ಬದಿಯಡ್ಕ : ಅಗಲ್ಪಾಡಿಯ ಅನ್ನಪೂಣೇಶ್ವರಿ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಏಪ್ರಿಲ್ 3ರಂದು ಬೆಳಗ್ಗೆ 9.30ರಿಂದ 2 ದಿನಗಳ ಕಾಲ ಆ ಶಾಲೆಯ ಮಕ್ಕಳಿಗಾಗಿ ಚಿಲಿಪಿಲಿ ಮಕ್ಕಳ ಶಿಬಿರವು ನಡೆಯಲಿದೆ. ಕುಂಬ್ಡಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಮೀದ್ ಪೊಸೋಳಿಗೆ ಉದ್ಘಾಟಿಸುವರು. ಶಾಲಾ ಪಿಟಿಎ ಅಧ್ಯಕ್ಷ ರವಿಕಾಂತ್ ಅಧ್ಯಕ್ಷತೆ ವಹಿಸುವರು. ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕ ಸತ್ಯನಾರಾಯಣ ಭಟ್, ಕುಂಬ್ಡಾಜೆ ಗ್ರಾಪಂ ಶೈಕ್ಷಣಿಕ ಸ್ಥಾಯಿ ಸಮಿತಿ ಅಧ್ಯಕ್ಷ ಸಂಜೀವ ಶೆಟ್ಟಿ, ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿ ಶಶಿಧರ, ಬಿಪಿಒ ಜಯರಾಮ್, ಹರೀಶ್ ಗೋಸಾಡ, ಪ್ರಕಾಶ, ನಾರಾಯಣ ಶರ್ಮ, ರವಿಕಲಾ, ಅಂಕಿತ ಎಂ ಭಾಗವಹಿಸುವರು. ನಂತರ ನಿವೃತ್ತ ಶಿಕ್ಷಕ ನಿರ್ಮಲ್ ಕುಮಾರ್ ಅವರಿಂದ ಪ್ರಚೋದನಾ ತರಬೇತಿ, ಸುಭಾಷ್ ಪಾಂಡಿ ಇವರಿಂದ ಥಿಯೆಟರ್ ಗೇಮ್ಸ್, ಶಿಕ್ಷಕಿ ಅನಿತಾ ಮಜಕ್ಕಾರು ಅವರಿಂದ ವೃತ್ತಿ ತರಬೇತಿ, ರಾಜೇಶ್ ಎಸ್ ಉಬ್ರಂಗಳ ಅವರಿಂದ ಆಕಾಶ ವೀಕ್ಷಣೆ ನಡೆಯಲಿದೆ. ರಾತ್ರಿ ನಡೆಯುವ ಶಿಬಿರಾಗ್ನಿ ಕಾರ್ಯಕ್ರಮವನ್ನು ಉಬ್ರಂಗಳ ಅಚ್ಯುತ ಮಣಿಯಾಣಿ ಉದ್ಘಾಟಿಸುವರು. ಎ.4ರಂದು ಶ್ರೀಧರ ಭಟ್ ಕುದಿಂಗಿಲ ಅವರಿಂದ ಯೋಗಾಭ್ಯಾಸ, ರಾಜು ಕಿದೂರು ಅವರಿಂದ ಪಕ್ಷಿ ವೀಕ್ಷಣೆ ಸಹಿತ ಮಾಹಿತಿ, ಉದಯ ಎಸ್ ಅವರಿಂದ ಮಾಡು - ಆಡು ತರಬೇತಿ ನಡೆಯಲಿದೆ. ಬದಿಯಡ್ಕ ಸಿವಿಲ್ ಪೊಲೀಸ್ ಅಧಿಕಾರಿ ಚಂದ್ರಕಾಂತ್ ಅವರಿಂದ ತರಬೇತಿ, ರಾಜೇಶ್ ಎಸ್ ಅವರಿಂದ ಮಧುರ ಗಣಿತ ಹಾಗೂ ವ್ಯಂಗ್ಯಚಿತ್ರಗಾರ ವಿರಾಜ್ ಅಡೂರು ಅವರಿಂದ ಗೆರೆಗಳ ಆಟ ಜರುಗಲಿದೆ. ನಂತರ ಆರೋಗ್ಯ ಅಧಿಕಾರಿಗಳಿಂದ ಆರೋಗ್ಯದ ಕುರಿತಾದ ಕಾರ್ಯಾಗಾರ ನಡೆಯಲಿದೆ. ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಪ್ರಾಂಶುಪಾಲ ಸತೀಶ್ ವೈ, ಮುಖ್ಯ ಶಿಕ್ಷಕ ಗಿರೀಶ್, ಶಿಕ್ಷಕಿ ಸೌಮ್ಯ ಭಾಗವಹಿಸುವರು.
ಅಗಲ್ಪಾಡಿಯಲ್ಲಿ ಚಿಲಿಪಿಲಿ ಮಕ್ಕಳ ಶಿಬಿರ
0
ಮಾರ್ಚ್ 31, 2023
Tags