ನವದೆಹಲಿ: 'ಕಡಲ ಪ್ರದೇಶಕ್ಕೆ ಸಂಬಂಧಿಸಿದ ಸದ್ಯದ ಸವಾಲುಗಳಿಗೆ ಸಮಾನ ಮನಸ್ಕ ದೇಶಗಳು ಒಟ್ಟುಸೇರಿ ವಿಷಯಾಧಾರಿತವಾಗಿ ಪರಿಹಾರ ಕಂಡುಕೊಳ್ಳಬೇಕು' ಎಂದು ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಆರ್. ಹರಿ ಕುಮಾರ್ ಅವರು ಶನಿವಾರ ಒತ್ತಿ ಹೇಳಿದರು.
ಪ್ರಾದೇಶಿಕ ಸಮಸ್ಯೆಗಳಿಗೆ ಪ್ರಾದೇಶಿಕವಾಗಿ ಪರಿಹಾರ ಕಂಡುಕೊಳ್ಳುವುದರಿಂದ ಆಗುವ ಪ್ರಯೋಜನಗಳನ್ನೂ ಈ ವೇಳೆ ಎತ್ತಿಹಿಡಿದರು.