ಕಾಸರಗೋಡು: ಸಾಮಾಜಿಕ ಮುಂದಾಳು, ಬಿಜೆಪಿ, ಹಿಂದೂ ಐಕ್ಯವೇದಿ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಎ. ಕರುಣಾಕರನ್ ಮಾಸ್ಟರ್ ಅವರು ರಚಿಸಿರುವ 'ಮಹಾ ಭಾರತದ ಅರ್ಜುನ'ಕೃತಿ ಬಿಡುಗಡೆ ಸಮಾರಂಭ ಮಾ 29ರಂದು ಮಧ್ಯಾಃನ 2ಗಂಟೆಗೆ ಮಲ್ಲ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಸಭಾಂಗಣದಲ್ಲಿ ಜರುಗಲಿದೆ.
ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅನುಗ್ರಹ ಭಾಷಣ ಮಾಡುವರು. ಮಲ್ಲ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಟ್ರಸ್ಟಿ ಅನೆಮಜಲ್ ವಿಷ್ಣು ಭಟ್ ಅಧ್ಯಕ್ಷತೆ ವಹಿಸುವರು. ಕೈರಳಿ ಬುಕ್ಸ್ ಪ್ರಕಟಿಸಿರುವ ಪುಸ್ತಕದ ಬಿಡುಗಡೆಯನ್ನು ಜನಭೂಮಿ ವ್ಯವಸ್ಥಾಪಕ ನಿರ್ದೇಶಕ ಎಂ ರಾಧಾಕೃಷ್ಣನ್, ಮಹಿಳಾ ಐಕ್ಯವೇದಿ ರಾಜ್ಯಾಧ್ಯಕ್ಷೆ ನಿಶಾ ಸೋಮನ್ ಅವರು ಮೊದಲ ಪುಸ್ತಕವನ್ನು ಹಸ್ತಾಂತರಿಸುವ ಮೂಲಕ ಉದ್ಘಾಟಿಸಲಿದ್ದಾರೆ. ಕೈರಳಿ ಬುಕ್ಸ್ ಸಂಪಾದಕ ಸುಕುಮಾರನ್ ಪುಸ್ತಕ ಪರಿಚಯ ಮಾಡುವರು. ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರ್, ಗೋವಿಂದನ್ ಮಾಸ್ಟರ್ ಕೊಟ್ಟೋಡಿ, ಎಂ.ಕೆ.ರಾಘವನ್ ಪಾಳ್ಗೊಳ್ಳುವರು.
ಕರುಣಾಕರನ್ ಮಾಸ್ಟರ್ ಅವರು ಆಧ್ಯಾತ್ಮಿಕ ಪ್ರವಚನದ ಮೂಲಕ ಖ್ಯಾತಿ ಗಳಿಸಿದ್ದಾರೆ. ಬೋವಿಕಾನ ಎಯುಪಿ ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿ ಸೇವೆಸಲ್ಲಿಸಿ ನಿವೃತ್ತರಾದ ನಂತರ ಧಾರ್ಮಿಕ, ಸಾಂಸ್ಕøತಿಕ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ.
'ಮಹಾ ಭಾರತದ ಅರ್ಜುನ' ನಾಳೆ ಮಲ್ಲದಲ್ಲಿ ಕೃತಿ ಬಿಡುಗಡೆ ಸಮಾರಂಭ
0
ಮಾರ್ಚ್ 27, 2023