ಬದಿಯಡ್ಕ: ಬದಿಯಡ್ಕ ಪಂಚಾಯತಿ ಬಂಟರ ಸಂಘದ ಮಹಾಸಭೆ ಕುಂಬಳೆ ಫಿರ್ಕಾ ಕಚೇರಿ ಬದಿಯಡ್ಕದಲ್ಲಿ ಜರಗಿತು. ಬದಿಯಡ್ಕ ಬಂಟ್ಸ್ ಸರ್ವೀಸ್ ಸೊಸೈಟಿಯ ಅಧ್ಯಕ್ಷ ರವೀಂದ್ರನಾಥ ಶೆಟ್ಟಿ ವಳಮಲೆ ವಹಿಸಿದರು. ಜಿಲ್ಲಾ ಬಂಟರ ಸಂಘದ ಉಪಾಧ್ಯಕ್ಷ ಪಿ.ಜಿ. ಚಂದ್ರಹಾಸ ರೈ, ಕುಂಬಳೆ ಫಿರ್ಕಾ ಅಧ್ಯಕ್ಷ ಪದ್ಮನಾಭ ಶೆಟ್ಟಿ ವಳಮಲೆ,ಕಾರ್ಯದರ್ಶಿ ಅಶೋಕ್ ರೈ ಕೊರೆಕ್ಕಾನ ಶುಭ ಹಾರೈಸಿದರು. ಕಾರ್ಯದರ್ಶಿ ನಿರಂಜನ ರೈ ಪೆರಡಾಲ ಸ್ವಾಗತಿಸಿದರು, ವಾರ್ಷಿಕ ವರದಿ, ಲೆಕ್ಕಪತ್ರ ಮಂಡನೆ ನಡೆಯಿತು. ದಯಾನಂದ ರೈ ಪ್ರಾರ್ಥನೆ ಮಾಡಿದರು.. ಜಿಲ್ಲಾ ಸಂಘದ ಸದಸ್ಯ ಕೃಷ್ಣ ಪ್ರಸಾದ್ ರೈ,ಪಂಚಾಯತಿ ಸಮಿತಿ ಉಪಾಧ್ಯಕ್ಷ ಜಗನ್ನಾಥ ರೈ ಕೊರೆಕ್ಕಾನ, ಜಯಶಂಕರ್ ರೈ ಬೇಳ, ಕೋಶಾಧಿಕಾರಿ ಪ್ರಭಾಕರ ರೈ ಮೇಗಿನ ಕಡಾರ್, ಜತೆ ಕಾರ್ಯದರ್ಶಿ ಗಿರೀಶ್ ರೈ ವಳಮಲೆ, ದಯಾನಂದ ರೈ ಮೇಗಿನ ಕಾಡರ್, ಕಾರ್ಯಕಾರಿ ಸಮಿತಿ ಸದಸ್ಯರು ,ಸರ್ವ ಸದಸ್ಯರು ಉಪಸ್ಥಿತರಿದ್ದರು. ಮುಂದಿನ ಮೂರು ವರ್ಷದ ಅವಧಿಗೆ ನೂತನ ಸಮಿತಿ ರೂಪಿಕರಿಸಲಾಯಿತು.
ಅಧ್ಯಕ್ಷರಾಗಿ ನಿರಂಜನ ರೈ ಪೆರಡಾಲ, ಪ್ರಧಾನ ಕಾರ್ಯದರ್ಶಿಯಾಗಿ ಪ್ರದೀಪ್ ಕುಮಾರ್ ಶೆಟ್ಟಿ ಬೇಳ, ಕೋಶಾಧಿಕಾರಿಯಾಗಿ ದಯಾನಂದ ರೈ ಮೇಗಿನ ಕಡಾರ್, ಉಪಾಧ್ಯಕ್ಷರಾಗಿ ಜಗನ್ನಾಥ ರೈ ಕೊರೆಕ್ಕಾನ, ಪ್ರಭಾಕರ ರೈ ಮೇಗಿನ ಕಡಾರ್, ಜತೆ ಕಾರ್ಯದರ್ಶಿಯಾಗಿ ಜಯಶಂಕರ್ ರೈ ಬೇಳ, ಸಂತೋμï ರೈ ಆಯ್ಕೆಯಾದರು. ಮುಂದಿನ ಕಾರ್ಯ ಚಟುವಟಿಕೆ ಮತ್ತು ಸಂಘದ ಸದಸ್ಯತನ ಊರ್ಜಿತಗೊಳಿಸಲು ತೀರ್ಮಾನಿಸಲಾಯಿತು.
ಬದಿಯಡ್ಕ ಪಂಚಾಯತಿ ಬಂಟ್ಸ್ ಸರ್ವಿಸ್ ಸೊಸೈಟಿಯ ಮಹಾಸಭೆ
0
ಮಾರ್ಚ್ 20, 2023
Tags