ಪೆರ್ಲ: ಶಾಟ್‍ಪುಟ್ ಸ್ಪರ್ಧೆಯ ರಾಷ್ಟ್ರೀಯ ಮಟ್ಟದಲ್ಲಿ ಕಂಚು ಹಾಗೂ ರಾಜ್ಯಮಟ್ಟದಲ್ಲಿ ಬೆಳ್ಳಿ ಪದಕ ಪಡೆದ ಎಣ್ಮಕಜೆ ಪಂಚಾಯಿತಿ ಪೆರ್ಲ ಸನಿಹದ ನಲ್ಕ ನಿವಾಸಿ ರಾಕೇಶ್ ಕುಮಾರ್ ಅವರಿಗೆ ನಲ್ಕ ವೀರಮಾರುತಿ ಕ್ಲಬ್ ವತಿಯಿಂದ ಹುಟ್ಟೂರ ಸನ್ಮಾನ ನಲ್ಕದಲ್ಲಿ ಜರುಗಿತು.
ಎಣ್ಮಕಜೆ ಗ್ರಮ ಪಂಚಾಯಿತಿ ಅಧ್ಯಕ್ಷ ಸೋಮಶೇಖರ ಜೆ.ಎಸ್ ಅಧ್ಯಕ್ಷತೆ ವಹಿಸಿದ್ದರು. ಬದಿಯಡ್ಕ ಪೊಲೀಸ್ ಠಾಣೆ ಎಸ್.ಐ ಕೆ.ಪಿ ವಿನೋದ್ ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಸಮಾಝದ ಗಣ್ಯರು, ಸ್ಥಳೀಯ ನಿವಾಸಿಗಳು, ಕ್ಲಬ್ ಪದಾಧಿಕಾರಿಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಸೋಮಶೇಖರ ಜೆ.ಎಸ್ ಹಾಗೂ ಎಸ್.ಐ ವಿನೋದ್ ಕುಮಾರ್ ಅವರು ರಾಕೇಶ್ ಅವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು.
ಶಾಟ್‍ಪುಟ್ ಪಟು ರಾಕೇಶ್ ಕುಮಾರ್‍ಗೆ ಹುಟ್ಟೂರ ಸನ್ಮಾನ
0
ಮಾರ್ಚ್ 31, 2023