ನವದೆಹಲಿ: ವಿಕಲಚೇತನರಿಗೆ ಹೆಚ್ಚಿನ ಆದ್ಯತೆ ನೀಡುವ ಉದ್ದೇಶದಿಂದ ಸುಪ್ರೀಂ ಕೋರ್ಟ್ ಕೊಲಿಜಿಯಂ ಗುರುವಾರ ಗುಜರಾತ್ ಹೈಕೋರ್ಟ್‌ನ ನ್ಯಾಯಾಧೀಶರಾಗಿ ವಿಕಲಚೇತನ ವಕೀಲ ಮೋಕ್ಸಾ ಕಿರಣ್ ಠಕ್ಕರ್ ಅವರ ಹೆಸರನ್ನು ಶಿಫಾರಸು ಮಾಡಿದೆ.
ವಕೀಲ ದೇವನ್ ದೇಸಾಯಿ ಅವರನ್ನು ಸಹ ಗುಜರಾತ್ ಹೈಕೋರ್ಟ್‌ನ ನ್ಯಾಯಾಧೀಶರನ್ನಾಗಿ ನೇಮಕ ಮಾಡುವಂತೆ ಕೊಲಿಜಿಯಂ ಶಿಫಾರಸು ಮಾಡಿದೆ.
ಪ್ರತ್ಯೇಕ ನಿರ್ಣಯದಲ್ಲಿ, ಕೊಲಿಜಿಯಂ ಪರಿಶಿಷ್ಟ ಪಂಗಡದ ವಕೀಲ ಕಾರ್ಡಕ್ ಈಟೆ ಅವರನ್ನು ಗುವಾಹಟಿ ಹೈಕೋರ್ಟ್ ನ್ಯಾಯಾಧೀಶರನ್ನಾಗಿ ನೇಮಕ ಮಾಡಲು ಶಿಫಾರಸು ಮಾಡಿದೆ.