ಕಾಸರಗೋಡು: ಕೇರಳದಲ್ಲಿ ಎಡರಂಗ ಸರ್ಕಾರದ ತಪ್ಪು ಧೋರಣೆಗಳಿಂದ ಕಾರ್ಮಿಕ ವರ್ಗ ಇಂದು ಸಂಕಷ್ಟ ಎದುರಿಸುವಂತಾಗಿದೆ ಎಂದು ಬಿಎಂಎಸ್ ರಾಜ್ಯ ಕಾರ್ಯದರ್ಶಿ, ವಕೀಲ ಪಿ ಮುರಳೀಧರನ್ ಕೋಯಿಕ್ಕೋಡ್ ತಿಳಿಸಿದ್ದಾರೆ.
ಅವರು ಕಾಸರಗೋಡು ನಗರಸಭಾಂಗಣದಲ್ಲಿ ನಡೆದ ಕಟ್ಟಡ ಕಾರ್ಮಿಕರ ಸಂಘ(ಬಿಎಂಎಸ್)ಜಿಲ್ಲಾ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಕೇರಳದ ಏಕೈಕ ಆಸರೆಯಾಗಿರುವ ಕಟ್ಟಡ ಕಾರ್ಮಿಕರ ಮಂಡಳಿಯು ಸರ್ಕಾರದ ನಿರ್ಲಕ್ಷ್ಯದಿಂದ ಪ್ರಸಕ್ತ ಕಾರ್ಮಿಕರು ಸವಲತ್ತುಗಳನ್ನು ಕಳೆದುಕೊಳ್ಳುವ ಬಿತಿ ಎದುರಿಸುವಂತಾಗಿದೆ. ಕಾರ್ಮಿಕರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಬೇಕಾದ ಮಂಡಳಿ ಇಂದು ಕಾರ್ಮಿಕರ ಕತ್ತು ಹಿಸುಕುವ ಸಂಸ್ಥೆಯಾಗಿ ಮಾರ್ಪಟ್ಟಿದೆ. ಕನ್‍ಸ್ಟ್ರಕ್ಷನ್ ಫೆಡರೇಶನ್ ಕಾರ್ಯದರ್ಶಿ ಕೃಷ್ಣನ್ ಕಣ್ಣೂರು, ಬಿಎಂಎಸ್ ಜಿಲ್ಲಾ ಕಾರ್ಯದರ್ಶಿ ಗೋವಿಂದನ್ ಮಡಿಕೈ, ಉಪಾಧ್ಯಕ್ಷ ಕೃಷ್ಣನ್, ಜಿಲ್ಲಾ ಕೋಶಾಧಿಕಾರಿ ಅನಿಲ್ ಬಿ ನಾಯರ್, ಒಕ್ಕೂಟದ ಅಧ್ಯಕ್ಷ ಐತಪ್ಪ, ಪದಾಧಿಕಾರಿಗಳಾದ ರಾಜಮೋಹನ್, ವಿನೋದ್, ಹರೀಶ್, ಜನಾರ್ದನ, ಲಕ್ಷ್ಮಣನ್ ಪಾಲ್ಗೊಂಡಿದ್ದರು. ಈ ಸಂದರ್ಭ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅನಿಲ್ ಬಿ.ನಾಯರ್ ಅಧ್ಯಕ್ಷ, ಸತ್ಯನಾಥ್ ಅಧ್ಯಕ್ಷ, ಕೋಶಾಧಿಕಾರಿಯಾಗಿ ಲಕ್ಷ್ಮಣನ್ ಅವರನ್ನು ಆಯ್ಕೆ ಮಾಡಲಾಯಿತು. ಸತ್ಯನಾಥ್ ಸ್ವಾಗತಿಸಿದರು. ಹರೀಶ್ ಕರಿಪ್ಪಾಡಗಂ ವಂದಿಸಿದರು.
ಎಡರಂಗ ಸರ್ಕಾರದ ಕಾರ್ಮಿಕ ವಿರೋಧಿ ನೀತಿಯಿಂದ ಸಂಕಷ್ಟ-ಬಿಎಂಎಸ್
0
ಮಾರ್ಚ್ 27, 2023