ಕುಂಬಳೆ: ಕುಂಬಳೆ ಮುಳ್ಳೇರಿಯ ರಸ್ತೆ ನವೀಕರಣದ ಭಾಗವಾಗಿ ಸೀತಾಂಗೋಳಿ ಪೇಟೆಯಲ್ಲಿ ನಡೆಯುತ್ತಿರುವ ಕಾಮಗಾರಿಯ ನ್ಯೂನತೆಗಳನ್ನು ಸರಿಪಡಿಸಬೇಕೆಂದು ಆಗ್ರಹಿಸಿ ಸೀತಾಂಗೋಳಿಯಲ್ಲಿ ಸಭೆ ನಡೆಸಲಾಯಿತು. ಇಲ್ಲಿನ ಸಂತೋಷ್ ಆಟ್ರ್ಸ್ ಮತ್ತು ಸ್ಪೋಟ್ರ್ಸ್ ಕ್ಲಬ್ಬಿನ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕ್ಲಬ್ಬಿನ ಅಧ್ಯಕ್ಷ ವಕೀಲ ಥೋಮಸ್ ಡಿಸೋಜ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಾರ್ಡು ಸದಸ್ಯೆ ಕಾವ್ಯಶ್ರೀ, ಸ್ಥಳೀಯರಾದ ರವೀಂದ್ರ, ಮಥಾಯಿಸ್ ಡಿಸೋಜ ಉಪಸ್ಥಿತರಿದ್ದರು. ಹೊಸ ರಸ್ತೆಯನ್ನು ಅಗಲಗೊಳಿಸಿದ್ದು, ಆದರೆ ಅಲ್ಲೇ ಇರುವ ಸೇತುವೆ ಕೇವಲ 6 ಮೀಟರ್ ಮಾತ್ರ ಅಗಲವಿದೆ, ಈಗಾಗಲೇ ಇರುವ ಚರಂಡಿಯನ್ನು ಮುಚ್ಚಲಾಗಿದ್ದು, ಮುಂದೆ ನೀರಿನ ಸಂಚಾರಕ್ಕೆ ಸರಿಯಾದ ವ್ಯವಸ್ಥೆಯನ್ನು ಮಾಡದಿದ್ದಲ್ಲಿ ಸೀತಾಂಗೋಳಿ ಪೇಟೆ ಮುಳುಗಡೆಯಾಗಲಿದೆ, ಇಲ್ಲಿನ ಪ್ರಧಾನ ವೃತ್ತ ತೆಗೆಯಲಾಗಿದ್ದು, ವ್ಯವಸ್ಥೆಯನ್ನು ಸರಿಪಡಿಸಬೇಕು, ದಾರಿದೀಪದ ವ್ಯವಸ್ಥೆ, ರಸ್ತೆ ವಿಭಾಜಕ ಮತ್ತು ಪಾದಚಾರಿಗಳಿಗೆ ಅಡ್ಡ ದಾಟುವ ಮಾರ್ಗಸೂಚಿಯನ್ನು ಮಾಡಬೇಕು, ಪಶ್ಚಿಮ ಭಾಗಕ್ಕೆ ಚರಂಡಿ ವ್ಯವಸ್ಥೆ ಆಗಬೇಕು, ರಸ್ತೆಯ ಬದಿಯಲ್ಲಿ ಪಾದಚಾರಿಗಳಿಗೆ ವ್ಯವಸ್ಥೆ ಮೊದಲಾದ ಬೇಡಿಕೆಯನ್ನು ಈಡೇರಿಸಬೇಕೆಂದು ಆಗ್ರಹಿಸಲಾಯಿತು. ಮಹಾಲಿಂಗ ಕುಮಾರಮಂಗಲ ಸ್ವಾಗತಿಸಿ, ಅಪ್ಪಣ್ಣ ಸೀತಾಂಗೋಳಿ ವಂದಿಸಿದರು.
ಸೀತಾಂಗೋಳಿ ಪೇಟೆಯ ವ್ಯವಸ್ಥೆ ಸರಿಪಡಿಸಲು ಆಗ್ರಹ
0
ಮಾರ್ಚ್ 30, 2023
Tags