ಕರುನಾಗಪಳ್ಳಿ: ಅಮೃತಾ ವೈದ್ಯಕೀಯ ಸಂಸ್ಥೆ ಅಭಿವೃದ್ಧಿಪಡಿಸಿದ ಇ-ಮ್ಯಾಪ್ ಮತ್ತು ಆಯುರ್ಸೆಲ್ ಪೋರ್ಟಲ್‍ಗಳನ್ನು ಕೇಂದ್ರ ಆಯುμï ಸಚಿವಾಲಯದ ಕಾರ್ಯದರ್ಶಿ ವೈದ್ಯ ರಾಜೇಶ್ ಕೋಟೆಚಾ ಉದ್ಘಾಟಿಸಿದರು.
ಆಯುರ್ವೇದದಲ್ಲಿ ವಿವಿಧ ಸಂಶೋಧನಾ ಅವಕಾಶಗಳನ್ನು ಹೆಚ್ಚೆಚ್ಚು ಬಳಸಿಕೊಳ್ಳಬೇಕು ಎಂದರು. ಆಯುರ್ವೇದವು ವಿವಿಧ ಸಂಶೋಧನಾ ಸಾಧ್ಯತೆಗಳನ್ನು ಹೊಂದಿದ್ದು, ಅದನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಬೇಕು ಎಂದರು.
ಅಮೃತ ವಿಶ್ವ ವಿದ್ಯಾಪೀಠ ಅಮೃತಪುರಿ ಆವರಣದಲ್ಲಿ ಕೇಂದ್ರ ಆಯುರ್ವೇದ ಸಚಿವಾಲಯದ ಯೋಜನಾ ನಿಧಿಯನ್ನು ಬಳಸಿಕೊಂಡು ಅಮೃತ ಸ್ಕೂಲ್ ಆಫ್ ಆಯುರ್ವೇದ ಅಭಿವೃದ್ಧಿಪಡಿಸಿದ ಇ-ಮ್ಯಾಪ್ ಮತ್ತು ಆಯುರ್ಸೆಲ್ ಪೋರ್ಟಲ್‍ಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. ಆಯುಷ್ ಸಚಿವಾಲಯದ ರಾಷ್ಟ್ರೀಯ ಆಯುರ್ವೇದ ವಿದ್ಯಾಪೀಠವು ಆಯುರ್ವೇದ ಚಿಕಿತ್ಸೆ ಮತ್ತು ಸಂಶೋಧನೆಗೆ ಸಂಬಂಧಿಸಿದ ವಿವಿಧ ಕ್ಷೇತ್ರಗಳಲ್ಲಿ ಅಮೃತ ಸ್ಕೂಲ್ ಆಫ್ ಆಯುರ್ವೇದದೊಂದಿಗೆ ಸಹಕರಿಸುತ್ತದೆ ಎಂದು ಅವರು ಹೇಳಿದರು.
ಆಯುಷ್ ಸಚಿವಾಲಯದ ಸಲಹೆಗಾರ ಕೌಸ್ತುಭ್ ಉಪಾಧ್ಯಾಯ, ಎನ್‍ಸಿಐಎಸ್‍ಎಂ ಅಧ್ಯಕ್ಷ ವೈದ್ಯ ಜಯಂತ್ ದೇವಪೂಜಾರಿ, ಅಖಿಲ ಭಾರತ ಆಯುರ್ವೇದ ಸಂಸ್ಥೆಯ ನಿರ್ದೇಶಕ ಡಾ. ತನುಜಾ ನೇಸರಿ, ಹಾರ್ವರ್ಡ್ ವೈದ್ಯಕೀಯ ಶಾಲೆಯ ಪ್ರಾಧ್ಯಾಪಕ ಡಾ. ಕ್ರಿಶ್ ರಾಮಚಂದ್ರನ್, ಅಮೃತ ವಿಶ್ವ ವಿದ್ಯಾಪೀಠದ ಉಪಕುಲಪತಿ ಡಾ. ವೆಂಕಟ ರಂಗನ್, ಪ್ರಾಯೋಜಕ ಡಾ. ಮನೀಶಾ ವಿ ರಮೇಶ್, ಅಮೃತ ಸ್ಕೂಲ್ ಆಫ್ ಆಯುರ್ವೇದ ಡೀನ್ ಸ್ವಾಮಿ ಶಂಕರಮೃತಾನಂದಪುರಿ, ಅಮೃತ ಸ್ಕೂಲ್ ಆಫ್ ಆಯುರ್ವೇದ ಪ್ರಭಾರಿ ಪ್ರಾಂಶುಪಾಲ ಡಾ. ಎನ್.ವಿ.ರಮೇಶ್, ಡಾ.ಪ್ರಿಯಾ ನಾಯರ್, ಡಾ. ಪ್ರೇಮಾ ನೆಡುಂಗಾಡಿ, ಡಾ.ಪಿ. ರಾಮ್ ಮನೋಹರ್, ಡಾ. ಕೆ. ಪರಮೇಶ್ವರನ್ ನಂಬೂತಿರಿ, ಡಾ.ಎನ್.ಎಸ್.ಸÁ್ಷ್ಮ, ಡಾ.ಯು.ವಿಷ್ಣು, ಡಾ.ಐ.ವಿ. ಐಶ್ವರ್ಯ ಮಾತನಾಡಿದರು.
ಆಯುರ್ವೇದದಲ್ಲಿ ಪಂಚಕರ್ಮ ಚಿಕಿತ್ಸೆಯ ಬಗ್ಗೆ ಅಧಿಕೃತ ಮಾಹಿತಿ, ಚಿಕಿತ್ಸಾ ವಿಧಾನಗಳ ವೀಡಿಯೋ ಪ್ರದರ್ಶನಗಳು ಮತ್ತು ಅμÁ್ಟಂಗ ಹೃದಯಂ ಸೇರಿದಂತೆ ಶ್ಲೋಕಗಳ ಆಡಿಯೋ ಫೈಲ್‍ಗಳೊಂದಿಗೆ ಜಗತ್ತಿನ ಎಲ್ಲೆಡೆ ಇರುವ ಆಯುರ್ವೇದ ವೈದ್ಯರು, ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಉಲ್ಲೇಖಕ್ಕಾಗಿ ಇ-ಮ್ಯಾಪ್ ಪೋರ್ಟಲ್ ಅನ್ನು ಸ್ಥಾಪಿಸಲಾಗಿದೆ. ಅಮೃತ ಸ್ಕೂಲ್ ಆಫ್ ಆಯುರ್ವೇದ, ಅಮೃತಾ ಸೆಂಟರ್ ಫಾರ್ ಅಡ್ವಾನ್ಸ್ಡ್ ರಿಸರ್ಚ್ ಇನ್ ಆಯುರ್ವೇದ ಮತ್ತು ಅಮೃತ ಕ್ರಿಯೇಟ್ ನೇತೃತ್ವದಲ್ಲಿ ಈ ಪೋರ್ಟಲ್‍ಗಳನ್ನು ಅಭಿವೃದ್ಧಿಪಡಿಸಲಾಗಿದೆ.
ಅಮೃತಾ ಅಭಿವೃದ್ಧಿಪಡಿಸಿದ ಇ-ಮ್ಯಾಪ್ ಮತ್ತು ಆಯುರ್ಸೆಲ್ ಪೋರ್ಟಲ್‍ಗಳ ಉದ್ಘಾಟನೆ: ವೈದ್ಯ ರಾಜೇಶ್ ಕೋಟೆಚಾ ಉದ್ಘಾಟನೆ
0
ಮಾರ್ಚ್ 11, 2023