ಕಾಸರಗೋಡು: ಕೇರಳ ಸರಕಾರ ರಾಜ್ಯ ಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಕಾಸರಗೋಡು ವಲಯದ ಸದಸ್ಯ ಅನಿಲ್ ಐ ಪೋಕಸ್ ಅವರನ್ನು ಆಲ್ ಕೇರಳ ಫೆÇೀಟೋಗ್ರಾಫರ್ಸ್ ಅಸೋಸಿಯೇಷನ್ ಕಾಸರಗೋಡು ವೆಸ್ಟ್ ಯೂನಿಟ್ ವತಿಯಿಂದ ಸನ್ಮಾನಿಸಲಾಯಿತು.
ಅಧ್ಯಕ್ಷರಾದ ರತೀಶ್ ರಾಮುವಿಡಿಯೋ ಇವರು ಶಾಲು ಹೊದಿಸಿ ಕಾಸರಗೋಡು ವಲಯ ಅಧ್ಯಕ್ಷರಾದ ವಾಸು ಎ. ಅವರು ಸ್ಮರಣಿಕೆ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ವಲಯ ಕಾರ್ಯದರ್ಶಿ ಚಂದ್ರಶೇಖರ, ಯೂನಿಟ್ ಕೋಶಾಧಿಕಾರಿ ಅಮಿತ್ ಕರಂದಕ್ಕಾಡ್ ಯೂನಿಟ್ ಸದಸ್ಯ ಗಣೇಶ್ ರೈ ಉಪಸ್ಥಿತರಿದ್ದರು. ಯುನಿಟ್ ಕಾರ್ಯದರ್ಶಿ ವಸಂತ್ ಕೆರೆಮನೆ ಸ್ವಾಗತಸಿ ಜತೆ ಕಾರ್ಯದರ್ಶಿ ವಿಶಾಖ್ ವಂದಿಸಿದರು.