ಕುಂಬಳೆ: ಕುಡಾಲು ಮೇರ್ಕಳ ಗ್ರಾಮದ ಚನ್ನಿಕುಡೇಲು ಶ್ರೀನಾಗಬ್ರಹ್ಮ ಮಲರಾಯಿ ಮತ್ತು ಪರಿವಾರ ದೈವಗಳ ಮೂಲಸ್ಥಾನದ ಚನ್ನಿಕುಡೇಲು ತರವಾಡಿನಲ್ಲಿ ನಿರ್ಮಿಸಿದ ನೂತನ ಶಾಶ್ವತ ಚಪ್ಪರದ ಲೋಕಾರ್ಪಣೆ ಕಾರ್ಯಕ್ರಮ ಜರಗಿತು. ಎಡನೀರು ಮಠದ ಶ್ರೀಶ್ರೀಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಉದ್ಘಾಟಿಸಿದರು.
ಬಳಿಕ ಸಭೆಯನ್ನದ್ದೇಶಿಸಿ ಮಾತನಾಡುತ್ತಾ "ದೈವ ಭಕ್ತಿ ಹಾಗೂ ಜನ ಪ್ರೀತಿ ಎಂತಹ ಮಹತ್ಕಾರ್ಯಕ್ಕೂ ಅಡಿಪಾಯವಾಗುತ್ತದೆ. ಈ ನಿಟ್ಟಿನಲ್ಲಿ ಇಲ್ಲಿ ಕನಿಷ್ಠ ವರ್ಷದೊಳಗೆ ಜನರ ಸಹಕಾರದೊಂದಿಗೆ ನಿರ್ಮಾಣಗೊಂಡ ಶಾಶ್ವತ ಚಪ್ಪರದ ಕೆಲಸ ಕಾರ್ಯಗಳು ಈ ತರವಾಡಿನ ಐಕ್ಯತೆ ಹಾಗೂ ಅಭಿವೃದ್ಧಿಗೆ ಆದರ್ಶಮಯವಾಗಿದೆ ಎಂದು ಆಶೀರ್ವಚನವಿತ್ತರು.
ಮಾಣಿಲ ಶ್ರೀಧಾಮದ ಶ್ರೀಶ್ರೀಮೋಹನದಾಸ ಪರಮಹಂಸ ಸ್ವಾಮೀಜಿ ಅನುಗ್ರಹ ನುಡಿಯನ್ನಾಡಿದರು. ತರವಾಡು ಸಮಿತಿ ಅಧ್ಯಕ್ಷ ಚೆನ್ನಪ್ಪ ಕುಲಾಲ್ ಎರುಗಲ್ಲು ಸಭೆಯ ಅಧ್ಯಕ್ಷತೆವಹಿಸಿದ್ದರು. ಬಾಕ್ರಬೈಲ್ ಧರ್ಮಚಾವಡಿ ಶ್ರೀಮಲರಾಯಿ ಮೂಲ ಮಲಾರ್ ಬ್ರಹ್ಮಸ್ಥಾನದ ಆಡಳಿತ ಮೊಕ್ತೇಸರ ಸಂತೋμï ಕುಮಾರ್ ರೈ ಮುಖ್ಯ ಅತಿಥಿಗಳಾಗಿದ್ದರು. ಈ ಸಂದರ್ಭದಲ್ಲಿ ಡಾಕ್ಟರೇಟ್ ಪಡೆದ ತರವಾಡಿನ ಪ್ರತಿಭೆಗಳಾದ ಡಾ.ವೇದಾವತಿ ಎಸ್.ಮಧೂರು, ದ್ವಿತೀಯ ಪಿಯು ಪರೀಕ್ಷೆಯಲ್ಲಿ ನಾಲ್ಕನೇ ಸ್ಥಾನ ಪಡೆದ ದೀಪ್ನಾ ಜೆ, ಅಂತರಾಷ್ಟ್ರೀಯ ಕರಾಟೆಪಟು ನಿವೇದಿತ ಕುಲಾಲ್ ಬ್ರಾಣಪಾದೆ ಅವರನ್ನು ಸನ್ಮಾನಿಸಲಾಯಿತು. ದೈವ ಚಾಕರಿಯವರಾದ ಮಾರಪ್ಪ ಪಾರೆಕೋಡಿ, ರಾಮ ನೀರ್ಚಾಲ್, ಸುರೇಶ್ ಕುಲಾಲ್ ಪರಪ್ಪು ಅವರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.ಗೋಪಾಲಕೃಷ್ಷ ಕುಲಾಲ್ ವಾಂತಿಚ್ಚಾಲು ಪ್ರಸ್ತಾವನೆಗೈದರು. ಕೃಷ್ಣ ಕಳತ್ತೂರು ಸ್ವಾಗತಿಸಿ ಶ್ರೀನಿವಾಸ ಮಾಸ್ತರ್ ಓಡಗದ್ದೆ ವಂದಿಸಿದರು. ಸುಂದರ ಕಟ್ನಡ್ಕ ನಿರೂಪಿಸಿದರು.ಈ ಸಂದರ್ಭದಲ್ಲಿ ಧಾರ್ಮಿಕ ಮುಂದಾಳು ಗೋಪಾಲಕೃಷ್ಣಕುಲಾಲ್ -ಶ್ಯಾಮಲ ದಂಪತಿಗಳು ಎಡನೀರು ಹಾಗೂ ಮಾಣಿಲ ಶ್ರೀಗಳಿಗೆ ತೈಲವರ್ಣಚಿತ್ರವನ್ನು ಸಮರ್ಪಿಸಿದರು.