ಕುಂಬಳೆ: ಕುಂಬಳೆ ಬಸ್ ನಿಲ್ದಾಣ ವಠಾರದಲ್ಲಿ ವಿದ್ಯಾರ್ಥಿಗಳ ಎರಡು ತಂಡಗಳು ಪರಸ್ಪರ ಹೊಡೆದಾಡಿಕೊಂಡಿದ್ದು, ಪೊಲೀಸರು ಲಘು ಲಾಟಿಪ್ರಹಾರ ನಡೆಸಿ ಚದುರಿಸಿದರು. ಕುಂಬಳೆಯ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳು ಕಳೆದ ಹಲವು ತಿಂಗಳಿಂದ ಒಂದಲ್ಲ ಒಂದು ಕಾರಣವೊಡ್ಡಿ ಪರಸ್ಪರ ಹೊಡೆದಾಡುತ್ತಿರುವುದು ಸಾಮಾನ್ಯವಾಗಿದ್ದು, ಶುಕ್ರವಾರ ಪೇಟೆಯಲ್ಲಿ ಗೂಂಡಾಗಳ ರೀತಿಯಲ್ಲಿ ಹೊಡೆದಾಡಿಕೊಲ್ಳುವ ಮೂಲಕ ವಿದ್ಯಾರ್ಥಿ ಸಮುದಾಯಕ್ಕೆ ಅಪಚಾರವೆಸಗಿದೆ.
ಶುಕ್ರವಾರ ಎಸ್ಸೆಸೆಲ್ಸಿ ಪರೀಕ್ಷೆ ಕಳೆದು ತರಗತಿಯಿಂದ ಹೊರಬಂದ ವಿದ್ಯಾರ್ಥಿಗಳು ಒಂಬತ್ತನೇ ತರಗತಿ ವಿದ್ಯಾರ್ಥಿಗಳೂ ಸೇರಿದಂತೆ ಪೇಟೆಯಲ್ಲಿ ಗುಂಪುಗೂಡಿ ಪರಸ್ಪರ ವಾಗ್ವಾದ ನಡೆಸಿ, ನಂತರ ಹೊಡೆದಾಡಿಕೊಂಡಿದ್ದಾರೆ. ಪರಿಸ್ಥಿತಿ ಕೈಮೀರುವುದನ್ನು ಅರಿತ ಸ್ಥಳೀಯರು ನೀಡಿದ ಮಾಹಿತಿಯನ್ವಯ ಪೊಲೀಸರು ಸ್ಥಳಕ್ಕಾಗಮಿಸಿ ಘರ್ಷಣೆಯಲ್ಲಿ ನಿರತರಾದವರನ್ನು ಲಾಟಿಪ್ರಹಾರ ನಡೆಸಿ ಚದುರಿಸಿದ್ದಾರೆ. ಹುಡುಗಿಯರ ವಿಚಾರದಲ್ಲಿ ಪರಸ್ಪರ ವಾಗ್ವಾದ ನಡೆದು, ನಂತರ ಘರ್ಷಣೆಗೆ ತಿರುಗಿತ್ತೆನ್ನಲಾಗಿದೆ. ಕೆಲವು ತಿಂಗಳ ಹಿಂದೆಯೂ ಇದೇ ರೀತಿ ವಿದ್ಯಾರ್ಥಿಗಳು ಪರಸ್ಪರ ಜಗಳವಾಡುತ್ತಾ ಬಂದಿದ್ದು, ನಂತರ ಪಿಟಿಎ, ಶಾಲಾ ಶಿಕ್ಷಕರು, ಜನಪ್ರತಿನಿಧಿಗಳು ಮಾತುಕತೆ ನಡೆಸಿ ನಿರಂತರ ಘರ್ಷಣೆಗೆ ಕಾರಣರಾಗುತ್ತಿದ್ದ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಟಿ.ಸಿ ನೀಡಿ ಹೊರ ಕಳುಹಿಸಿದ ನಂತರ ಘರ್ಷಣೆ ನಿಯಂತ್ರಣಕ್ಕೆ ಬಂದಿತ್ತು. ಈ ಬಾರಿಯೂ ಘರ್ಷಣೆಗೆ ಕಾರಣರಾದವರನ್ನು ಟಿ.ಸಿ ನೀಡಿ ಶಾಲೆಯಿಂದ ಹೊರ ಕಳುಹಿಸುವ ಬಗ್ಗೆ ಶಾಲಾ ಅಧಿಖಾರಿಗಳು ಎಚ್ಚರಿಕೆ ನೀಡಿದ್ದಾರೆ. ಪೊಲೀಸರೂ ವಿದ್ಯಾರ್ಥಿಗಳ ಮೇಲೆ ನಿಗಾಯಿರಿಸಲಾರಂಭಿಸಿದ್ದಾರೆ.
ಕುಂಬಳೆ ಪೇಟೆಯಲ್ಲಿ ಮತ್ತೆ ಹೊಡೆದಾಡಿಕೊಮಡ ವಿದ್ಯಾರ್ಥಿಗಳ ತಂಡ-ಲಘು ಲಾಟಿ ಪ್ರಹಾರ
0
ಮಾರ್ಚ್ 18, 2023