ಸಮರಸ ಚಿತ್ರಸುದ್ದಿ: ಮಧೂರು: ಬಂಟರ ಸಂಘ ಮಧೂರು ಪಂಚಾಯಿತಿ ಸಮಿತಿಗಾಗಿ ಪಂಚಾಯಿತಿಯ ಪರಕ್ಕಿಲದಲ್ಲಿ ಖರೀದಿಸಿದ ಜಾಗದಲ್ಲಿ ಕಟ್ಟಡ ನಿರ್ಮಾಣಕ್ಕಾಗಿ ಭೂಮಿಪೂಜೆ ನೆರವೇರಿಸಲಾಯಿತು. ಶಿಲ್ಪಿ ಜನಾರ್ದನ ಆಚಾರ್ಯ ನೇತೃತ್ವದ ವಹಿಸಿದ್ದರು. ಘಟಕ ಅಧ್ಯಕ್ಷ ರಾಮಕೃಷ್ಣ ಆಲ್ವ ಗಂಗೆರಸ್ತೆ ಹಾಗೂ ಪ್ರಧಾನ ಕಾರ್ಯದರ್ಶಿ ಗಣೇಶ ರೈ ಶಿಲಾನ್ಯಸ ನಡೆಸಿದರು. ಘಟಕ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.