ಪುಣೆ: ಬೈಕ್‌ನಲ್ಲಿ ಇನ್‌ಸ್ಟಾಗ್ರಾಂ ರೀಲ್‌ಗೆ ವಿಡಿಯೊ ಮಾಡುತ್ತಿದ್ದ ಯುವಕರು ಮಹಿಳೆಗೆ ಡಿಕ್ಕಿ ಹೊಡೆದು ಆಕೆಯ ಪ್ರಾಣ ತೆಗೆದಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.
ಪುಣೆಯ ಮೊಹಮ್ಮದ್ ವಾಡಿ ಪ್ರದೇಶದಲ್ಲಿ ಸೋಮವಾರ ಸಂಜೆ 5.30ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.31 ವರ್ಷದ ಮಹಿಳೆ ತಸ್ಲಿಮ್ ಪಠಾಣ್ ಜೀವ ಕಳೆದುಕೊಂಡಿದ್ದಾರೆ.
ಆರೋಪಿಗಳಾದ ಬೈಕ್ ಸವಾರ ಅಯನ್ ಶೇಖ್ ಮತ್ತು ಹಿಂಬದಿ ಸವಾರ ಜಾಯೆದ್ ಜಾವಿದ್ ಶೇಖ್ ಸ್ಥಳದಿಂದ ಪರಾರಿಯಾಗಿದ್ದರು. ಬಳಿಕ, ಅವರ ಗುರುತನ್ನು ಪತ್ತೆ ಮಾಡಿ ಬಂಧಿಸಲಾಗಿದೆ.
'ಅಯಾನ್ ಮೋಟಾರ್ ಸೈಕಲ್ ರೈಡ್ ಮಾಡುತ್ತಿದ್ದ. ಹಿಂಬದಿ ಕುಳಿತಿದ್ದ ಜಾಯೆದ್ ರೀಲ್‌ಗೆ ವಿಡಿಯೊ ಚಿತ್ರೀಕರಿಸುತ್ತಿದ್ದ. ಈ ಸಂದರ್ಭ ತಸ್ಲಿಮ್ ಪಠಾಣ್ ಅವರಿಗೆ ಬೈಕ್ ಡಿಕ್ಕಿ ಹೊಡೆದಿದ್ದು, ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ'ಎಂದು ವನ್ವಾಡಿ ಪೊಲೀಸ್ ಠಾಣೆಯ ಅಧಿಕಾರಿ ಜಯಂತ್ ಯಾದವ್ ತಿಳಿಸಿದ್ದಾರೆ.