HEALTH TIPS

ಟಿಕೆಟ್ ಇಲ್ಲದೆ ಸಿನಿಮಾ ನೋಡಿ! ಒಟಿಟಿ ಕಂಪನಿಗಳಿಂದ ಭಾರೀ ಆಫರ್ ಗಳು: ಥಿಯೇಟರ್‍ಗಳಲ್ಲಿ ಚಲನಚಿತ್ರಗಳ ಉಚಿತ ಪ್ರದರ್ಶನಕ್ಕೆ ಏಜೆನ್ಸಿಗಳು


            ಕೊಚ್ಚಿ: ಒಟಿಟಿ ಕಂಪನಿಗಳು ಪ್ರೇಕ್ಷಕರ ಬೇಡಿಕೆಗಳಿಗೆ ಒಂದೆಡೆ ಬೆಂಬಲವಾಗಿ ಸಕ್ರಿಯವಾಗಿದ್ದರೂ ಏಜೆನ್ಸಿಗಳೂ ಜನರನ್ನು ಥಿಯೇಟರ್‍ಗಳತ್ತ ಸೆಳೆಯಲು ಸಕ್ರಿಯವಾಗಿವೆ.
            ಥಿಯೇಟರ್‍ಗಳಿಗೆ ಉತ್ತಮ ಆದಾಯ ಬಂದಿದೆ ಎಂಬುದನ್ನು ಸಾಬೀತುಪಡಿಸಲು ವಿವಿಧ ಪ್ರಯತ್ನಗಳತ್ತ ಉಪಕ್ರಮಿಸುತ್ತವೆ.  ಒಟಿಟಿಯ ಆರಂಭದಲ್ಲಿ ಯುವ ನಟರ ಚಿತ್ರಗಳನ್ನೂ ಭಾರಿ ಮೊತ್ತಕ್ಕೆ ಖರೀದಿಸಲಾಗುತ್ತಿತ್ತು. ಒಟಿಟಿ ಪ್ಲಾಟ್‍ಫಾರ್ಮ್‍ಗಳ ಪ್ರಸರಣದೊಂದಿಗೆ, ಸ್ಪರ್ಧೆಯು ತೀವ್ರಗೊಂಡಿದೆ. ಬೆಲೆಯೂ ಹೆಚ್ಚಾಯಿತು. ಒಟಿಟಿ ಪ್ರದರ್ಶನಕ್ಕೂ ಸಿನಿಮಾ ಮಾಡುವ ಟ್ರೆಂಡ್ ಇತ್ತು.
             ಸೂಪರ್‍ಸ್ಟಾರ್‍ಗಳ ಚಿತ್ರಗಳು ಸಹ ನಿರೀಕ್ಷಿತ ಆದಾಯವನ್ನು ಪಡೆಯದಿದ್ದಾಗ ಒಟಿಟಿ ಕಂಪನಿಗಳು ತಮ್ಮ ನೀತಿಯನ್ನು ಬದಲಾಯಿಸಿದವು. ಥಿಯೇಟರ್‍ಗಳಲ್ಲಿ ಬಿಡುಗಡೆಯಾಗಿ ಪ್ರೇಕ್ಷಕರಿಂದ ಅನುಮೋದನೆ ಮತ್ತು ಪ್ರತಿಕ್ರಿಯೆ ಪಡೆಯುವ ಚಿತ್ರಗಳನ್ನು ಹೆಚ್ಚಿನ ಬೆಲೆಗೆ ಪಡೆಯುತ್ತವೆ ಎಂದು ನಿರ್ಮಾಪಕರು ಹೇಳಿರುವರು.
            ಮೊದಲ ಕೆಲವು ವಾರಗಳಲ್ಲಿ ಪ್ರೇಕ್ಷಕರು ಭಾರಿ ಸಂಖ್ಯೆಯಲ್ಲಿ ತಲುಪಿದ್ದಾರೆ ಎಂದು ಸಾಬೀತುಪಡಿಸಲು ಜನರನ್ನು ಕರೆತರಲಾಗುತ್ತದೆ. ಆರಂಭದಲ್ಲಿ ಅಭಿಮಾನಿಗಳ ಸಂಘದ ಸದಸ್ಯರು ಸಂಘಟಿತರಾಗಿ ರಂಗಕ್ಕೆ ಬರುತ್ತಾರೆ. ನಂತರ ಪ್ರೇಕ್ಷಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರಮಂದಿರಗಳಿಗೆ ಕರೆತರಲು ಇವೆಂಟ್ ಮ್ಯಾನೇಜ್‍ಮೆಂಟ್‍ನಂತಹ ಏಜೆನ್ಸಿಗಳನ್ನು ಬಳಸಲಾಗುತ್ತದೆ. ಈ ಹಿನ್ನೆಲೆಯಲ್ಲೇ ಇತ್ತೀಚೆಗೆ ಹೊಸ ಚಿತ್ರಗಳು ಬಂದೊಡನೆ ಮಾರುದ್ದ ಲೇಖನಗಳೂ ಪ್ರಕಟಗೊಳ್ಳುತ್ತಿರುವುದನ್ನು ಗಮನಿಸಿರಬಹುದು. ಟಿಕೆಟ್‍ಗಳನ್ನು ಏಜೆನ್ಸಿಗಳು ನೀಡುತ್ತವೆ. ವಿದ್ಯಾರ್ಥಿಗಳಿಂದ ಕುಟುಂಬಗಳನ್ನು ಪೂರ್ಣವಾಗಿ ಥಿಯೆಟರ್ ಗಳಿಗೆ ಸೆಳೆಯಲಾಗುತ್ತದೆ   
         ಆದಾಯ ಬರುವುದರಿಂದ ಥಿಯೇಟರ್ ಮಾಲೀಕರೂ ಬೆಂಬಲ ನೀಡುತ್ತಿದ್ದಾರೆ. ಕೆಲವು ಥಿಯೇಟರ್ ಮಾಲೀಕರು ಅಭಿಮಾನಿಗಳಿಗೆ ಉಚಿತ ಪ್ರದರ್ಶನ ಅಥವಾ ಎರಡು ಪ್ರದರ್ಶನಗಳನ್ನು ನೀಡಲು ಸಿದ್ಧರಿದ್ದಾರೆ.

