂಬೂತಿರಿ, ಸಿ.ಕೆ.ವೇಣು, ಜೋಮಿ ಟಿ.ಜೋಸ್, ಎ. ಜಯದೇವನಿ, ಸ್ವಪ್ನಾ ಜಾರ್ಜ್, ಆರ್.ವಿ. ಪ್ರೇಮಾನಂದನ್ ಮತ್ತಿತರರು ಅಭಿನಂದನಾ ಭಾಷಣ ಮಾಡಿದರು. ಸೇವೆಯಿಂದ ನಿವೃತ್ತರಗುತ್ತಿರುವ ಶೀಲಾ ಚಾಕೋ, ರಮಾ ಎ.ಕೆ., ಗೀತಾ ಎಂ. ಸೇರಿದಂತೆ 16ಮಂದಿ ಹಿರಿಯ ಶಿಕ್ಷಕರನ್ನು ಶಾಲು ಹೊದಿಸಿ, ಸಮರಣಿಕೆ ನೀಡಿ ಗೌರವಿಸಲಾಯಿತು. ಉಪಜಿಲ್ಲಾ ಕಾರ್ಯದರ್ಶಿ ಪಿ.ಹರೀಶ್ ಪ್ರಸಾದ್ ಸ್ವಾಗತಿಸಿದರು. ರಜನಿ ಕೆ.ಜೋಸೆಫ್ ವಂದಿಸಿದರು.
ನಿವೃತ್ತರಾಗಲಿರುವ ಶಿಕ್ಷಕರಿಗೆ ಕೆಪಿಎಸ್‍ಟಿಎ ವತಿಯಿಂದ ಬೀಳ್ಕೊಡುಗೆ
0
ಮಾರ್ಚ್ 18, 2023