ಕಾಸರಗೋಡು : ತ್ಯಾಜ್ಯ ನಿರ್ವಹಣಾ ಕ್ಷೇತ್ರದಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ಪತ್ತೆ ಹಚ್ಚಿ
ಕಾನೂನು ಕ್ರಮ ಕೈಗೊಳ್ಳಲು ರಚಿಸಲಾಗಿರುವ ವಿಶೇಷ ತಂಡ ಜಿಲ್ಲೆಯಲ್ಲಿ ತಪಾಸಣೆ
ಆರಂಭಿಸಿದೆ. ಮೊದಲ ದಿನ ಕಾಸರಗೋಡು ಪುರಸಭಾ ವ್ಯಾಪ್ತಿಯ ಹಳೆ ಬಸ್ ನಿಲ್ದಾಣದ
ಅಂಗಡಿಗಳನ್ನು ಪರಿಶೀಲಿಸಲಾಯಿತು.
ತಪಾಸಣೆ ವೇಳೆ ಅಂಗಡಿಗಳಿಂದ 35 ಕೆಜಿ ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ ರಸ್ತೆಬದಿಯಲ್ಲಿ ಪ್ಲಾಸ್ಟಿಕ್ ಕವರ್‌ಗಳಲ್ಲಿ ವಸ್ತುಗಳನ್ನು ಮಾರಾಟ ಮಾಡುವವರಿಗೆ ಎಚ್ಚರಿಕೆ ನೀಡಲಾಗಿದೆ. ಹಳೆ ಬಸ್ ನಿಲ್ದಾಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾರ್ಜಿನ್ ಫ್ರೀ ಸೂಪರ್ ಮಾರ್ಕೆಟ್ ಗೆ 10000 ರೂ.ದಂಡ ವಸೂಲಿ ನೋಟಿಸ್ ನೀಡಲಾಗಿದೆ. ವಶಪಡಿಸಿಕೊಂಡ ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳನ್ನು ನಗರಸಭೆಗೆ ಹಸ್ತಾಂತರಿಸಲಾಗಿದೆ. ಮುಂದಿನ ದಿನಗಳಲ್ಲಿಯೂ ತಪಾಸಣೆ ನಸಲಾಗುವುದು. ಜಿಲ್ಲಾ ನೈರ್ಮಲ್ಯ ಮಿಷನ್ ಎನ್ಫೋಸ್ಮೇಂಟ್ ಅಧಿಕಾರಿಯ ನೇತೃತ್ವದಲ್ಲಿ ನಗರಸಭೆಯ ಆರೋಗ್ಯ ಇಲಾಖೆ ಅಧಿಕಾರಿಗಳು, ಆಂತರಿಕ ಜಾಗೃತ ಇಲಾಖೆ ಅಧಿಕಾರಿಗಳು, ಜಿಲ್ಲಾ ಜಂಟಿ ನಿರ್ದೇಶಕರ ಕಚೇರಿಯ ಅಧಿಕಾರಿಗಳು ಪರಿಶೀಲನೆ ನಡೆಸಿದರು.