ಮಂಜೇಶ್ವರ : ಕುಳೂರಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯು ಶತಮಾನೋತ್ಸವದ ಸಂಭ್ರಮದಲ್ಲಿದ್ದು ಆ ಪ್ರಯುಕ್ತ ಈ ವರ್ಷ ನಡೆಯುವ ಶತಮಾನೋತ್ಸವದ ಉದ್ಘಾಟನಾ ಸಮಾರಂಭದ ಅಂಗವಾಗಿ ಕ್ರೀಡಾಕೂಟವು ನಾಳೆ ನಡೆಯಲಿದೆ.
ಚಿಗುರುಪಾದೆ ಜಂಕ್ಷನ್ ನಲ್ಲಿ ಬೆಳಿಗ್ಗೆ 8 ಕ್ಕೆ ನಡೆಯುವ ಕ್ರೀಡಾಕೂಟದ ಉದ್ಘಾಟನೆಯನ್ನು ಮಂಜೇಶ್ವರ ಪೆÇೀಲಿಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಅನ್ಸಾರ್ ಎನ್ ನೆರವೇರಿಸಲಿರುವರು. ಕಾರ್ಯಕ್ರಮದಲ್ಲಿ ಶತಮಾನೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಸದಾಶಿವ ಕೆ ಶೆಟ್ಟಿ ಕುಳೂರು ಕನ್ಯಾನ ಹಾಗೂ ಪ್ರಮುಖರು ಉಪಸ್ಥಿತರಿರುವರು.
ಉದ್ಘಾಟನಾ ಸಮಾರಂಭದ ಬಳಿಕ ಮಾದಕ ವಸ್ತು ಮುಕ್ತ ಕೇರಳ ಅಭಿಯಾನದ ಅಂಗವಾಗಿ ಮುಕ್ತ ಮ್ಯಾರಥಾನ್ ಓಟ ಸ್ಪರ್ಧೆ ಚಿಗುರುಪಾದೆಯಿಂದ ಕುಳೂರು ಶಾಲೆ ತನಕ ನಡೆಯಲಿದೆ. ಬಳಿಕ ಕುಳೂರು ಶಾಲಾ ವಠಾರದಲ್ಲಿ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿವೆ.
ಕುಳೂರು ಶಾಲಾ ಶತಮಾನೋತ್ಸವದ ಅಂಗವಾಗಿ ಇಂದು ಕ್ರೀಡಾಕೂಟ
0
ಮಾರ್ಚ್ 18, 2023
Tags