ಫಿಯೋಕ್ ಎಂಬ ಥಿಯೇಟರ್ ಮಾಲೀಕರ ಸಂಘವು ಅನುಮೋದಿಸಿದ ಷರತ್ತು ಏನೆಂದರೆ, ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ 42 ದಿನಗಳ ನಂತರವೇ ಚಿತ್ರವನ್ನು ಒಟಿಟಿಯಲ್ಲಿ ಪ್ರದರ್ಶಿಸಬೇಕು. ಒಟಿಟಿಯಲ್ಲಿ ಮೊದಲು ಪ್ರದರ್ಶನಗೊಂಡ ಚಲನಚಿತ್ರಗಳನ್ನು ಚಿತ್ರಮಂದಿರಗಳಲ್ಲಿ ಪ್ರದರ್ಶಿಸಲಾಗುವುದಿಲ್ಲ.



         ಅಭಿಮತ:
    “ಅಭಿಮಾನಿಗಳμÉ್ಟೀ ಅಲ್ಲ, ಜನರನ್ನು ಚಿತ್ರಮಂದಿರಗಳಲ್ಲಿ ಸೆಳೆಯಲು ಏಜೆನ್ಸಿಗಳಿವೆ. ಆದಾಯ ಕಡಿಮೆ ಇರುವುದರಿಂದ ಪ್ರೇಕ್ಷಕರು ಸಿಕ್ಕರೂ ಥಿಯೇಟರ್ ಮಾಲೀಕರು ಸಂತಸ ಪಡುತ್ತಾರೆ’’.
ಕೆ. ವಿಜಯಕುಮಾರ್
ಅಧ್ಯಕ್ಷರು
ಫಿಯೋಕ್
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries