ಕುಂಬಳೆ: ಕಳತ್ತೂರು ಸನಿಹದ ಮುನ್ನೂರು ನಿವಾಸಿ ವೆಂಕಟ್ರಮಣ ಭಟ್(73) ಗುರುವಾರ ನಿಧನರಾದರು. ನಾಟಕ ಕಲಾವಿದರಾಗಿದ್ದ ಇವರು, ಸ್ತ್ರೀವೇಷಧಾರಿಯಾಗಿ ಖ್ಯಾತಿ ಗಳಿಸಿದ್ದರು. ವರ್ಷಗಳ ಹಿಂದೆ ರಚನೆಯಾಗಿರುವ ಕಳತ್ತೂರಿನ ಮಯೂರ ನಾಟಕ ತಂಡದ ಸ್ಥಾಪಕ ಸದಸ್ಯರಾಗಿದ್ದರು. ಇತ್ತೀಚಿನ ಕೆಲವು ವರ್ಷಗಳಿಂದ ಮಂಗಳೂರಿನಲ್ಲಿ ವಾಸಿಸುತ್ತಿದ್ದರು. ಅವರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.
ನಾಟಕ ಕಲಾವಿದ ವೆಂಕಟ್ರಮಣ ಭಟ್ ನಿಧನ
0
ಮಾರ್ಚ್ 31, 2023