ಕಾಸರಗೋಡು: ಜಿಲ್ಲೆಯನ್ನು ಸಂಪೂರ್ಣ ಡಿಜಿಟಲ್ ಸಾಕ್ಷರತಾ ಜಿಲ್ಲೆಯನ್ನಾಗಿ ಮಾಡಲು ಸ್ಥಳೀಯಾಡಳಿತ ಸಂಸ್ಥೆಗಳ ಸಹಯೋಗದೊಂದಿಗೆ ಜಿಲ್ಲಾ ಪಂಚಾಯಿತಿ ಜಾರಿಗೊಳಿಸಿರುವ ಡಿಜಿಟಲ್ ಸಾಕ್ಷರತಾ ಯೋಜನೆಯ ಮಾಡ್ಯೂಲ್ ತಯಾರಿಸಿದೆ. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಸಮಾರಂಭ ಉದ್ಘಾಟಿಸಿದರು.
ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಸಂಪನ್ಮೂಲ ಗುಂಪು ಮತ್ತು ಗ್ರಾಮ ಪಂಚಾಯತ್ ಮಟ್ಟದಲ್ಲಿ ಗ್ರಾಮ ಪಂಚಾಯಿತಿ ಸಂಪನ್ಮೂಲ ಗುಂಪಿನ ತರಬೇತಿ ಶೀಘ್ರ ಆರಂಭಿಸಲು ತೀರ್ಮಾನಿಸಲಾಯಿತು. 30 ರಿಂದ 60 ವರ್ಷದೊಳಗಿನ ಸ್ಮಾರ್ಟ್‍ಫೆÇೀನ್ ಬಳಕೆದಾರರಿಗೆ ಇ-ಸಾಕ್ಷರತೆಯನ್ನು ಖಚಿತಪಡಿಸುವುದು ಈ ಯೋಜನೆಯ ಗುರಿಯಾಗಿದೆ. 50 ಮನೆಗಳಿಗೆ ಒಂದು ತರಗತಿ ಎಂಬ ಆಧಾರದಲ್ಲಿ ಜಿಲ್ಲೆಯ ಪ್ರತಿ ವಾರ್ಡ್‍ನಲ್ಲಿ ಹತ್ತು ತರಗತಿಗಳಿಗೆ ಕಡಿಮೆಯಾಗದಂತೆ ತರಗತಿ ನಡೆಸಲಾಗುವುದು. ತರಗತಿ ನಡೆಸಿಕೊಡುವ ಬೋಧಕರನ್ನು ಡಿಜಿ ಬ್ರಿಗೇಡ್ ಎಂದು ಕರೆಯಲಾಗುತ್ತದೆ. ಈ ಹಿಂದೆ ಖ್ಯಾತ ಸಾಹಸಿ ಪಿ.ಎನ್.ಸೌಮ್ಯ ಅವರನ್ನು ಈ ಯೋಜನೆಯ ರಾಯಭಾರಿಯಾಗಿ ಆಯ್ಕೆ ಮಾಡಲಾಗಿತ್ತು. ಕೈಟ್ ಜಿಲ್ಲಾ ಸಂಯೋಜಕ ಕೆ.ಶಂಕರನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಶಾನವಾಸ್ ಪಾದೂರು, ಸಾಕ್ಷರತಾ ಮಿಷನ್ ಜಿಲ್ಲಾ ಸಂಯೋಜಕ ಪಿ.ಎನ್.ಬಾಬು, ಅಕ್ಷಯ ಬ್ಲಾಕ್ ಸಂಯೋಜಕರಾದ ಕೆ.ಅಶೋಕ್, ಎ.ವಿ.ಬಾಬು, ಗ್ರೇಸಿ ಥಾಮಸ್, ಕೆ.ಪುಷ್ಪಲತಾ, ಗ್ರಂಥಾಲಯ ಪರಿಷತ್ತಿನ ಪ್ರತಿನಿಧಿ ಪಿ.ದಾಮೋದರನ್ ಮತ್ತು ಕೈಟ್ ಶಿಕ್ಷಕರಾದ ಕೆ.ಮನೋಜ್, ಸಿ.ಎಚ್.ಪ್ರಿಯಾ, ಪ್ರವೀಣ್ ಕುಮಾರ್ ರೈ , ಜೋಸೆಫ್, ಪಿಎ ಅನಿಲ್ ಕುಮಾರ್, ಎನ್.ಕೆ.ಬಾಬು ಉಪಸ್ಥಿತರಿದ್ದರು.
ಡಿಜಿಟಲ್ ಸಾಕ್ಷರತಾ ಯೋಜನೆ: ಮಾಡ್ಯೂಲ್ ತಯಾರಿ ಸಮಿತಿ ಸಭೆ
0
ಮಾರ್ಚ್ 24, 2023