ಕುಂಬಳೆ: ಕಳತ್ತೂರಿನಲ್ಲಿರುವ ಇಚ್ಲಂಪಾಡಿ ಹಿರಿಯ ಬುನಾದಿ ಶಾಲಾ ಅಮೃತಮಹೋತ್ಸವ ಹಾಗೂ ಹಳೇ ವಿದ್ಯಾರ್ಥಿ ಸಂಘದ ಸುವರ್ಣ ಮಹೋತ್ಸವ ಕಾರ್ಯಕ್ರಮ ಜರುಗಿತು. ಉದ್ಯಮಿಯಾಗಿರುವ ಕೊಡುಗೈದಾನಿ, ಶಾಲಾ ಅಮೃತ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷ ಕೆ.ಕೆ.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕ್ಯಾಂಪೆÇ್ಕದ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿ ಶಶಿಧರ, ಕುಂಬಳೆ ಗ್ರಾ.ಪಂ.ಸದಸ್ಯೆ ಪುಷ್ಪಲತಾ ಪಿ.ಶೆಟ್ಟಿ, ಕುಂಬಳೆ ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಮಂಜುನಾಥ ಆಳ್ವ, ಕ್ಯಾಂಪೆÇ್ಕ ನಿರ್ದೇಶಕ ಸುರೇಶ್ ಕುಮಾರ್ ಶೆಟ್ಟಿ, ಕುಂಬಳೆ ಗ್ರಾ.ಪಂ.ಮಾಜಿ ಸದಸ್ಯ ಸುಕೇಶ್ ಭಂಡಾರಿ, ಪುತ್ತಿಗೆ ಗ್ರಾ.ಪಂ.ಸದಸ್ಯೆ ಜಯಂತಿ, ಅಸಿಸ್ಟೆಂಟ್ ಫೆÇ್ರೀಪೆಸರ್ ಪೂಜಾ ರೈ, ಪಿಟಿಎ ಉಪಾಧ್ಯಕ್ಷ ರಾಧಾಕೃಷ್ಣ ಬೆಜಪ್ಪೆ, ಮಾತೃಸಂಘದ ಅಧ್ಯಕ್ಷೆ ಶ್ರೀಲತಾ ಹಳೆಮನೆ, ಶಾಲಾ ಪ್ರಬಂಧಕ ಎಂ.ಗಣೇಶ್ ರಾವ್, ಶಾಲಾ ಮುಖ್ಯ ಶಿಕ್ಷಕ ರಾಧಾಕೃಷ್ಣ ತುಂಗ ಕೆ.ಎಸ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಶಾಲಾ ಅಮೃತ ಮಹೋತ್ಸವಕ್ಕೆ ಸಹಕರಿಸಿದ ಗಣ್ಯರನ್ನು ಅಭಿನಂದಿಸಲಾಯಿತು. ಶಿಕ್ಷಕ ಮೋಹನಚಂದ್ರ ದೊಡ್ಡಮಾಣಿ ಅಭಿನಂದಿತರನ್ನು ಪರಿಚಯಿಸಿದರು. ಈ ಸಂದರ್ಭ ವಿವಿಧ ರಂಗದಲ್ಲಿ ಸಾಧನೆಗೈದ ಶಾಲಾ ಹಳೆ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಹಿರಿಯ ಅಧ್ಯಾಪಕ ಬಾಲಕೃಷ್ಣ ಆಚಾರಿ ವರದಿ ವಾಚಿಸಿದರು. ಶಾಲಾ ಹಳೇ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಬೆಜಪ್ಪೆ ವರದಿ ಮಂಡಿಸಿದರು. ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ಎಚ್ ಶಿವರಾಮ ಭಟ್ ಸ್ವಾಗತಿಸಿದರು. ಉಮೇಶ್ ಜಿ.ಎನ್. ಕಾರ್ಯಕ್ರಮ ನಿರೂಪಿಸಿದರು.ಅಮೃತ ಮಹೋತ್ಸವದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಆಳ್ವ ಕಳತ್ತೂರು ವಂದಿಸಿದರು .
ಕಾರ್ಯಕ್ರಮದ ಅಂಗವಾಗಿ ಶಾಲಾ ಹಳೇ ವಿದ್ಯಾರ್ಥಿಗಳಿಂದ ನೃತ್ಯ ಹಾಗೂ 'ತುಂಗಭದ್ರ' ತುಳು ನಾಟಕ ಪ್ರದರ್ಶನಗೊಂಡಿತು.
ಇಚ್ಲಂಪಾಡಿ ಶಾಲಾ ಅಮೃತಮಹೋತ್ಸವ, ಹಳೇ ವಿದ್ಯಾರ್ಥಿ ಸಂಘದ ಸುವರ್ಣ ಮಹೋತ್ಸವ ಸಮಾರಂಭ
0
ಮಾರ್ಚ್ 18, 2023