ಮುಳ್ಳೇರಿಯ: ದೇವಸ್ಥಾನಗಳು ಸಮಾಜದ ಶಕ್ತಿ ಕೇಂದ್ರಗಳಾಗಿವೆ .ಹಿಂದೆ ಹಲವಾರು ಸಲ ದೇವಸ್ಥಾನಗಳ ಮೇಲೆ ದಾಳಿ ನಡೆದರೂ, ಹಿಂದೂ ಶಕ್ತಿಗಳು ಈ ದೇವಸ್ಥಾನಗಳನ್ನು ಪುನಃ ನಿರ್ಮಿಸಿ ನಮ್ಮ ಏಕತೆಯ ಕೇಂದ್ರಗಳಾಗಿಸಿವೆ ಎಂದು ಉಪನ್ಯಾಸಕ, ಚಿಂತಕ ರಾಜೇಶ್ ಪದ್ಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.
ವಲವಡಲ ಶ್ರೀ ಮಹಾದೇವ ಮಹಾವಿಷ್ಣು ಜೋಡು ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವದ ಆರನೇ ದಿನವಾದ ಗುರುವಾರ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು.
ಚಿನ್ಮಯ ಮಿಷನ್ ಕೇರಳದ ಸ್ಥಳೀಯ ಮುಖ್ಯಸ್ಥ ಸ್ವಾಮಿ ವಿವಿಕ್ತಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿ ಹಿಂದುಗಳು ಹಲವು ದೇವರನ್ನು ಪೂಜಿಸುವವರಾದರೂ ದೇವರೊಂದು ನಾಮ ಹಲವು ಎಂಬ ತತ್ವ ನಿಕ್ಷಿಪ್ತ ತತ್ವ ಮೂಲದಲ್ಲಿದೆ. ಆದ್ದರಿಂದ ಜೋಡು ದೇವಸ್ಥಾನದಲ್ಲಿ ಶಿವ ಹಾಗೂ ವಿಷ್ಣು ಸಮಾನರು. ಹರಿಹರ ಸಾನಿಧ್ಯವು ಅಪೂರ್ವವಾದದ್ದು ಎಂದರು.
ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಮವ್ವಾರು ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಸಂಜೀವ ಶೆಟ್ಟಿ ವಹಿಸಿದ್ದರು. ಪುತ್ತೂರು ಶ್ರೀಮಹಾಲಿಂಗೇಶ್ವರ ಕ್ಷೇತ್ರದ ಅಧ್ಯಕ್ಷ ಹಾಗೂ ಮುಳಿಯ ಜ್ಯುವೆಲ್ಲರಿಯ ಚೆಯರ್‍ಮೆನ್ ಕೇಶವ ಪ್ರಸಾದ್ ಮುಳಿಯ, ಮುಳಿಯಾರು ದೇವಸ್ಥಾನದ ಮೊಕ್ತೇಸರ ಸೀತಾರಾಮ ಬಳ್ಳುಳ್ಳಾಯ, ಬ್ರಹ್ಮಕಲಶೋತ್ಸವ ಸಮಿತಿ ಪದಾಧಿಕಾರಿಗಳಾಗಿರುವ ಸೀತಾರಾಮ ಕುಂಜತ್ತಾಯ, ವಸಂತ ಕಾರ್ಲೆ, ಬಾಲಕೃಷ್ಣ ಭಟ್ ಕೋಳಿಕ್ಕಜೆ ಉಪಸ್ಥಿತರಿದ್ದರು.
ಸಂಧ್ಯಾ ಕೋರೆಕ್ಕಾನ ಪ್ರಾರ್ಥನೆ ಹಾಡಿದರು. ಚಂದ್ರನ್ ಸಿ ಎಚ್ ಚನ್ನಂಗೋಡು ಕಾರ್ಯಕ್ರಮ ನಿರೂಪಿಸಿದರು. ವಿಜಯನ್ ಬಾಜಿತ್ರ್ತೊಟಿ ಸ್ವಾಗತಿಸಿ, ಕೃμÉ್ಣೂೀಜಿ ಮಾಸ್ತರ್ ವಂದಿಸಿದರು.
ಶಿವ ಸಾನ್ನಿಧ್ಯದಲ್ಲಿ ಪ್ರಾತಃಕಾಲ 108 ತೆಂಗಿನಕಾಯಿ ಗಣ ಹೋಮ, ಪ್ರತಿಷ್ಠಾ ಬಲಿ, ಮಹಾಪೂಜೆ, ಮಂತ್ರಾಕ್ಷತೆ, ರಕ್ತೇಶ್ವರಿ, ಉಳ್ಳಾಕ್ಳು, ಕೊರತಿ, ನಾಗ, ಧೂಮಾವತಿ ಮೊದಲಾದ ಸಾನಿಧ್ಯದಲ್ಲಿ ಪ್ರತಿಷ್ಠೆಗಳು ನಡೆದವು.
ಸಂಜೆ ಶ್ರೀಕಾವಿಲ್ ಭಜನಾ ಸಂಘ ಕೋಳಿಯಡ್ಕ ಇವರಿಂದ ಭಜನಾ ಸೇವೆ, ಶ್ರೀ ಬಾಲಸುಬ್ರಮಣ್ಯ ಭಟ್ ಕೋಳಿಕ್ಕಜೆ ಮತ್ತು ಬಳಗ ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ,ಮತ್ತು ಶ್ರೀ ಚಾಕಟೆ ಚಾಮುಂಡಿ ಪ್ರಸಾದಿತ ಯಕ್ಷಗಾನ ಕಲಾ ಮಂಡಳಿ ಕೋಳಿಯಡ್ಕ ಇವರಿಂದ ಮಹಿಷ ವಧೆ ಯಕ್ಷಗಾನ ಬಯಲಾಟ ಜರಗಿತು.