ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು, ಭವಿಷ್ಯಕ್ಕಾಗಿ ತಂತ್ರಜ್ಞಾನದ ಮೂಲಕ ಭಾರತದ ಪ್ರಾಚೀನ ಪುಸ್ತಕಗಳು ಮತ್ತು ಹಸ್ತಪ್ರತಿಗಳ ಜ್ಞಾನವನ್ನು ಸಂರಕ್ಷಿಸುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಇಂದಿರಾ ಗಾಂಧಿ ನ್ಯಾಷನಲ್ ಸೆಂಟರ್ ಫಾರ್ ದಿ ಆರ್ಟ್ಸ್ (ಐಜಿಎನ್‌ಸಿಎ) ನಿರ್ಮಿಸಿದ ವೈದಿಕ ಪರಂಪರೆಯ ವೆಬ್‌ಸೈಟ್ ಮತ್ತು ವರ್ಚುವಲ್ ಮ್ಯೂಸಿಯಂ ಆದ 'ಕಲಾಂ ವೈಭವ' ಉದ್ಘಾಟಿಸಿ ಮಾತನಾಡಿದರು.
ಈ ಮೂಲಕ ಮುಂದಿನ ಯುವ ಪೀಳಿಗೆಯು ವೇದ ಮತ್ತು ಉಪನಿಷತ್ತುಗಳ ಜ್ಞಾನ ಸಂಪಾದಿಸಲು ಮತ್ತು ಸಂಪ್ರದಾಯ ಮುಂದುವರಿಸಲು ನೆರವಾಗಲಿದೆ ಎಂದು ಅವರು ಹೇಳಿದರು.
ಇದರೆ ಜೊತೆಗೆ 64 ಕಲೆಗಳನ್ನು ಆಧರಿಸಿದ ವರ್ಚುವಲ್ ಮ್ಯೂಸಿಯಂ ಕಲಾ ವೈಭವವನ್ನು ಅಮಿತ್ ಶಾ ಉದ್ಘಾಟಿಸಿದರು. ಈ ಡಿಜಿಟಲ್ ಗ್ರಂಥಾಲಯದ ಮೂಲಕ ಭಾರತದ ವಾಸ್ತುಶಿಲ್ಪ, ಚಿತ್ರಕಲೆ, ನಾಟಕ, ಸಂಗೀತ ಸೇರಿದಂತೆ ಭಾರತದ ಶ್ರೀಮಂತ, ಭವ್ಯ ಸಂಸ್ಕೃತಿಯ ಇತಿಹಾಸವನ್ನು ಜಗತ್ತಿಗೆ ಪರಿಚಯಿಸಲು ಅನುಕೂಲವಾಗುತ್ತದೆ ಎಂದು ಹೇಳಿದರು.