ಮಂಜೇಶ್ವರ : ದೆಹಲಿ ಕೇಂದ್ರೀಕರಿಸಿ ನಡೆದಿರುವ ಕೋಟ್ಯಂತರ ರೂ, ಮೌಲ್ಯದ ಹವಾಲಾ ವ್ಯವಹಾರಗಳಿಗೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಏಜನ್ಸಿ(ಎನ್.ಐ.ಎ)ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ವ್ಯಕ್ತಿಯೊಬ್ಬನನ್ನು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸಿರುವ ಬಗ್ಗೆ ಮಾಹಿತಿ ಲಭಿಸಿದೆ. ವ್ಯಕ್ತಿಯ ಬಗ್ಗೆ ಯಾವುದೇ ಮಾಹಿತಿ ಬಹಿರಂಗ ಪಡಿಸಿಲ್ಲ. ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರಿನಲ್ಲಿ ಬಂಧಿತನಾದ ವ್ಯಕ್ತಿ ನೀಡಿರುವ ಮಾಹಿತಿ ಹಿನ್ನೆಲೆಯಲ್ಲಿ ಮಂಜೇಶ್ವರದಲ್ಲಿ ಕಾರ್ಯಾಚರಣೆ ನಡೆಸಿದೆಯೆನ್ನಲಾಗಿದೆ. ಕೊಚ್ಚಿಯಲ್ಲೂ ದಾಳಿ ನಡೆಸಿರುವ ಎನ್‍ಐಎ ತಂಡ ಎಡವನಕ್ಕಾಡ್ ವಳಂಙÉೂೀತ್ ನಿವಾಸಿ, ಪೇಂಟಿಂಗ್ ಕಾರ್ಮಿಕ ಇರ್ಷಾದ್ ಎಂಬಾತನನ್ನು ವಶಕ್ಕೆ ತೆಗೆದುಕೊಂಡಿದೆ. ಈ ಹಿಂದೆ ಬಂಧಿತನಾಗಿರುವ ಪಾಪ್ಯುಲರ್ ಫ್ರಂಟ್‍ನ ಆಯುಧ ತರಬೇತುದಾರ ಎಡವನಕ್ಕಾಡ್ ನಿವಾಸಿ ಮಹಮ್ಮದ್ ಮುಬಾರಕ್ ಎಂಬಾತನ ಮನೆಗೂ ಎನ್‍ಐಎ ತಮಡ ದಾಳಿ ನಡೆಸಿ ತಪಾಸಣೆ ನಡೆಸಿದೆ.
ಹವಾಲಾ ವ್ಯವಹಾರ: ಮಂಜೇಶ್ವರದಲ್ಲಿ ಎನ್‍ಐಎ ದಾಳಿ
0
ಮಾರ್ಚ್ 06, 2023
Tags