HEALTH TIPS

ತನ್ನ ವೈಫಲ್ಯದಿಂದ ಗಮನ ಸೆಳೆಯಲು ಭಾರತದ ವಿರುದ್ಧ ಪಾಕ್ ಅಪಪ್ರಚಾರ

 

                 ನವದೆಹಲಿ: 'ಪಾಕಿಸ್ತಾನವು ತನ್ನಲ್ಲಿನ ರಾಜಕೀಯ ಮತ್ತು ಆರ್ಥಿಕ ವೈಫಲ್ಯಗಳಿಂದ ಜನರ ಗಮನವನ್ನು ಇತರೆಡೆಗೆ ಸೆಳೆಯಲು ಭಾರತದ ವಿರುದ್ಧ ಕಟ್ಟು ಕಥೆ ಅಥವಾ ಅಪಪ್ರಚಾರದಲ್ಲಿ ತೊಡಗಿಕೊಂಡಿದೆ' ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು 2022ರ ತನ್ನ ವಾರ್ಷಿಕ ವರದಿಯಲ್ಲಿ ಸೋಮವಾರ ಹೇಳಿದೆ.

                     'ಪಾಕಿಸ್ತಾನದೊಂದಿಗೆ ಭಾರತವು ಸಾಮಾನ್ಯ ನೆರೆಯ ಸಂಬಂಧವನ್ನಷ್ಟೇ ಬಯಸುತ್ತದೆ. ಭಯೋತ್ಪಾದನೆ ಮತ್ತು ಹಿಂಸಾಚಾರ ಮುಕ್ತ ವಾತಾವರಣದಲ್ಲಿ ಯಾವುದೇ ವಿಚಾರವವನ್ನು ದ್ವಿಪಕ್ಷೀಯವಾಗಿ ಶಾಂತಿಯುತ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬೇಕೆಂಬುದು ಭಾರತದ ಸ್ಥಿರವಾದ ನಿಲುವು. ಅಂತಹ ಅನುಕೂಲಕರ ವಾತಾವರಣವನ್ನು ಸೃಷ್ಟಿಸುವ ಜವಾಬ್ದಾರಿಯು ಪಾಕಿಸ್ತಾನದ ಮೇಲಿದೆ' ಎಂದೂ ಸಚಿವಾಲಯ ಅಭಿಪ್ರಾಯಪಟ್ಟಿದೆ.

                'ಪಾಕಿಸ್ತಾನ ಪ್ರಾಯೋಜಿತ ಗಡಿಯಾಚೆಗಿನ ಭಯೋತ್ಪಾದನೆಗೆ ಯಾವುದೇ ಕಡಿವಾಣ ಹಾಕಿಲ್ಲ. 26/11ರ ಮುಂಬೈ ಭಯೋತ್ಪಾದನಾ ದಾಳಿಯ ಸಂತ್ರಸ್ತರ ಕುಟುಂಬಗಳಿಗೆ ನ್ಯಾಯ ಒದಗಿಸುವಲ್ಲಿ ಇಸ್ಲಾಮಾಬಾದ್ ಪ್ರಾಮಾಣಿಕತೆಯಿಂದ ನಡೆದುಕೊಂಡಿಲ್ಲ' ಎಂದು ವರದಿಯಲ್ಲಿ ಹೇಳಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries