ಅಷ್ಟಕ್ಕು ಪ್ರವಾಸದ ಸಮಯದಲ್ಲಿ ಮಕ್ಕಳನ್ನು ಗೆಜೆಟ್‌ನಿಂದ ದೂರವಿಡಲು ಏನು ಮಾಡಬೇಕು? ಪೋಷಕರೇ ಈ ಟ್ರಿಕ್ಸ್ ಫಾಲೋ ಮಾಡಿದ್ರೆ ಖಂಡಿತ ನಿಮ್ಮ ಮಕ್ಕಳು ಗೆಜೆಟ್ ಗುಂಗಿನಿಂದ ಹೊರ ಬಂದು ಎಲ್ಲರ ಜೊತೆಗೆ ಸೇರುತ್ತಾರೆ.
1. ಮಕ್ಕಳಿಗೆ ಆಸಕ್ತಿಕರ ಆಟಗಳನ್ನು ಆಡಿಸಿ
ಪ್ರಯಾಣದ ಸಮಯದಲ್ಲಿ ಮಕ್ಕಳು ಗೆಜೆಟ್ ಮುಟ್ಟೋದನ್ನು ತಪ್ಪಿಸಲು ಅವರಿಗೆ ಆಸಕ್ತಿಕರ ಆಟಗಳನ್ನು ಆಡಲು ಅವಕಾಶ ಕೊಡಿ. ಒಂದು ವೇಳೆ ಅವರಿಗೆ ಆ ಆಟ ಆಸಕ್ತಿಕರ ಅನ್ನಿಸಿದರೆ ತುಂಬಾನೇ ಇಷ್ಟಪಡುತ್ತಾರೆ. ಹಾಗೂ ಗೆಜೆಟ್ ಕಡೆಗೆ ಅವರ ಗಮನ ಕಡಿಮೆ ಆಗುತ್ತದೆ.
2. ಕಥೆ ಪುಸ್ತಕಗಳು ಪ್ರಯಣದ ಸಮಯದಲ್ಲಿ ಜೊತೆಗೆ ಇರಲಿ
ಮಕ್ಕಳಿಗೆ ಕಥೆ ಪುಸ್ತಕಗಳೆಂದರೆ ತುಂಬಾನೇ ಇಷ್ಟ. ಆದ್ರೆ ಈ ಗೆಜೆಟ್‌ಗಳಿಂದಾಗಿ ಮಕ್ಕಳು ಅದೆಲ್ಲದರಿಂದ ದೂರವಾಗಿದ್ದಾರೆ. ನೀವು ಪ್ರಯಾಣ ಮಾಡುವ ಸಂದರ್ಭದಲ್ಲಿ ಕಥೆ ಪುಸ್ತಕಗಳನ್ನು ಇಟ್ಟುಕೊಳ್ಳಿ ಮಕ್ಕಳಿಗೆ ಅದನ್ನು ಓದಲು ಕೊಡಿ ಒಂದೆರಡು ಪುಸ್ತಕ ಇದ್ದರೆ ಸಾಕು. ಅವರನ್ನು ಮೊಬೈಲ್, ಟ್ಯಾಪ್‌ನಿಂದ ದೂರ ಇಡೋದಕ್ಕೆ ಇದು ಸಹಕರಿಸುತ್ತದೆ.
3. ಆಡಿಯೋ ಬುಕ್ ಅಥವಾ ಮ್ಯೂಸಿಕ್ ಪ್ಲೇ ಮಾಡಿ
ಪ್ರಯಣದ ಸಮಯದಲ್ಲಿ ಮಕ್ಕಳನ್ನು ಗೆಜೆಟ್‌ನಿಂದ ದೂರ ಇಡಲು ಮತ್ತೊಂದು ಒಳ್ಳೆಯ ಉಪಾಯ ಅಂದ್ರೆ ಆಡಿಯೋ ಬುಕ್‌ಗಳನ್ನು ಪ್ಲೇ ಮಾಡೋದು. ನೀವು ಕಾರಿನಲ್ಲಿ ಹೋಗೋವಾಗ ಅವರಿಗಿಷ್ಟವಾದ ಹಾಡು ಪ್ಲೇ ಮಾಡಿದ್ರೆ ಖಂಡಿತ ಅವರು ಅದನ್ನು ಎಂಜಾಯ್ ಮಾಡ್ತಾರೆ ಹಾಗೂ ಅದಕ್ಕೆ ತಕ್ಕ ಹಾಗೇ ಡಾನ್ಸ್ ಕೂಡ ಮಾಡ್ತಾರೆ. ಇಲ್ಲದಿದ್ದರೆ ಆಡಿಯೋ ಬುಕ್ ಕೂಡ ಉತ್ತಮ ಆಯ್ಕೆ. ಇತ್ತೀಚಿಗೆ ಆಡಿಯೋ ಬುಕ್‌ಗಳ ಚಾನೆಲ್‌ಗಳು ತಲೆ ಎತ್ತಿವೆ. ಅವುಗಳಲ್ಲಿ ರಾಮಾಯಣ, ಮಹಾಭಾರತದಿಂದ ಹಿಡಿದು ಎಲ್ಲಾ ರೀತಿಯ ಕಥೆಗಳಿದೆ. ಅವುಗಳನ್ನು ಮಕ್ಕಳಿಗೆ ಕೇಳಿಸಬಹುದು.