ಬದಿಯಡ್ಕ: ಬದಿಯಡ್ಕ ಗ್ರಾಮದ ಪ್ರತಿಷ್ಠಿತ ಒಂದನೇ ಬಂಟ ಮನೆತನವಾದ ಪೆರಡಾಲ ಗುತ್ತಿನ ತರವಾಡು ಮನೆಯ ಪ್ರತಿμÁ್ಠ ಬ್ರಹ್ಮ ಕಲಶೋತ್ಸವ ಧರ್ಮದೇವ ಪಡ್ದಯಿ ಧೂಮಾವತಿ, ಕುಪ್ಪೆ ಪಂಜುರ್ಲಿ, ಕೊರತ್ತಿ, ಗುಳಿಗ ಪ್ರತಿμÉ್ಠ ಮತ್ತು ನಾಗದೇವರ ಪುನರ್ ಪ್ರತಿಷ್ಠೆ ಮಾರ್ಚ್ 30,31, ಏಪ್ರಿಲ್ ಒಂದು ವಿವಿಧ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ವಿಜ್ರಂಭಣೆಯಿಂದ ನಡೆಯಲಿದ್ದು, ಆಮಂತ್ರಣ ಪತ್ರಿಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರ ಆಶೀರ್ವಾದದೊಂದಿಗೆ ಪೆರಡಾಲ ಉದನೇಶ್ವರ ಕ್ಷೇತ್ರದಲ್ಲಿ ಪ್ರಾರ್ಥನೆಯೊಂದಿಗೆ ಭಾನುವಾರ ತರವಾಡು ಮನೆಯಲ್ಲಿ ಬಿಡುಗಡೆಗೊಳಿಸಲಾಯಿತು.
ಸಾಮಾಜಿಕ ಧಾರ್ಮಿಕ ರಾಜಕೀಯ ಕ್ಷೇತ್ರದ ಮುಂದಾಳು ಪೆರಡಾಲ ಗುತ್ತು ಯಜಮಾನ ಪಿ.ಜಿ. ಚಂದ್ರಹಾಸ ರೈ ಬಿಡುಗಡೆಗೊಳಿಸಿದರು. ಪೆರಡಾಲ ಗುತ್ತು ಫ್ಯಾಮಿಲಿ ವೆಲ್ಫೇರ್ ಟ್ರಸ್ಟಿನ ಕಾರ್ಯದರ್ಶಿ ಶ್ರೀ ಪಿಜಿ ಜಗನ್ನಾಥ ರೈ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಕೃಷ್ಣ ರೈ ಬೆಳಿಂಜ, ಸುಂದರ್ ರೈ ಕೈಕ್ಕಾರ್, ನಾರಾಯಣ ರೈ ಕಾಸರಗೋಡು, ಸರೋಜಿನಿ ರೈ , ಗ್ರಾಮ ಪಂಚಾಯತಿ ಸದಸ್ಯ ರವಿಕುಮಾರ್ ರೈ, ಹರೀಶ್ ರೈ, ಶ್ರವಣ್ ಕುಮಾರ್ ರೈ ಪೆರಡಾಲ, ಪ್ರವೀಣ್ ಕುಮಾರ್ ರೈ , ಭರತ್ ರೈ, ರಾಧಿಕಾ ಶೆಟ್ಟಿ ಮಂಗಳೂರು, ವಿನಯ ಜೆ .ರೈ, ಕುಟುಂಬ ಸದಸ್ಯರು ಬಂಧುಗಳು ಉಪಸ್ಥಿತರಿದ್ದರು. ನಿರಂಜನ ರೈ ಪೆರಡಾಲ ಕಾರ್ಯಕ್ರಮ ನಿರ್ವಹಿಸಿದರು.
ಪೆರಡಾಲ ಗುತ್ತು ತರವಾಡುಮನೆ ಪ್ರತಿಷ್ಠಾ ಮಹೋತ್ಸವ ಮತ್ತು ನೇಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ
0
ಮಾರ್ಚ್ 06, 2023
Tags