ಕಾಸರಗೋಡು: ಮಧೂರು ಸನಿಹದ ಉಳಿಯ ಶ್ರೀ ಧನ್ವಂತರಿ ಸನ್ನಿಧಿಯಲ್ಲಿ ಶತಮಾನದ ನಂತರ ನಡೆದ ಕಳಿಯಾಟ ಮಹೋತ್ಸವ ಸಂಪನ್ನಗೊಂಡಿತು. ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ಬೆಳಗ್ಗೆ ಗಣಪತಿ ಹೋಮ, ಶ್ರೀ ಧನ್ವಂತರಿ ದೇವರಿಗೆ ಕಾರ್ತಿಕ ಪೂಜೆ, ಶ್ರೀ ಧನ್ವಂತರೀ ಸನ್ನಿಧಿಯಲ್ಲಿ ದೇವತಾ ಪ್ರಾರ್ಥನೆ ನಂತರ ಶ್ರೀ ಭಂಡಾರದಆಗಮನವಾಯಿತು.
ಮೂರು ದಇವಸಗಳ ಕಾಲ ನಡೆದ ಕಳಿಯಾಟ ಮಹೋತ್ಸವದಲ್ಲಿ ನೂರಾರು ಮಂದಿ ಪಾಲ್ಗೊಂಡಿದ್ದರು. ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಉಪ್ಪಳ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಉತ್ಸವದಲ್ಲಿ, ಮಾಯಿಪ್ಪಾಡಿ ಅರಮನೆ ಪ್ರತಿನಿಧಿ ವಕೀಲ ರಾಜೇಂದ್ರ ರಾವ್ ಉತ್ಸವದಲ್ಲಿ ಪಾಲ್ಗೊಮಡಿದ್ದರು. ಶ್ರೀ ಕುಟ್ಟಿಚ್ಚಾತನ್ ದೈವದ ನರ್ತನದೊಂದಿಗೆ ಆರಂಭಗೊಂಡ ಕಳಿಯಾಟ ಮಹೋತ್ಸವದಲ್ಲಿ ಪಂಜುರ್ಲಿ, ಇತ್ತಿಕಟ್ಟ್ ಚಾಮುಂಡಿ, ಅರೆಯಾಲ್ ಚಾಮುಂಡಿ, ವಿಷ್ಣುಮೂರ್ತಿ ದೈವ, ಪಡ್ಡೆಯಿ ಧೂಮಾವತಿ, ರಕ್ತೇಶ್ವರೀ ದೈವ ಸೇರಿದಂತೆ ನಾನಾ ದೈವಗಳ ಕೋಲ ನಡೆಯಿತು.
ಉಳಿಯ ಶ್ರೀ ಧನ್ವಂತರಿ ಸನ್ನಿಧಿಯಲ್ಲಿ ಕಳಿಯಾಟ ಮಹೋತ್ಸವ ಸಂಪನ್ನ
0
ಮಾರ್ಚ್ 06, 2023