ಕಾಸರಗೋಡು: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಕೇರಳ ಎನ್.ಜಿ.ಓ ಸಂಘ, ಕಾಸರಗೋಡು ಜಿಲ್ಲಾ ಸಮಿತಿಯ ಆಶ್ರಯದಲ್ಲಿ ಕಾಸರಗೋಡು ನಗರಸಭಾ ಸದಸ್ಯೆ ಸವಿತಾ ಟೀಚರ್ ಅವರನ್ನು ಗೌರವಿಸಲಾಯಿತು.
ಕಾಸರಗೋಡು ಜಿಲ್ಲೆಯ ಕನ್ನಡ ಪ್ರದೇಶದ ವಿದ್ಯಾರ್ಥಿಗಳಿಗೆ ಜ್ಞಾನದಾನ ಮಾಡುವ ಮೂಲಕ ಸಮಾಜ ಸೇವಾ ಕ್ಷೇತ್ರದಲ್ಲಿ ವಿಶೇಷ ಸಾಧನೆ ತೋರಿರುವ ಹಿನ್ನೆಲೆಯಲ್ಲಿ ಸನ್ಮಾನ ಆಯೋಜಿಸಲಾಗಿತ್ತು. ಎನ್‍ಜಿಓ ಸಂಘ್ ಮಹಿಳಾ ವಿಭಾಗದ ಜಿಲ್ಲಾ ಉಪಾಧ್ಯಕ್ಷೆ ಶಾಂತಾ, ಕೇರಳ ಎನ್‍ಜಿಒ ಸಂಘದ ಜಿಲ್ಲಾಧ್ಯಕ್ಷ ವಿಜಯ ಸಿ, ಕರುಣಾಕರ, ಶ್ಯಾಮ್ ಪ್ರಸಾದ್ , ಸತೀಶ್ ನೆಲ್ಲಿಕುಂಜೆ ಉಪಸ್ಥಿತರಿದ್ದರು.
ಮಹಿಳಾ ದಿನಚರಣೆ: ಎನ್‍ಜಿಓ ಸಂಘ್ ವತಿಯಿಂದ ಗೌರವಾರ್ಪಣೆ
0
ಮಾರ್ಚ್ 10, 2023
Tags