HEALTH TIPS

ಪೊಲೀಸ್ ಇಲಾಖೆಯೊಳಗಿನ ಕ್ರಿಮಿನಲ್‍ಗಳ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು-ಬಿಜೆಪಿ



           ಕಾಸರಗೋಡು: ಪೊಲೀಸ್ ಇಲಾಖೆಯೊಳಗಿನ ಕ್ರಿಮಿನಲ್‍ಗಳ ವಿರುದ್ಧ ಕ್ರಮ ಕೈಗೊಳ್ಳಲು ಹಿರಿಯ ಪೊಲೀಸ್ ಅಧಿಕಾರಿಗಳು ತಯಾರಾಗಬೇಕು ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ. ರಂಜಿತ್ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಅವರು ನಾಲ್ಕುಮಂದಿ ಬಿಜೆಪಿ ಕಾರ್ಯಕರ್ತರನ್ನು ಬೇಕಲ ಎಸ್‍ಐ ಅಮಾನುಷವಾಗಿ ಥಳಿಸಿರುವುದನ್ನು ಪ್ರತಿಭಟಿಸಿ ಬಿಜೆಪಿ ಪಳ್ಳಿಕ್ಕೆರೆ ಪಂಚಾಯಿತಿ ಸಮಿತಿ ವತಿಯಿಂದ ಮಂಗಳವಾರ ಬೇಕಲ ಪೊಲೀಸ್ ಠಾಣೆ ಎದುರು ನಡೆದ ಪ್ರತಿಭಟನಾ ಧರಣಿ ಉದ್ಘಾಟಿಸಿ ಮಾತನಾಡಿದರು.
             ಕ್ರಿಮಿನಲ್ ಸ್ವಭಾವ ತೋರುವ ಪೊಲೀಸರನ್ನು ಕಾನೂನಿನ ವ್ಯಪ್ತಿಗೆ ತರಬೇಕಾದ ಅನಿವಾರ್ಯತೆಯಿದೆ. ಪೊಲೀಸ್ ಇಲಾಖೆಯಲ್ಲಿ ಶೇ.80ರಷ್ಟು ಮಂದಿ ಸಿಪಿಎಂ ಬೆಂಬಲಿಗರಿದ್ದು, ಪಿಣರಾಯಿ ವಿಜಯನ್ ಆಡಳಿತದಲ್ಲಿ ಸಂಘಪರಿವಾರದ ಕಾರ್ಯಕರ್ತರನ್ನು ಪೊಲೀಸ್ ಬಲ ಪ್ರಯೋಗಿಸಿ ದಮನಿಸುವ ಅಹಂಕಾರಿ ಮನೋಭಾವ ಕೈಬಿಡದಿದ್ದಲ್ಲಿ ಸಊಕ್ತ ಇದಿರೇಟು ನೀಡಬೇಕಾಗುವುದು. ಜಿಲ್ಲೆಯ ಬಹುತೇಕ ಪೊಲೀಸರು ಸಿಪಿಎಂನ ಶಾಖಾ ಕಾರ್ಯದರ್ಶಿಯಿಂದ ಹಿಡಿದು ಜಿಲ್ಲಾ ಮುಖಂಡರ ಆಜ್ಞಾನುವರ್ತಿಗಳಾಗಿ ಬದಲಾಗುತ್ತಿದ್ದು,  ಆರೆಸ್ಸೆಸ್ ಮತ್ತು ಬಿಜೆಪಿ ಕಾರ್ಯಕರ್ತರನ್ನು ನಕಲಿ ಪ್ರಕರಣಗಳಲ್ಲಿ ಸಿಲುಕಿಸಲಾಗುತ್ತಿದೆ ಎಂದು ದೂರಿದರು.
         ಬಿಜೆಪಿ ಪಳ್ಳಿಕ್ಕರ ಪಂಚಾಯಿತಿ ಅಧ್ಯಕ್ಷ ಪ್ರಶಾಂತ ಚೇಟುಕುಂಡು ಅಧ್ಯಕ್ಷತೆ ವಹಿಸಿದ್ದರು. ಉದುಮ ಕ್ಷೇತ್ರದ ಅಧ್ಯಕ್ಷ ಕೆ.ಟಿ.ಪುರುಷೋತ್ತಮನ್, ಪ್ರಧಾನ ಕಾರ್ಯದರ್ಶಿ ಟಿ.ವಿ. ಸುರೇಶ್, ಉಪಾಧ್ಯಕ್ಷರಾದ ತ್ಯಾಂಪನ್ ಆಚೇರಿ, ಸದಾಶಿವನ್ ಮಣಿಯಂಗಾನಂ, ಕಾರ್ಯದರ್ಶಿ ಶಿನಿಮೋಳ್ ಹಾಗೂ ಓಬಿಸಿ ಮೋರ್ಚಾ ಕ್ಷೇತ್ರದ ಅಧ್ಯಕ್ಷ ಪ್ರದೀಪ್ ಎಂ.ಕೂಟಕಣಿ ಉಪಸ್ಥಿತರಿದ್ದರು.  ಜಿಲ್ಲಾ ಸಮಿತಿ ಸದಸ್ಯರಾದ ಕಾತ್ರ್ಯಾಯನಿ ಪುಲ್ಲೂರು, ಪದ್ಮಿನಿ ಚೇಟುಕುಂದ್, ಪಂಚಾಯಿತಿ ಮುಖಂಡರಾದ ಎಂ.ಎ.ಮಧು, ಮಧುಸೂತನನ್ ಸುಚುಟ್‍ಬೈಲ್, ಮುರಳೀಧರನ್ ನಾಯರ್ ನೇತೃತ್ವ ವಹಿಸಿದ್ದರು. ಕಾರ್ಯಕ್ರಮಕ್ಕೆ ಮೊದಲು ಪಾಲಕುನ್ನುವಿನಿಂದ ಬೇಕಲ ಠಾಣೆ ವರೆಗೆ ಮೆರವಣಿಗೆ ನಡೆಯಿತು.




 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries