ಪತ್ತನಂತಿಟ್ಟ: ಪತ್ತನಂತಿಟ್ಟ ಜಿಲ್ಲೆಯಲ್ಲಿ ಆಫ್ರಿಕನ್ ಹಂದಿ ಜ್ವರ ದೃಢಪಟ್ಟಿದೆ. ಸೀತಾತ್ ಪಂಚಾಯಿತಿ ಒಂಬತ್ತನೇ ವಾರ್ಡ್ ನ ಇಂಚಪಾರ ಎಂಬಲ್ಲಿ ಸಾಜಿ ಎಂಬ ರೈತನ ಜಮೀನಿನಲ್ಲಿ ಹಂದಿಜ್ವರ ದೃಢಪಟ್ಟಿದೆ.
ಜಮೀನಿನಲ್ಲಿ ಸಾಕಿದ್ದ 82 ಹಂದಿಗಳು ಜ್ವರದಿಂದ ಸಾವನ್ನಪ್ಪಿವೆ. ನಂತರ, ಅವರ ಜೊಲ್ಲುರಸವನ್ನು ಭೋಪಾಲ್‍ನ ಕೇಂದ್ರ ಪ್ರಯೋಗಾಲಯಕ್ಕೆ ಕಳುಹಿಸಿದಾಗ, ಅದು ಆಫ್ರಿಕನ್ ಹಂದಿ ಜ್ವರ ಎಂದು ದೃಢಪಟ್ಟಿದೆ.
ಇದೇ ಸಂದರ್ಭದಲ್ಲಿ ರೋಗ ದೃಢಪಟ್ಟಿರುವ ಒಂಬತ್ತನೇ ವಾರ್ಡ್‍ನ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಜಿಲ್ಲಾಧಿಕಾರಿ ದಿವ್ಯಾ ಎಸ್ ಅಯ್ಯರ್ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ವಿಪತ್ತು ನಿರ್ವಹಣಾ ಕಾಯ್ದೆಯಡಿ 10 ಕಿಮೀ ವ್ಯಾಪ್ತಿಯ ಪ್ರದೇಶಕ್ಕೆ ಹಂದಿಗಳನ್ನು ಸಾಗಿಸುವುದು ಅಥವಾ ತರುವುದನ್ನು ಮೂರು ತಿಂಗಳವರೆಗೆ ನಿμÉೀಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು. ಈ ಪ್ರದೇಶದಲ್ಲಿ ಹಂದಿ ಮಾಂಸ ಮಾರಾಟಕ್ಕೂ ತಾತ್ಕಾಲಿಕ ನಿμÉೀಧ ಹೇರಲಾಗಿದೆ. ಜನರ ಓಡಾಟವನ್ನು ನಿಯಂತ್ರಿಸಲು ನಿರ್ದೇಶನವನ್ನೂ ನೀಡಲಾಗಿದೆ.
ಪತ್ತನಂತಿಟ್ಟದಲ್ಲಿ ಆಫ್ರಿಕನ್ ಹಂದಿ ಜ್ವರ; ಎಚ್ಚರಿಕೆ ನೀಡಿದ ಜಿಲ್ಲಾಧಿಕಾರಿ
0
ಮಾರ್ಚ್ 14, 2023
Tags