ಪೆರ್ಲ: ಪೆರ್ಲ ಕುಟುಂಬ ಆರೋಗ್ಯ ಕೇಂದ್ರದಲ್ಲಿ ಕಿವುಡು, ಅರೆಕಿವುಡು, ಮಾತನಾಡಲು ಅಶಕ್ತರು ಹಾಗೂ ತೊದಲು ಸಮಸ್ಯೆ ಇರುವವರಿಗೆ ಬದಿಯಡ್ಕ ಮಾರ್ತೋಮ ಕಾಲೇಜ್ ಆಫ್ ಸ್ಪೆಷಲ್ ಎಜ್ಯುಕೇಶನ್ ಆಂಡ್ ಇನ್ಸ್ಟಿಟ್ಯೂಟ್ ಆಫ್ ಸ್ಪೀಚ್ ಆಂಡ್ ಹಿಯರಿಂಗ್ ವತಿಯಿಂದ ಒಂದು ದಿನದ ತಪಾಸಣಾ ಶಿಬಿರ ಆಯೋಜಿಸಲಾಯಿತು.
ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್.ಉದ್ಘಾಟಿಸಿದರು.ವಾರ್ಡ್ ಸದಸ್ಯೆ ರಮ್ಲಾ ಅಧ್ಯಕ್ಷತೆ ವಹಿಸಿದ್ದರು. ವಾರ್ಡ್ ಸದಸ್ಯರಾದ ರೂಪವಾಣಿ ಆರ್.ಭಟ್, ಇಂದಿರಾ, ಮಹೇಶ್ ಭಟ್ ಶುಭ ಹಾರೈಸಿದರು. ಪೆರ್ಲ ಕುಟುಂಬ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಕ್ರಿಸ್ಟಿ ಐಸಕ್ ಡಾನಿಯಲ್, ಆರೋಗ್ಯಾಧಿಕಾರಿ ಸಜಿತ್ ನೇತೃತ್ವ ವಹಿಸಿದ್ದರು.ಸುಮಾರು ನೂರು ಮಂದಿ ಶಿಬಿರದ ಪ್ರಯೋಜನ ಪಡೆದರು.
ಪೆರ್ಲ ಆರೋಗ್ಯ ಕೇಂದ್ರದಲ್ಲಿ ಶಿಬಿರ
0
ಮಾರ್ಚ್ 30, 2023
Tags