HEALTH TIPS

ಮೀಯಪದವಲ್ಲಿ ಭಾರತೀಯ ಕಿಸ|ಆನ್ ಸಂಘದ ಸ್ಥಾಪನಾ ದಿನ


               ಮಂಜೇಶ್ವರ: : ಭಾರತೀಯ ಕಿಸಾನ್ ಸಂಘದ ಸ್ಥಾಪನಾ ದಿನಾಚರಣೆ ಮೀಯಪದವು ಶಾಲಾ ವಠಾರದಲ್ಲಿ ಜರಗಿತು. ರಾಮ ಮಾಸ್ತರ್ ಕಳತ್ತೂರು ಈ ಸಂದರ್ಭ ಮಾತನಾಡಿ 1979 ಮಾರ್ಚ್ 4ರಂದು ಭಾರತೀಯ ಕಿಸಾನ್ ಸಂಘದ ಆರಂಭದ ಬಗ್ಗೆ ದತ್ತೋ ಪಂತ್ ರೇಂಗಡಿಜೀಯವರು ರಾಷ್ಟ್ರೀಯ ಸ್ವಯಂ ಸೇವ ಸಂಘಕ್ಕೆ ಕೃಷಿಕರ ಸಂಘಟನೆಯೊಂದರ ಅಗತ್ಯತೆಯನ್ನು ಕಂಡುಕೊಂಡು ಕೃಷಿಕರ ಬಗ್ಗೆ ಹೋರಾಟ ಮಾಡಲು ಭಾರತೀಯ ಕಿಸಾನ್ ಸಂಘವನ್ನು ಸ್ಥಾಪಿಸಿದರು. ಕೃಷಿಕರು ಬೆಳೆದ ಬೆಳೆಗೆ ನ್ಯಾಯಬೆಲೆ ನಿರ್ಧರಿಸುವುದು ದಲ್ಲಾಳಿಗಳ ಅಥವಾ ಅಂಗಡಿಯವರು ಕಷ್ಟಪಟ್ಟು ದುಡಿದ ರೈತರಿಗೆ ತಮ್ಮ ವಸ್ತುಗಳಿಗೆ ಸರಿಯಾದ ಬೆಲೆ ಸಿಗದೆ ನಷ್ಟವನ್ನು ಅನುಭವಿಸುತ್ತಾರೆ. ಕೃಷಿಕನೊಬ್ಬ ಋಷಿಗೆ ಸಮಾನ. ದಿನದ ಹೆಚ್ಚಿನ ಸಮಯ ಕೆಲಸದಲ್ಲಿ ತೊಡಗಿಸಿಕೊಂಡು ಕೃಷಿ ಉತ್ಪಾದನೆ ಮಾಡುತ್ತಾರೆ. ಕೃಷಿಕ ದುಡಿಯದಿದ್ದರೆ ದೇಶದ ಜನರು ಆಹಾರವಿಲ್ಲದೆ ತೊಂದರೆಗೀಡಾಗಬಹುದು. ಇದಕ್ಕಾಗಿ ಕೇಂದ್ರ ಸರಕಾರವು ಕೃಷಿಕರಿಗೆ ಬೆನ್ನೆಲುಬಾಗಿ ನಿಂತು ಸರ್ವ ವಿಧದಲ್ಲಿ ಆರ್ಥಿಕವಾಗಿಯೂ ಸಹಕರಿಸುತ್ತಿರಬೇಕು. ಈಗಿನ ಮೋದಿ ಆಡಳಿತೆಯಿಂದ ಕೃಷಿಕರು ಉಸಿರು ಬಿಡುವಂತಾಗಿದೆ ಎ|ಂದು ಉದ್ಘಾಟಿಸಿ ತಿಳಿಸಿದರು.
             ಅಧ್ಯಕ್ಷತೆ ವಹಿಸಿದ್ದ ಶಂಕರನಾರಾಯಣ ಭಟ್ ಮಾತನಾಡಿ, ಈಗಿನ ಸ್ಥಿತಿಯಲ್ಲಿ ಸಾವಯವ ಕೃಷಿ ಮಾಡುವುದು. ಇದಕ್ಕಾಗಿ ಗೋಸಾಕಾಣೆ ಅತೀ ಅಗತ್ಯ. ರಾಸಾಯನಿಕಗಳಿಂದ ಕೃಷಿ ಮಾಡಿ ಆಹಾರ ವಸ್ತುಗಳಿಂದ ಜನರಿಗೆ ಮಾರಕ ರೋಗಗಳು ಬಂದು ಜನರಿಗೆ ನೆಮ್ಮದಿಯಿಲ್ಲ. ಹಿಂದಿನ ಕಾಲದಲ್ಲಿ ಜನರು ಆರೋಗ್ಯವಂತರಾಗಿದ್ದು 70 ವರ್ಷಕ್ಕಿಂತ ಮೆಲೆ ಬದುಕುತ್ತಿದ್ದರು. ಈಗಿನ ಜನರು 50 ವರ್ಷಾನಂತರ ಸಾಯುವಂತಾಗುತ್ತದೆ. ಇದಕ್ಕೆ ಮುಖ್ಯವಾಗಿ ಗೋ ಆಧಾರಿತ ಕೃಷಿಯನ್ನು ಹೆಚ್ಚೆಚ್ಚು ಅನುಸರಿಸಬೇಕೆಂದರು.
       ಜಿಲ್ಲಾ ಕಾರ್ಯದರ್ಶಿ ಸದಾನಂದ ಶೆಟ್ಟಿ  ಕೊಮ್ಮಂಡ ಧ್ವಜಾರೋಹಣಗೈದರು. ಮಂಜೇಶ್ವರ ಬ್ಲಾಕ್ ಸದಸ್ಯ ಕೆ.ವಿರಾಧಾಕೃಷ್ಣ ಭಟ್, ಭಾರತೀಯ ಕಿಸಾನ್ ಸಂಘದ ಉಪಾಧ್ಯಕ್ಷ ಬಾಲಕೃಷ್ಣ ಕೋಡಿ ಉಪಕಾರ್ಯದರ್ಶಿ ಕೇಶವ ಪ್ರಕಾಶ್ ಸದಸ್ಯರಾದ ಹರೀಶ್.ಡಿ ಉಪಸ್ಥಿತರಿದ್ದರು.  ಬಲರಾಮ ಪ್ರಾರ್ಥನೆ ಸ್ತುತಿ ಹಾಡಿ ಭಾರತೀಯ ಕಿಸಾನ್ ಸಂಘ ಮೀಂಜ ಸಂಚಾಲಕ ಜಗನ್ನಾಥ ಮಾಸ್ಟರ್ ಸ್ವಾಗತಿಸಿದರು. ಕಾರ್ಯದರ್ಶಿ ಸತೀಶ್ಚಂದ್ರ ರೈ ವಂದಿಸಿದರು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries