ಕಾಸರಗೋಡು: ಯಾವುದೇ ಕಾರ್ಯಕ್ರಮವಿರಲಿ ಅದು ಯಶಸ್ವಿಯಾಗಬೇಕಿದ್ದರೆ ಧ್ವನಿ, ಬೆಳಕು ಅಷ್ಟೇ ಅತ್ಯಗತ್ಯ. ಅವು ಲಭ್ಯವಿದೆಯೆಂದಾದರೆ ಅರ್ಧದಷ್ಟು ಕಾರ್ಯಕ್ರಮ ಯಶಸ್ವಿಯಾಯಿತೆಂದೇ ತಿಳಿದುಕೊಳ್ಳಬಹುದು. ಕಾಸರಗೋಡಿನ ಹಿರಿಯ ಹಾಗು ಖ್ಯಾತ ನೇತ್ರ ತಜ್ಞ ಡಾ.ಅನಂತ ಕಾಮತ್ ಅವರು ಪದ್ಮಗಿರಿ ಕಲಾ ಕುಟೀರಕ್ಕೆ ಜನರೇಟರ್ ಕೊಡುಗೆಯಾಗಿ ನೀಡುವ ಮೂಲಕ ಕಾರ್ಯಕ್ರಮದ ಯಶಸ್ವಿನ ರೂವಾರಿಯಾಗಿದ್ದಾರೆ. ಧಾರ್ಮಿಕ ಹಾಗು ಸಾಮಾಜಿಕ ಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಡಾ.ಅನಂತ ಕಾಮತ್ ಅವರು ಕಾಸರಗೋಡಿನ ಶಕ್ತಿಯಾಗಿದ್ದಾರೆ ಎಂದು ಎಡನೀರು ಮಠಾಧೀಶ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಹೇಳಿದರು.
ಡಾ.ಅನಂತ ಕಾಮತ್ ಅವರು ಪದ್ಮಗಿರಿ ಕಲಾ ಕುಟೀರಕ್ಕೆ ಕೊಡುಗೆಯಾಗಿ ನೀಡಿದ ಜನರೇಟರ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಸ್ವಾಮೀಜಿಯವರು ಆಶೀರ್ವಚನ ನೀಡಿದರು.
ಡಾ.ಅನಂತ ಕಾಮತ್ ಅವರು ಜನರೇಟರ್ ಉದ್ಘಾಟಿಸಿದರು. ಇದೇ ಸಂದಭರ್Àದಲ್ಲಿ ಸಮಾಜ ಸೇವಕರೂ, ಧಾರ್ಮಿಕ ಮುಂದಾಳು, ಖ್ಯಾತ ನೇತ್ರ ತಜ್ಞ ಡಾ.ಅನಂತ ಕಾಮತ್ ಅವರನ್ನು ಸ್ವಾಮೀಜಿಯವರು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿ ಸಮ್ಮಾನಿಸಿದರು.
ಕಾರ್ಯಕ್ರಮದಲ್ಲಿ ರಂಗಚಿನ್ನಾರಿ ಉಪಾಧ್ಯಕ್ಷ ಎಸ್.ಜೆ.ಪ್ರಸಾದ್, ಹಿರಿಯ ಪತ್ರಕರ್ತ ಬಾ.ನಾ.ಸುಬ್ರಹ್ಮಣ್ಯ ಬೆಂಗಳೂರು ಅವರು ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ರಂಗಚಿನ್ನಾರಿ ನಿರ್ದೇಶಕರಾದ ಕೋಳಾರು ಸತೀಶ್ಚಂದ್ರ ಭಂಡಾರಿ, ಮನೋಹರ ಶೆಟ್ಟಿ ಹಾಗು ಜನಾರ್ದನ ಮೊದಲಾದವರು ಉಪಸ್ಥಿತರಿದ್ದರು. ರಂಗಚಿನ್ನಾರಿ ಸಂಸ್ಥೆಯ ನಿರ್ದೇಶಕ ಕಾಸರಗೋಡು ಚಿನ್ನಾ ಅವರು ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು.
ಡಾ.ಅನಂತ ಕಾಮತ್ ಕಾಸರಗೋಡಿನ ಶಕ್ತಿ : ಎಡನೀರು ಶ್ರೀ
0
ಮಾರ್ಚ್ 23, 2023